Home 2022 December (Page 2)

ಎಐಟಿಯುಸಿ ರಾಷ್ಟ್ರೀಯ ಮಂಡಳಿಗೆ ವಿ.ಎಸ್.ಬೇರಿಂಜ ಆಯ್ಕೆ

ಮಂಗಳೂರು. ಸ್ವಾತಂತ್ರ್ಯಾಪೂರ್ವದ 1920 ರಲ್ಲಿ ಸಂಘಟಿತಗೊಂಡ ದೇಶದ ಪ್ರಪ್ರಥಮ ಕಾರ್ಮಿಕ ಸಂಘಟನೆಯಾದ ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ ರಾಷ್ಟ್ರೀಯ ಮಂಡಳಿಗೆ ಎಐಟಿಯುಸಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರೂ, ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಮಂಗಳೂರಿನ ವಿ.ಎಸ್. ಬೇರಿಂಜ ಆಯ್ಕೆಯಾಗಿದ್ದಾರೆ. 2022 ಡಿಸೆಂಬರ್ 16 ರಿಂದ 20 ರವರೆಗೆ

ಆಭರಣ ಜ್ಯುವೆಲ್ಲರ್ಸ್‌ನ ಜಾಹೀರಾತುವಿನ ಮಾಡೆಲ್ ಆಗಿ ಕಂಬಳದ ಶ್ರೀನಿವಾಸ್ ಗೌಡ

ಕಂಬಳದ ದಾಖಲೆಯ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ್ ಗೌಡ ಚಿನ್ನಾಭರಣಗಳ ಜಾಹೀರಾತುವಿನ ಮಾಡೆಲ್ ಆಗಿ ಮಿಂಚಿದ್ದಾರೆ. ಚಿನ್ನಾಭರಣ ಕಂಪನಿ ತುಳುನಾಡಿನ ಜಾನಪದೀಯ ಆಚರಣೆ ಕಂಬಳ ಓಟಗಾರ ಶ್ರೀನಿವಾಸ್ ಗೌಡನನ್ನು ತಮ್ಮ ಬ್ರಾಂಡ್‌ನ ರಾಯಭಾರಿ ಆಗಿ ಗುರುತಿಸಿದ್ದು, ಕರಾವಳಿಯೆಲ್ಲೆಡೆ ಕಂಪೆನಿಯ ನೂತನ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಸಿರು ಕಾನನದ ನಡುವೆ

ಪಡಿಲ್ ಗೇಟ್ ಉದ್ಘಾಟನೆ ; ಮಂಗಳೂರು ಬೆಳವಣಿಗೆ ಹೊಸ ಕೊಡುಗೆ : ಶಾಸಕ ವೇದವ್ಯಾಸ ಕಾಮತ್

ಮಂಗಳೂರು : ನಗರದ ಪಡಿಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಪಡಿಲ್ ಗೇಟ್’ ಕಮರ್ಷಿಯಲ್ ಸೆಂಟರ್ ನ ಉದ್ಘಾಟನೆ ಹಾಗೂ ಇಲ್ಲಿ ಆಯೋಜಿಸಲಾಗಿರುವ ಡಿಸ್ಕೌಂಟ್ ಮೇಳದ ಉದ್ಘಾಟನೆ ಶುಕ್ರವಾರ ನೆರವೇರಿತು. ಪಡಿಲ್ ಗೇಟ್ ಕಮರ್ಷಿಯಲ್ ಸೆಂಟರನ್ನು ಮಂಗಳೂರು ಮೇಯರ್ ಜಯಾನಂದ ಅಂಚನ್ ಉದ್ಘಾಟಿಸಿದರು. ಈ ಸೆಂಟರ್ ನಲ್ಲಿ ಆಯೋಜಿಸಲಾಗಿರುವ ‘ಮಂಗಳೂರು

