Home Articles posted by v4team (Page 208)

ಕಟಪಾಡಿ ಕೊಲೆ ಪ್ರಕರಣ ಆರೋಪಿ ಸೆರೆ

ಕಟಪಾಡಿಯಲ್ಲಿ ನಡೆದ ಕೂಲಿ ಕಾರ್ಮಿಕನ ಬಲಿ ಪಡೆದ ವ್ಯಕ್ತಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಒರಿಸ್ಸಾ ಮೂಲದ ಆಕನ್. ಈತ ಹಾಗೂ ಗಣೇಶ್ ನಡುವೆ ಜಗಳ ನಡೆದು ಕಬ್ಬಿಣದ ಸಲಾಖೆಯಲ್ಲಿ ತಲೆ ಹೊಡೆದು ಕೊಲೆ ನಡೆಸಿ ಪರಾರಿಯಾಗಿದ್ದ ಆಕನ್ ನನ್ನು ರಾತ್ರಿ ಉಡುಪಿ ಬಸ್ ನಿಲ್ದಾಣದ ಬಳಿ ಕಾಪು ಪೊಲೀಸರು ಬಂಧಿಸಿದ್ದರು.

ಮದಿಮಲ್ ಶೃಂಗಾರದಲ್ಲಿ ಮೇಕಪ್ ತರಬೇತಿ – ಕಾರ್ಯಾಗಾರ

ಮಂಗಳೂರಿನ ಕಾವೂರಿನ “ಮದಿಮಲ್ ಶೃಂಗಾರದಲ್ಲಿ ಶ್ವೇತಾ ಅಜಯ್ ಅವರಿಂದ ಮೇಕಪ್ ಮತ್ತು ವೃತ್ತಿಪರ ಹೇರ್ ಹಾಗೂ ಮೇಕಪ್ ತರಬೇತಿ ಕಾರ್ಯಾಗಾರ ನಡೆಯಿತು.ನಗರದ ಕಾವೂರಿನ ಅರಮನೆ ಬೇಕರಿ ಪಕ್ಕದಲ್ಲಿರುವ ಮದಿಮಲ್ ಶೃಂಗಾರದಲ್ಲಿ ಮೇಕಪ್ ಕೋರ್ಸ್ ವೃತ್ತಿಪರ ಮೇಕಪ್ ಕೌಶಲ್ಯಗಳು ತರಬೇತಿ ನಡೆಯುತ್ತಿದ್ದು, 5ನೇ ಬ್ಯಾಚ್ ಪ್ರಾರಂಭಗೊಂಡಿದೆ. ಸೌಂದರ್ಯ ವರ್ಧಕ, ಕೇಶ ವಿನ್ಯಾಸ, ಸೀರೆ ತೊಡುವ ಬಗ್ಗೆ ಮಹಿಳೆಯರಿಗೆ ತರಬೇತಿಯನ್ನ ನೀಡಲಾಯಿತು. ಮದಿಮಲ್ ಶೃಂಗಾರದ ಮಾಲಕಿಯಾಗಿರುವ

ಪುತ್ತೂರು : ಮಧುಮೇಹ ನಿಯಂತ್ರಣಕ್ಕಾಗಿ ಔಷಧಿಯ ಹಣ್ಣುಗಳ ಬೆಳೆ – ಪ್ರಫುಲ್ಲಾ ರೈ ಅವರ ಟಾರೇಸ್ ತೋಟವಿದು

ಸಾಕಷ್ಟು ಕೃಷಿ ಜಾಗವಿದ್ದರೂ ಕೃಷಿಯಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುವವರೇ ಹೆಚ್ಚು. ಆದರೆ ನಗರದ ಮಧ್ಯದಲ್ಲೇ ಇರುವ ಮಹಿಳೆ ಕೃಷಿ ಭೂಮಿ ಇಲ್ಲದಿದ್ದರೂ ತನ್ನ ಮನೆಯ ಟಾರೇಸ್ ನಲ್ಲಿ ಉತ್ತಮ ಕೃಷಿ ಬೆಳೆಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಔಷಧಿಯಂತೆ ಕೆಲಸ ಮಾಡುವ ಹಣ್ಣುಗಳ ಗಿಡಗಳ ಬೆಳೆಗೇ ಈಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ನೆಲದಲ್ಲೇ ಬೆಳೆಯಲು ಹರ ಸಾಹಸ ಪಡಬೇಕಾದ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಬೆಳೆಯುವ

ಕೂಳೂರು ರಾ.ಹೆ. ಅವ್ಯವಸ್ಥೆ ಖಂಡಿಸಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ನಾಗರಿಕ ಹಿತರಕ್ಷಣಾ ಸಮಿತಿ ಕೂಳೂರು ಇದರ ವತಿಯಿಂದ ಹೊಂಡ ಗುಂಡಿ ತಕ್ಷಣ ಮುಚ್ಚಿ ಹಾಗೂ 2 ವರ್ಷದಿಂದ ಅರ್ಧಕ್ಕೆ ನಿಂತಿರುವ ಕೂಳೂರು ಹೊಸ ಸೇತುವೆ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ನಾಗರೀಕ ಹಿತರಕ್ಷಣಾ ಸಮಿತಿಯ ಕೂಳೂರಿನ ಅಧ್ಯಕ್ಷರಾದ ವಿಜಿ ಗುರುಚಂದ್ರ ಹೆಗ್ಡೆ ಅವರು ಮಾತನಾಡಿ, ಎನ್‍ಹೆಚ್ 66ಲ್ಲಿ ಅವೈಜ್ಞಾನಿ ಕಾಮಗಾರಿ ಹಾಗೂ ಕೂಳೂರು ಹೊಸ ಸೇತುವೆ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಉದ್ಯಾವರ : ರೈಲ್ವೇ ಕ್ರಾಸಿಂಗ್ ಗೇಟ್‍ನಿಂದ ಪ್ರಯಾಣಿಕರಿಗೆ ತೊಂದರೆ

ಮಂಜೇಶ್ವರ : ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ಸಮೀಪವಿರುವ ಉದ್ಯಾವರ ರೈಲ್ವೇ ಕ್ರಾಸಿಂಗ್ ಗೇಟ್ ಮೂಲಕ ಹಾದು ಹೋಗುವ ಪ್ರಯಾಣಿಕರಿಗೆ ನಿರಂತರ ಅಡಚಣೆಯಾಗಿದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಹಾಗೂ ಜನ ಸಾಮಾನ್ಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಯಾವುದೇ ಮುನ್ಸೂಚನೆ ಕೂಡ ನೀಡದೆ ರೈಲ್ವೇ ಗೇಟ್‍ನ್ನು ಇಲ್ಲಿ ಬಂದ್ ಮಾಡುತ್ತಾರೆ ಎಂದು ಸ್ಥಳೀಯರು ಆರೋಪಿಸುತಿದ್ದಾರೆ. ಮಂಜೇಶ್ವರ ರಥಬೀದಿ ಅಥವಾ ಹೊಸಂಗಡಿ ಭಾಗದಿಂದ

ಪಡುಬಿದ್ರಿ : ಗೃಹಜ್ಯೋತಿ ಹೆಸರಲ್ಲಿ ಹಣ ಪಡೆಯುತ್ತಿದ್ದ ಸೈಬರ್ ಮಾಲಕ

ಗೃಹಜ್ಯೋತಿ ಯೋಜನೆಯ ನೋಂದಾಣಿಗೆ ಪಡುಬಿದ್ರಿ ಸೈಬರ್ ಒಂದರಲ್ಲಿ 100 ರೂಪಾಯಿ ಪಡೆಯುತ್ತಿರುವುದನ್ನು ಗ್ರಾಮಸ್ಥರು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಗ್ರಾ.ಪಂ.ಸದಸ್ಯರ ದೂರಿನನ್ವಯ ಕಾಪು ತಹಶಿಲ್ದಾರ್ ಅಂಥಹ ಸೈಬರ್‍ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ. ಸದಸ್ಯೆ ಜ್ಯೋತಿ ಮೆನನ್ ಅವರು, “ಗೃಹಜ್ಯೋತಿ” ಯೋಜನೆಯನ್ನು ದುರುಪಯೋಗ ಮಾಡಿಕೊಂಡ

ಕುಂಪಲ : ನವ ವಧು ವರರ ರಂಗ ರುಕ್ಮಿಣಿ ಸಮಾಗಮ ಕಾರ್ಯಕ್ರಮ

ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ವತಿಯಿಂದ ನವ ವಧು ವರರ ರಂಗ ರುಕ್ಮಿಣಿ ಸಮಾಗಮ ಕಾರ್ಯಕ್ರಮ ನಡೆಯಿತು. ಉದ್ಯಮಿ ಕಂಪಾರ್ಟ್ ಇನ್ ಮಾಲಕ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮಕ್ಕೆ ದೀಪಬೆಳಗಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಜೀವನವನ್ನು ರೂಪಿಸಲು ನಮಗೆ ಸಂಸ್ಕಾರ ಬಹಳ ಮುಖ್ಯ, ಇದನ್ನು ಅರಿತಾಗ ಮಾತ್ರ ನಮ್ಮ ಜೀವನ ಸುಂದರವಾಗುತ್ತದೆ, ಈ ನಿಟ್ಟಿನಲ್ಲಿ ರಂಗ ರುಕ್ಮಿಣಿ ಕಾರ್ಯಕ್ರಮ ಶ್ಲಾಘನೀಯ. ಹೊಸ ಬಾಳಿನಲ್ಲಿ ಸದಾ ಕಾಲ ನಗುವಿನೊಂದಿಗೆ ಬದುಕಿ ಎಂದು ಹಾರೈಸಿದರು.

