ಪಡುಬಿದ್ರಿ ಮುಖ್ಯ ಪೇಟೆಯಲ್ಲೇ ಸರಣಿ ಕಳ್ಳತನ
ಪಡುಬಿದ್ರಿ ಪೊಲೀಸ್ ಠಾಣೆಯ ನೂರು ಮೀಟರ್ ಅಂತರ, ಪೇಟೆಭಾಗದ ಪೊಲೀಸ್ ವಾಹನ ತಪಾಸಣಾ ಸ್ಥಳಕ್ಕೆ ಇಪ್ಪತ್ತು ಮೀಟರ್ ಅಂತರದಲ್ಲಿರುವ ಆರು ಅಂಗಡಿಗಳಲ್ಲಿ ಕಳ್ಳರು ಕೈಚಳಕ ತೋರಿಸುವ ಮೂಲಕ ಸರಣಿ ಕಳ್ಳತನ ನಡೆಸಿದ್ದಾರೆ.
ಪೊಲೀಸರಿಗೆ ಸವಾಲಾದ ಈ ಕಳ್ಳತನ ಪ್ರಕರಣ ಭೇದಿಸಲು ಪೊಲೀಸರು ಸಿಸಿ ಕ್ಯಾಮಾರಗಳ ಮೊರೆ ಹೋಗಿದ್ದಾರೆ. ಕಳ್ಳತನ ನಡೆದ ಎರಡು ಅಂಗಡಿಗಳ ಅಂಚು ತೆಗೆದು ಒಳ ನುಗ್ಗಿದರೆ, ಉಳಿದ ಹಣ್ಣು ಹಂಪಲು, ಕಬ್ಬಿನ ಜ್ಯೂಸ್, ತರಕಾರಿ, ಹೂವಿನಂಗಡಿ ಇವುಗಳಿಗೆ ಭದ್ರತೆ ಇಲ್ಲದೆ ಟರ್ಪಲು ಮುಚ್ಚಿ ಹೋಗುತ್ತಿದ್ದರಿಂದ ಕಳ್ಳರಿಗೆ ವರದಾನವಾಗಿದೆ. ಹಣ್ಣು ಮಾರಾಟದಂಗಡಿಯಲ್ಲಿದ್ದ 17,000 ರೂಪಾಯಿ ಕಳ್ಖರ ಪಾಲಾಗಿದೆ. ಕಳವು ಮಾಡಿದ್ದು ಮಾತ್ರವಲ್ಲ ಅಂಗಡಿ ಒಳಭಾಗದಲ್ಲೇ ಮಲಮೂತ್ರ ಮಾಡಿ ಸಣ್ಣ ಟಾರ್ಚ್ ಒಂದನ್ನು ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಂಗಡಿಯೊಂದರಲ್ಲಿ ಸಿಸಿ ಕ್ಯಾಮಾರ ಇದ್ದರೂ ಕಳ್ಳತನದ ವೇಳೆ ಬಂದ್ ಮಾಡಲಾಗಿತ್ತು ಎನ್ನಲಾಗಿದೆ.