ಬಿಸಿ ಮಟ್ಟದಿಂದಾಗಿ ಜಗತ್ತು ಹತಾಶೆ, ವಿನಾಶದತ್ತ ಸಾಗಿದೆ
2023ರಲ್ಲಿ ಜಗತ್ತಿನ ತಾಪಮಾನವು ಜಾಗತಿಕ ದಾಖಲೆ ಬರೆದಿದೆ. ಅತಿರೇಕದ ಹವಾಮಾನದ ವೈಪರೀತ್ಯಗಳು ಲೋಕವನ್ನು ವಿನಾಶ ಮತ್ತು ಹತಾಶೆಗೆ ದೂಡಿದೆ ಎಂದು ವಿಶ್ವ ಸಂಸ್ಥೆಯ ಹವಾಮಾನ ವಿಭಾಗದ ಮುಖ್ಯಸ್ಥ ಪ್ಯಾಟೆರಿ ಟಾಲನ್ ಹೇಳಿದರು.
2023ರಲ್ಲಿ ಪ್ರಪಂಚದ ಬಿಸಿ ಮಟ್ಟವು ಹಿಂದಿನೆಲ್ಲ ದಾಖಲೆಗಳನ್ನು ಮುರಿದಿದೆ. ಹಸಿರು ಮನೆ ಅನಿಲದ ಪ್ರಮಾಣ ಅತಿಯಾಗಿದೆ. ಅಂಟಾರ್ಕ್ಟಿಕ್‌ನಲ್ಲಿ ಹೊಸದಾಗಿ ಬೀಳುವ ಮಂಜು ಪ್ರಮಾಣ ತೀರಾ ಕಡಿಮೆ ಆಗಿದೆ. ಕಳೆದ 9 ವರುಷಗಳಿಂದ ಬಿಸಿ ಮಟ್ಟ ಏರುತ್ತ ಸಾಗಿದೆ. ಪ್ಯಾರಿಸ್ ಒಪ್ಪಂದ ಜಾರಿಗೊಳಿಸಲು ಸದಸ್ಯ ದೇಶಗಳು ಹೆಚ್ಚು ಶ್ರಮ ಹಾಕಿಲ್ಲ. 20ನೇ ಶತಮಾನದ ಹವಾಮಾನ ಮತ್ತೆ ತರಲಾಗದು. ಆದರೆ ತಾಪಮಾನ ಹತೋಟಿ ಮಾಡದಿದ್ದರೆ ಭೂಮಿಯ ಉಳಿವು, ಬಾಳು ದುಸ್ಸರ ಆಗಲಿದೆ ಎಂದು ಅವರು ಹೇಳಿದರು.