Home Articles posted by v4team (Page 209)

ಕಡಬ : ಒಂದುವರೆ ವರ್ಷಗಳ ನಂತರ ಕಳ್ಳತನದ ಆರೋಪಿಗಳ ಬಂಧನ

ಕಡಬದಲ್ಲಿ ಅಟೋಮೊಬೈಲ್ ಬಿಡಿ ಭಾಗಗಳ ಅಂಗಡಿ ಮಾಲಿಕನಾಗಿರುವ ವರ್ಗೀಸ್ (ಶಾಜನ್) ಎಂಬವರ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಆರೋಪಗಳನ್ನು ಸುಮಾರು ಒಂದುವರೆ ವರ್ಷಗಳ ನಂತರ ಕಡಬ ಪೊಲೀಸರು ಬಂಧಿಸಿದ್ದಾರೆ. ಪೇರಡ್ಕ ಪೆಲತ್ರಾಣೆ ನಿವಾಸಿ ಸದ್ದಾಂ ಮತ್ತು ಮೀನಾಡಿ ನಿವಾಸಿ ತಾಜುದ್ದೀನ್ ಬಂಧಿತ ಆರೋಪಿಗಳು. ಇವರಲ್ಲಿ ಸದ್ದಾಂ ಎಂಬಾತನು ಈ ಹಿಂದೆ ನಡೆದ ಅಪ್ರಾಪ್ತ

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಯಕ್ಷಾರ್ಚನೆ

ಹಳೆಯಂಗಡಿ: ಯಕ್ಷನಾಟ್ಯದಿಂದಲೂ ದೇವರ ಸೇವೆ ಮಾಡಿದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಯಕ್ಷಗಾನ ಸಹಿತ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರೂಡಿಸಿಕೊಂಡರೆ ಜೀವನದಲ್ಲಿ ಸಂಸ್ಕಾರ ಸಂಸ್ಕೃತಿ ಸಾಧ್ಯ ಎಂದು ಕಟೀಲು ಕ್ಷೇತ್ರದ ಅರ್ಚಕ ಶ್ರೀ ಹರಿ ನಾರಾಯಣ ಆಸ್ರಣ್ಣ ಹೇಳಿದರು. ಅವರು ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಕ್ಷಾರ್ಚನೆ ಕಾರ್ಯಕ್ರಮದ ದೀಪ ಪ್ರಜ್ವಲನಗೊಳಿಸಿ ಆಶೀರ್ವಚನ ನೀಡಿದರು. ಯಕ್ಷಾರ್ಚನೆಯ ಬಾಲ ಪ್ರತಿಭೆಗಳಾದ ದಿಯಾ, ದಿಶಾ

ಕಾಂಗ್ರೆಸ್ ಯಾವತ್ತೂ ದ್ವೇಷ ರಾಜಕೀಯ ಮಾಡಿಲ್ಲ : ಮಾಜಿ ಸಚಿವ ರಮಾನಾಥ್ ರೈ

ಜಿಲ್ಲೆಯಲ್ಲಿ ಒಂದು ವರ್ಗದ ಹತ್ಯೆ ಆಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಆಗಿದೆ ಅಷ್ಟೇ. ಈ ಹತ್ಯೆಯಲ್ಲಿ ಭಾಗಿಯಾಗಿದವರು ಒಬ್ಬರು ಕೂಡಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ

ಅದ್ಯಪಾಡಿ : ಪುಣ್ಯ ಕ್ಷೇತ್ರ ಬೀಬಿಲಚ್ಚಿಲ್‍ನ ಭಕ್ತಿ ಗೀತೆಗಳ ಲೋಕಾರ್ಪಣೆ

ಹಚ್ಚ ಹಸಿರಿನಲ್ಲಿ ಕಂಗೊಳಿಸುತ್ತಿರುವ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಅದ್ಯಪಾಡಿಯ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಪುಣ್ಯ ಕ್ಷೇತ್ರ ಬೀಬಿಲಚ್ಚಿಲ್ ಎಂಬ 5 ಭಕ್ತಿ ಗೀತೆಗಳ ಲೋಕಾರ್ಪಣೆ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ ನಡೆಯಿತು. ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬಗೆಗೆ ತುಳು ಭಕ್ತಿ ಗೀತೆಯು ಬಿಡುಗಡೆಗೊಂಡಿತು. ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ಕೆ ಲಕ್ಷ್ಮೀ ನಾರಾಯಣ ಅಸ್ರಣ್ಣರು

