ಶ್ರೀನಿವಾಸ್ ವಿವಿಯಲ್ಲಿ ಕೋವಿಡ್ ಲಸಿಕಾ ಶಿಬಿರ
ಮಂಗಳೂರು: ನಗರದ ಶ್ರೀನಿವಾಸ್ ವಿಶ್ವವಿದ್ಯಾಲಯ, ಸಿಟಿ ಕ್ಯಾಂಪಸ್ ಪಾಂಡೇಶ್ವರದಲ್ಲಿ ದ.ಕ. ಜಿಲ್ಲಾ ಆರೋಗ್ಯ ಕೇಂದ್ರ, ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ, ಕ್ಯಾಂಪಸ್ನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಭೋದಕೇತರ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡುವ ಶಿಬಿರ ಜರಗಿತು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಐತಾಳ್ ಕೋವಿಡ್ ವಾರಿಯರ್ಸ್ಗಳನ್ನು ಈ ಸಂದರ್ಭ ಅಭಿನಂದಿಸಿದರು.ಈ ಶಿಬಿರದಲ್ಲಿ ಒಟ್ಟು 700 ಮಂದಿಗೆ ಲಸಿಕೆ ನೀಡಲಾಯಿತು.
ಈ ವೇಳೆ ಶ್ರೀನಿವಾಸ್ ಯೂನಿವರ್ಸಿಟಿಯ ಚೀಫ್ ಮೆಡಿಕಲ್ ಆಫೀಸರ್ ಹಾಗೂ ಪ್ರಸ್ತುತ ವೆನ್ಲೋಕ್ ಜಿಲ್ಲಾ ಆಸ್ಪತ್ರೆಯ ಕೋವಿಡ್ ಚೀಫ್ ಮೆಡಿಕಲ್ ನೋಡಲ್, & ಸಾರ್ವಜನಿಕ ಸಂಪರ್ಕ ವೈದ್ಯಾಧಿಕಾರಿ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ತಾಲೂಕು ಆರೋಗ್ಯಾಧಿಕಾರಿ ಸುಜಯ್, ಜ್ಯೋತಿ, ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಸುರೇಖಾ, ಸುಪ್ರಿತ, ವಿಜಯ್, ವಿದ್ಯಾ ಹಾಗೂ ರೇವಂತ್ , ಕಾಲೇಜಿನ ನೋಡಲ್ ಅಧಿಕಾರಿ ಪ್ರೊ. ನೆಲ್ಸನ್ ಪಿರೇರಾ, ವಿವಿಧ ಕಾಲೇಜಿನ ಡೀನ್ಗಳು, ಭೋದಕ – ಭೋದಕೇತರ ಸಿಬ್ಬಂಧಿಗಳು, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.