ಮೂಡುಬಿದಿರೆ ವಕೀಲರ ಭವನ ಲೋಕಾರ್ಪಣೆ

ಮೂಡುಬಿದಿರೆ: ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಅಲ್ಲಿ ವ್ಯಾಜ್ಯಗಳು ಇರಬಾರದು, ವ್ಯಾಜ್ಯಗಳು ಕಡಿಮೆಯಾಗಬೇಕಾದರೆ ವಕೀಲರು ಬಡಜನರಿಗೆ ತ್ವರಿತಗತಿಯಲ್ಲಿ ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಹೇಳಿದರು. ದ.ಕ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ಮೂಡುಬಿದಿರೆ ವಕೀಲರ ಸಂಘದ

ಎಪ್ರಿಲ್‍ನಲ್ಲಿ ಬಿರ್ದ್ ದ ಕಂಬುಲ ತುಳು ಚಿತ್ರ ಬಿಡುಗಡೆ

ಮೂಡುಬಿದಿರೆ : ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ಮುಂದಿಟ್ಟುಕೊಂಡು ತಯಾರಾಗುತ್ತಿರುವ ಚಲನಚಿತ್ರ ತುಳುವಿನ ಬಿರ್ದ್‍ದ ಕಂಬುಲದ ಚಿತ್ರೀಕರಣವು ಮುಕ್ತಾಯದ ಹಂತದಲ್ಲಿದೆ ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹೇಳಿದರು.ಅವರು ಮಂಗಳೂರಿನ ಉರ್ವ ಮೈದಾನದಲ್ಲಿ ಬಿರ್ದ್‍ದ ಕಂಬುಲ ಚಿತ್ರೀಕರಣದ ಸಂದರ್ಭದಲ್ಲಿ ನಡೆಸಿದ

ಕುಟ್ರುಪ್ಪಾಡಿ ಗ್ರಾ.ಪಂ.ನ ಜಾಗಕ್ಕೆ ಅಗಳು ನಿರ್ಮಾಣಕ್ಕೆ ವಿರೋಧ : ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸ್ಥಗಿತಗೊಂಡ ಕಾರ್ಯಾಚರಣೆ

ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಹೊಸ್ಮಠ ಬಲ್ಯದಲ್ಲಿರುವ ಕಾಡಿಗೆ ಮನ್ನಾ ಜಾಗಕ್ಕೆ ಬೇಲಿ ನಿರ್ಮಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಅಗಳು ನಿರ್ಮಾಣಕ್ಕೆ ಮುಂದಾದಾಗ ಇಲ್ಲಿನ ಇನ್ನೊಂದು ಗುಂಪು ಅದಕ್ಕೆ ತೀವೃ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಶುಕ್ರವಾರ ಮಧ್ಯಾಹ್ನದ

ಬಾಯಿಯೇ ಆರೋಗ್ಯದ ಹೆಬ್ಬಾಗಿಲು : ಡಾ|| ಚೂಂತಾರು

ನಾವು ತಿನ್ನುವ ಎಲ್ಲಾ ಆಹಾರ ಬಾಯಿಯ ಮುಖಾಂತರವೇ ದೇಹದೊಳಗೆ ಸೇರುತ್ತದೆ. ನಮ್ಮ ಬಾಯಿಯ ಆರೋಗ್ಯ ಚೆನ್ನಾಗಿದ್ದು, ಆರೋಗ್ಯವಂತ ಹಲ್ಲುಗಳು ಇದ್ದಲ್ಲಿ, ನಾವು ತಿನ್ನುವ ಆಹಾರ ಚೆನ್ನಾಗಿ ಪಚನಗೊಂಡು ದೇಹಕ್ಕೆ ಬೇಗನೆ ಸೇರಿಕೊಂಡು ನಮ್ಮ ಆರೋಗ್ಯ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಬಾಯಿಯ ಆರೋಗ್ಯ ಕಾಪಾಡಿಕೊಂಡಲ್ಲಿ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ತನ್ನಿಂತಾನೇ

ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದಲ್ಲಿ ಉಜಿರೆಯ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು

ಉಜಿರೆ ಶ್ರೀಧ ಮಂ ಕಾಲೇಜಿನ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ಶ್ರೀ ಧರ್ಮಸ್ಥಳ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನಕ್ಕೆ ಶನಿವಾರ ಭೇಟಿ ನೀಡಿ ಪುರಾತನ ಸಾಹಿತ್ಯದ ಪರಿಕರಗಳನ್ನು ವೀಕ್ಷಿಸಿದರು.       ಸ್ವತಃ ಕೈಯಲ್ಲಿ ಮುದ್ರಿಸಲಾದ ಹಾಳೆಗಳಲ್ಲಿ ಚಿನ್ನದ ಮಿಶ್ರಣವನ್ನು ಸೇರಿಸಿ ಬರೆಯಲಾದ ಲಿಪಿಗಳನ್ನು ಹಾಗೂ ಹಿಂದಿನ ತಾಳೆಗರಿಗಳು, ಪುಸ್ತಕಗಳು ಹಾಗೂ

ಪರಿಸರದೊಂದಿಗೆ ನಮ್ಮ ಮನಸ್ಥಿತಿ ಕೂಡ ಕಲುಷಿತಗೊಳ್ಳುತ್ತಿದೆ: ಡಾ. ನರೇಂದ್ರ ರೈ ದೇರ್ಲ

ಗುರುಕೇಂದ್ರಿತವಾಗಿದ್ದ ಶಿಕ್ಷಣ ವ್ಯವಸ್ಥೆ ಇಂದು ಪೋಷಕ ಕೇಂದ್ರಿತವಾಗಿಯೂ ಉಳಿಯದೇ ಬರೀ ಯಂತ್ರ ಕೇಂದ್ರಿತವಾಗಿ ಮಾರ್ಪಟ್ಟಿದೆ. ಹಾಗಾಗಿ ನಾವು ಭಾವನಾತ್ಮಕ ಸಂಬಂಧಗಳನ್ನು, ನೈತಿಕ ಜವಾಬ್ದಾರಿಗಳನ್ನು ಕಳೆದುಕೊಳ್ಳುತ್ತಾ ಸಾಗುತ್ತಿದ್ದೇವೆ ಎಂಬುದಾಗಿ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು

ಎಚ್ಚರಿಕೆಯ ಬಳಕೆದಾರ ಹಾಗೂ ಗ್ರಾಹಕರಾಗಬೇಕು : ಡಾ. ಎ. ಜಯಕುಮಾರ್ ಶೆಟ್ಟಿ 

ಹಿಂದಿನ ಕಾಲದಲ್ಲಿ ಗ್ರಾಹಕನಿಗಿಂತ ವ್ಯಾಪಾರಸ್ಥನ ಹಿತಾಸಕ್ತಿಯನ್ನು ಗಮನಿಸಲಾಗುತ್ತಿತ್ತು, ಗ್ರಾಹಕರ ಆಯ್ಕೆಗೆ ಅವಕಾಶ ಇರುತ್ತಿರಲಿಲ್ಲ. ಆದರೆ ಗ್ರಾಹಕರ ಸಂರಕ್ಷಣಾ ಕಾಯ್ದೆ, 1986 ಚಾಲ್ತಿಗೆ ಬಂದ ನಂತರ ಗ್ರಾಹಕರಿಗೂ ಮಾರುಕಟ್ಟೆಯಲ್ಲಿ ಮಹತ್ವ ದೊರಕಿತು. ನಾವು ಜಾಗೃತ ಹಾಗೂ ಎಚ್ಚರಿಕೆಯ ಬಳಕೆದಾರ ಹಾಗೂ ಗ್ರಾಹಕರಾಗಬೇಕು ಎಂದು ಶ್ರೀ ಧ. ಮಂ ಕಾಲೇಜಿನ ಪ್ರಾಂಶುಪಾಲ