ಜುಲೈ 18ರಂದು : ಕೂಳೂರು ರಾ.ಹೆ. ಅವ್ಯವಸ್ಥೆ ಖಂಡಿಸಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ಕೂಳೂರು ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯನ್ನು ಖಂಡಿಸಿ ನಾಗರಿಕ ಹಿತರಕ್ಷಣಾ ಸಮಿತಿಯ ವತಿಯಿಂದ ಜುಲೈ 18ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ನಾಗರೀಕ ಹಿತರಕ್ಷಣಾ ಸಮಿತಿಯ ಕೂಳೂರಿನ ಅಧ್ಯಕ್ಷರಾದ ವಿಜಿ ಗುರುಚಂದ್ರ ಹೆಗ್ಡೆ ಅವರು ಮಾತನಾಡಿ, ಎನ್‍ಹೆಚ್ 66ಲ್ಲಿ ಅವೈಜ್ಞಾನಿ ಕಾಮಗಾರಿಯಿಂದ ರಸ್ತೆ ಹೊಂಡ-ಗುಂಡಿಗಳಿಂದ ತುಂಬಿ ಹೋಗಿದೆ. ಇದರಿಂದ ಸ್ಥಳೀಯರ ನಾಗರಿಕೆರಿಗೆ, ವ್ಯಾಪಾರಸ್ತರಿಗೆ, ವಾಹನ ಚಾಲಕರಿಗೆ ಅಂಬ್ಯುಲೆನ್ಸ್,

ವಿದ್ಯಾಗಿರಿಯಲ್ಲಿ ವೈವಿಧ್ಯಮಯ ಹಣ್ಣುಗಳ ಮೇಳ ಸಮಾಪನ

ಮೂಡುಬಿದಿರೆ: ಹಲಸು- ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿ ನೇತೃತ್ವದಲ್ಲಿ ಕೃಷಿಋಷಿ ಡಾ.ಎಲ್.ಸಿ. ಸೋನ್ಸ್ ಸ್ಮರಣಾರ್ಥ ವಿದ್ಯಾಗಿರಿಯಲ್ಲಿ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಹಲಸು ಮತ್ತು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಮತ್ತು ಕೃಷಿ ಪ್ರದರ್ಶನಗಳ ಪರಿಕರಗಳ ಪ್ರದರ್ಶನ ಮತ್ತು ಮಾರಾಟ `ಸಮೃದ್ಧಿ’ಯು ಸಮಾಪನಗೊಂಡಿತ್ತು. ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ

ಕದ್ರಿ : ಹೋಟೆಲ್ ಡಿಂಕಿ ಡೈನ್‍ ನಲ್ಲಿ ಉಚಿತ ಕಷಾಯ, ಮೆಂತೆ ಗಂಜಿ ವಿತರಣೆ

ಹೋಟೆಲ್ ಡಿಂಕಿ ಡೈನ್‍ನ ಸಹಕಾರದಲ್ಲಿ ತುಳುವ ಬೊಳ್ಳಿ ಪ್ರತಿಷ್ಠಾನದ ವತಿಯಿಂದ ಆಟಿದ ಅಮಾವಾಸ್ಯೆಯ ಪ್ರಯುಕ್ತ ಉಚಿತ ಹಾಲೆ ಮರದ ಕೆತ್ತೆಯ ಕಷಾಯ ಮತ್ತು ಮೆಂತೆ ಗಂಜಿಯ ವಿತರಣಾ ಕಾರ್ಯಕ್ರಮ ನಡೆಯಿತು. ಆಟಿ ತಿಂಗಳಲ್ಲಿ ಬರುವ ಅಮಾವಾಸ್ಯೆಯಂದು ಕರಾವಳಿ ಭಾಗದಲ್ಲಿ ಆಟಿ ಕಷಾಯ ಸೇವನೆ ಡಿಂಕಿ ಡೈನ್ ಹೋಟೆಲ್ ಮಾಲಕರಾದ ಸ್ವರ್ಣ ಸುಂದರ್, ಕಿರಣ್ ಜೋಗಿ, ಮಾಜಿ ಮೇಯರ್ ಹರಿನಾಥ್ ಜೋಗಿ ಪತಂಜಲಿ ಡಾ. ಜ್ಞಾನೇಶ್ ನಾಯಕ್, ಅಶೋಕ್, ಲಕ್ಷ್ಮಣ್ ಕುಮಾರ್ ಮಲ್ಲೂರು, ಪ್ರದೀಪ್

