ಜೀವನಬಿಮಾ ನಗರ ಭೀಮ ಆಗಿದ್ದು ಎಂತು?

ಬೆಂಗಳೂರಿನ ದೊಮ್ಮಲೂರಿನ ಜೀವನಭೀಮನಗರಕ್ಕೆ ಹೋಗುಬ ಬಸ್ಸು ನೋಡಿರುತ್ತೀರಿ. ಹೆಸರು ಹಲಗೆ, ಬಾಯಿ ಮಾತಲ್ಲೂ ಜೀವನಭೀಮನಗರ ಕೇಳಿರುತ್ತೀರಿ. ಆದರೆ ಇದು ಜೀವನಬಿಮಾ ನಗರ. ನಾವು ವಿಮೆ ಎನ್ನುವುದೇ ಬಡಗಣ ಭಾರತದ ಬಿಮಾ.

ಪೀಣ್ಯದಲ್ಲಿ ಎಂಟನೆಯ ಮೈಲಿ ಇದೆ. ಬಿಎಂಟಿಸಿ ಕನ್ನಡದಲ್ಲಿ ಮೈಲಿ ಎಂದು ಸರಿ ತೋರಿಸಿದರೂ ಇಂಗ್ಲಿಷಿನಲ್ಲಿ mile ಬದಲು ಮೇಲ್ (mail) ಎಂದು ತಪ್ಪು ತೋರಿಸುತ್ತದೆ.
ಬೆಂಗಳೂರಿನ ಸಾಲು ಐಯ್ಯಂಗಾರ್ ತಪ್ಪು ಫಲಕಗಳಿಗೆ ಜೊತೆಯಾಗಿ ಕೆಲವು ಐಯ್ಯರ್ ಮೆಸ್ ಇತ್ಯಾದಿ ಸಿಗುತ್ತವೆ. ಇದು ಅಯ್ಯರ್ ಆಗಬೇಕು, ಐಯರ್‌ ಓಕೆ, ಐಯ್ಯರ್ ತಪ್ಪು.

ಕಬ್ಬನ್ ಉದ್ಯಾನದ ಈ ಫಲಕ ನೋಡಿ. ಇದರಲ್ಲಿ ದುಪ್ಪಟ್ಟು ತಪ್ಪು ಇದೆ. ಇದನ್ನು ನಿಶ್ಶಬ್ದ, ನಿಶಬ್ದ ಎಂದು ಬರೆದಿದ್ದರೆ ಸರಿ ಇರುತ್ತಿತ್ತು. ಆದರೆ ಇಲ್ಲಿ ಯ ಒತ್ತು ಮತ್ತು ಧ ದೊಡ್ಡಕ್ಷರ ಒತ್ತು ಎರಡೂ ಸೇರಿ ನಿಶ್ಯಬ್ಧ ಎಂದು ಬರೆದಿರುವುದು ದೊಡ್ಡ ತಪ್ಪು ಮಾತ್ರವಲ್ಲ ದುಪ್ಪಟ್ಟು ತಪ್ಪು.

Related Posts

Leave a Reply

Your email address will not be published.