ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಟಿದ ಕೂಟ ಸಮಿತಿಯಿಂದ ಆಟಿಡ್ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಗೌರವಾಧ್ಯಕ್ಷತೆ, ಪಿಯೂಸ್ ಎಲ್. ರೋಡ್ರಿಗಸ್ ಅಧ್ಯಕ್ಷತೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಟಿದ ಕೂಟ ಸಮಿತಿ ವತಿಯಿಂದ ಪಂಜಿಕಲ್ಲು ಬಾಲೇಶ್ವರ ಗರಡಿ ಗದ್ದೆಯಲ್ಲಿ ಭಾನುವಾರ ಆಟಿಡ್ ಕೆಸರ್ಡ್ ಒಂಜಿ ದಿನ ಎಂಬ ಕಾರ್ಯಕ್ರಮ ನಡೆಯಿತು.
ಬಾಲೇಶ್ವರ ಬಸದಿಯಲ್ಲಿ ಪೂಜೆ ಸಲ್ಲಿಸಿ, ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಟದ ಗದ್ದೆಯಲ್ಲಿ ಕಂಬಳ ಕೋಣ ಇಳಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಚಾಲನೆಯನ್ನು ನೀಡಿದ ಮಾಜಿ ಸಚಿವ ರೈ, ಬಳಿಕ ವೇದಿಕೆಯಲ್ಲಿ ಗಣ್ಯರ ಸಮಕ್ಷಮ ಹಿಂಗಾರ ಅರಳಿಸಿದರು.ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಪ್ರಾಸ್ತಾವಿಕ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಸುದರ್ಶನ ಜೈನ್ ಸ್ವಾಗತಿಸಿದರು. ಕೋಶಾಧಿಕಾರಿ ದೇವಪ್ಪ ಕುಲಾಲ್ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಂಚಾಲಕರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಡಿ.ಎಸ್. ಗಟ್ಟಿ, ಎಂ.ಎಸ್. ಮಹಮ್ಮದ್, ಮಲ್ಲಿಕಾ ಪಕ್ಕಳ, ಜಯಂತಿ ಪೂಜಾರಿ, ಅಮ್ಮು ರೈ, ಅಬ್ಬಾಸ್ ಆಲಿ ಬೋಳಂತೂರು, ರಮೇಶ್ ನಾಯಕ್ ರಾಯಿ, ಎಡ್ತೂರು ರಾಜೀವ ಶೆಟ್ಟಿ, ಪದ್ಮನಾಭ ರೈ, ಸುರೇಶ್ ಜೋರ, ಪ್ರಕಾಶ್ ಕುಮಾರ್ ಜೈನ್, ಕೃಷ್ಣರಾಜ ಜೈನ್, ಸೀತಾರಾಮ ಶೆಟ್ಟಿ ಕಾಂತಾಡಿ, ದಿನೇಶ್ ಶೆಟ್ಟಿ, ಕೇಶವ ಪೂಜಾರಿ, ಸದಾನಂದ ಶೆಟ್ಟಿ, ಸುರೇಶ್ ಶೆಟ್ಟಿ, ಮೋಹನ ಗೌಡ ಕಲ್ಮಂಜ, ಗಂಗಾಧರ ಪೂಜಾರಿ, ಲೋಲಾಕ್ಷ, ವಾಸು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಪಂಜಿಕಲ್ಲು ಗರಡಿ ಗದ್ದೆಯಲ್ಲಿ ಸಂಗೀತಕುರ್ಚಿ, ಶೂಟಿಂಗ್ ದ ವಿಕೆಟ್, ಕೆಸರುಗದ್ದೆ ಓಟ, ಲಿಂಬೆ ಚಮಚ ಓಟ, ಪಾಡ್ಡನ ಹೇಳುವ ಸ್ಪರ್ಧೆ, ಹಿಮ್ಮುಖ ಓಟ, ನೀರಿನ ಕೊಡ ಸೊಂಟದಲ್ಲಿಟ್ಟು ಓಟ, ಅಂತರ್ ಪಂಚಾಯತ್ ತಂಡಗಳ ನಡುವೆ ಹಗ್ಗ ಜಗ್ಗಾಟ, ಬಾಲ್ ಎಸೆತ, ತಪ್ಪಂಗಾಯಿ ಓಟ, ಮೊದಲಾದ ಕ್ರೀಡಾಕೂಟಗಳು ನಡೆಯುತು. ಮಕ್ಕಳು, ಮಹಿಳೆಯರು ಹಿರಿಯರು ಎನ್ನದೆ ಎಲ್ಲಾ ವರ್ಗದ ಜನರು ಕೆಸರು ಗದ್ದೆಯಲ್ಲಿ ಆಡಿ ಸಂಭ್ರಮಿಸಿದರು. ಬೆಳಗ್ಗಿನಿಂದ ಸಂಜೆಯವರೆಗೆ ಉಪಾಹಾರ ಹಾಗೂ ಭೋಜನಕ್ಕೆ ಆಟಿ ತಿಂಗಳ ವಿಶೇಷ ಪಾನೀಯ ಖಾದ್ಯಗಳು ಜನರ ಉದರ ತಣಿಸಿತು.