BANTWALA : ನರಹರಿ ಪರ್ವತದಲ್ಲಿ ಆಟಿ ಅಮವಾಸ್ಯೆ

ಬಂಟ್ವಾಳ: ನರಹರಿ ಸದಾಶಿವ ದೇವಾಲಯದಲ್ಲಿ ಇಂದು ಆಟಿ ಅಮವಾಸ್ಯೆ, ತೀರ್ಥ ಸ್ನಾನ ನಡೆಯಿತು. ಪ್ರತಿ ವರ್ಷವೂ ಆಟಿ ತಿಂಗಳಲ್ಲಿ ಬರುವ ಅಮವಾಸ್ಯೆ ದಿನದಂದು ಇಲ್ಲಿನ‌ ತೀರ್ಥ ಸ್ನಾನ ನಡೆಯುತ್ತದೆ. ತೀರ್ಥ ಬಾವಿಯಲ್ಲಿ ತೀರ್ಥ ಸ್ನಾನ ಮಾಡಿದರೆ ಸಕಲ ಇಷ್ಟಾರ್ಥಗಳು ನೆರವೇರುವುದು ಎಂಬ ಪ್ರತೀತಿ ಇದೆ. ಇಂದು ಮುಂಜಾನೆಯಿಂದಲೇ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಬೆಂಗರೆ ರುದ್ರ ಭೂಮಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಮತ್ತು ಬೆಂಗರೆ ವಿದ್ಯಾರ್ಥಿ ಸಂಘ ಅಮೃತೋತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ ಬೆಂಗ್ರೆ ರುದ್ರ ಭೂಮಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ವನಮೋತ್ಸವ ಕಾರ್ಯಕ್ರಮ ನಡೆಯಿತು. ಬೆಂಗ್ರೆ ವಿದ್ಯಾರ್ಥಿ ಸಂಘ ಇದರ ಅಧ್ಯಕ್ಷರಾದ ಸಂಜಯ್ ಸುವರ್ಣ ಬೆಂಗ್ರೆ ಇವರ ಮುಂದಾಳತ್ವದಲ್ಲಿ ಜರಗಿತು. ವನಮಹೋತ್ಸವ ಕಾರ್ಯಕ್ರಮಕ್ಕೆ ನಮ್ಮ ಹಿರಿಯ ಸದಸ್ಯರಾದ ಸುರೇಂದ್ರ ಸಾಲಿಯನ್ ಮಿತ್ತ ಮನೆ ಇವರು ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ

ಬೆಳ್ತಂಗಡಿ ನೆರಿಯ ಗ್ರಾಮದಲ್ಲಿ ಸ್ಮಶಾನದ ಕೊರತೆ : ಮೃತ ದೇಹ ಇಟ್ಟು ಗ್ರಾಮಸ್ಥರಿಂದ ಪ್ರತಿಭಟನೆ

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ಸ್ಮಶಾನ ಇಲ್ಲದೆ ಶವ ಸಂಸ್ಕಾರಕ್ಕೆ ಸಮಸ್ಯೆ ಆಗುತಿದೆ. ತಕ್ಷಣ ಸ್ಮಶಾನದ ಜಾಗ ನಿಗದಿಗೊಳಿಸುವಂತೆ ಆಗ್ರಹಿಸಿ ಮೃತ ದೇಹ ಇಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿದ ಘಟನೆ ನೆರಿಯದಲ್ಲಿ ನಡೆದಿದೆ. ಕಳೆದ ಹಲವಾರು ವರ್ಷಗಳಿಂದ ಸ್ಮಶಾನವಿಲ್ಲದೆ ಶವ ಸಂಸ್ಕಾರಕ್ಕಾಗಿ ಗ್ರಾಮಸ್ಥರು ಅಲೆದಾಡುವ ಸ್ಥಿತಿ ಇದ್ದರೂ ಯಾರೂ ಕೂಡ ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತಿಲ್ಲ ಸ್ಮಶಾನ ನಿಗದಿಗೊಳಿಸದೇ ಮೃತ ದೇಹದ ಅಂತಿಮ ಸಂಸ್ಕಾರ ಮಾಡುವುದಿಲ್ಲ