ಪಿಂಗಾರ ಕಲಾವಿದೆರ್ ಬೆದ್ರ- ನೂತನ ನಾಟಕದ ಶೀರ್ಷಿಕೆ ಬಿಡುಗಡೆ

ಪಿಂಗಾರ ಕಲಾವಿದೆರ್ ಬೆದ್ರ ತಂಡದ ನೂತನ ನಾಟಕ `ಕದಂಬ’ ಇದರ ಶೀರ್ಷಿಕೆಯನ್ನು ಭಾನುವಾರ ಕೋಟೆ ಬಾಗಿಲು ಮಹಾಮ್ಮಾಯಿ ದೇವಸ್ಥಾನದ ಆವರಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ದೇವಳದ ಆಡಳಿತ ಮೋಕ್ತೇಸರ ನಾರಂಪ್ಪಾಡಿಗುತ್ತು ಸೇಸಪ್ಪ ಹೆಗ್ಡೆ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿದರು.ತಂಡದ ಮುಖ್ಯಸ್ಥ ಮಣಿಕೋಟೆಬಾಗಿಲು ಪ್ರಾಸ್ತಾವಿಕವಾಗಿ ಮಾತನಾಡಿ, ಕದಂಬ ನಾಟಕವು ತುಳು ರಂಗಭೂಮಿಯಲ್ಲಿ ವಿಭಿನ್ನ ಪ್ರಯತ್ನವಾಗಿದ್ದು, ವಿನೂತನ ಶೈಲಿಯ ರಂಗ ವಿನ್ಯಾಸವನ್ನು ಹೊಂದಿದೆ. ಈ

ಪಡುಬಿದ್ರಿ : ಅಪಘಾತವಾದ ಕಾರನ್ನುಕಿಲೋ ಮೀಟರ್ ದೂರಕ್ಕೆ ಎಳೆದುಕೊಂಡು ಹೋದ ಟಿಪ್ಪರ್

ಟಿಪ್ಪರೊಂದರ ಹಿಂಭಾಗಕ್ಕೆ ಡಿಕ್ಕಿಯಾಗಿ ಸಿಲುಕಿಕೊಂಡ ಕಾರನ್ನು ಸುಮಾರು ಒಂದು ಕೀ.ಮೀ. ದೂರಕ್ಕೆ ಎಳೆದುಕೊಂಡೋದ ಘಟನೆ ಹೆಜಮಾಡಿ ಕನ್ನಾಂಗಾರಿನಲ್ಲಿ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ. ತಲೆ, ಕೈ, ಕಾಲು, ಮೂಗು ಸಹಿತ ದೇಹದ ಕೆಲ ಭಾಗಗಳಿಗೆ ಗಾಯಗೊಂಡ ಸಾಗರ ಮೂಲದ ಜಾಫರ್ ಖಾನ್, ಶಹೀನಾ ಹಾಗೂ ಯಾಸೀರ್ ಖಾನ್. ಇವರು ಸ್ಯಾಂಡ್ರೋ ಕಾರಿನಲ್ಲಿ ಸಾಗರದಿಂದ ಮಂಗಳೂರಿಗೆ ಹೋಗುತ್ತಿದ್ದು, ಪಡುಬಿದ್ರಿ ದಾಟಿ ಕನ್ನಾಂಗಾರಿನಲ್ಲಿ ಟಿಪ್ಪರ್ ಚಾಲಕ ತನ್ನ ವಾಹನವನ್ನು

ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿಧನ

ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಉಮ್ಮನ್ ಚಾಂಡಿ (79) (Oommen Chandy) ವಿಧಿವಶರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಉಮ್ಮನ್ ಚಾಂಡಿ ಅವರು ಫೆಬ್ರುವರಿ 12ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು. ಆದ್ರೆ,  ಚಿಕಿತ್ಸೆ ಫಲಕಾರಿಯಾಗದೇ ಇಂದು(ಜುಲೈ 18) ಕೊನೆಯುಸಿರೆಳೆದಿದ್ದಾರೆ. .