Home Articles posted by v4team (Page 259)

ಬೈಂದೂರು : ಅಪರಿಚಿತರು ಬಿಟ್ಟು ಹೋದ ಕರುಗಳು ಸಾವು

ಹೈಬ್ರಿಡ್ ಜಾನುವಾರುಗಳ ಹುಟ್ಟಿದ 3-4ದಿನಗಳ ಸುಮಾರು 10-12 ಗೋವಿನ ಗಂಡು ಕರುಗಳನ್ನು ಯರುಕೋಣೆ ಸಮೀಪದ ಆಲಗೆದ್ದಕೇರಿಯ ಕಲ್ಲುಕ್ವಾರಿ ಮಧ್ಯೆ ಬಿಟ್ಟು ಹೋದ ಘಟನೆ ನಡೆದಿದೆ. 2 ಕರುಗಳು ನೀರು ಆಹಾರ ಇಲ್ಲದೆ ಸತ್ತು ಹೋಗಿದೆ. ಕೆಲವು ಕರುಗಳು ಹಸಿವಿನಿಂದ ನಿತ್ರಾಣ ಗೊಂಡಿದ್ದು ಸ್ಥಳೀಯರು ನೀರು ಕುಡಿಸಿ, ಹುಲ್ಲು ನೀಡಿ ಉಪಚರಿಸಿದ್ದರು.ನಂತರ ಬೈಂದೂರು

ಆದರ್ಶ ಗ್ರಾಮಾಭಿವೃದ್ಧಿ ಸೇವಾ ಸಂಸ್ಥೆಯಿಂದ ವೃತ್ತಿ ಮಾರ್ಗದರ್ಶನ ಶಿಬಿರ

ಮೂಡುಬಿದಿರೆಯ ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆಯ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಶಿಬಿರವು ಸಮಾಜ ಮಂದಿರದಲ್ಲಿ ನಡೆಯಿತು. ಮಂಗಳೂರು ದಿಶಾ ಸೆಂಟರ್ ಫಾರ್ ಕ್ಯಾರಿಯರ್ ಕೌನ್ಸಿಲಿಂಗ್ ಆಂಡ್ ಟ್ರೈನಿಂಗ್ ನ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಶೆಟ್ಟಿ ಅವರು ವೃತ್ತಿ ಮಾರ್ಗದರ್ಶನದ ಕುರಿತು ಮಾತನಾಡಿ ಜೀವನದಲ್ಲಿ ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು. ಗುರಿಯನ್ನಿಟ್ಟುಕೊಂಡರೆ ಸಾಲದು ಅದನ್ನು ತಲುಪಲು ಸತತ

ಜೂ.1 – ಇಂದು ವಿವಾಹವಾಗಬೇಕಿದ್ದ ವರ ನಾಪತ್ತೆ

ಉಳ್ಳಾಲ: ಇಂದು (ಜೂ.1) ರಂದು ವಿವಾಹವಾಗಬೇಕಾಗಿರುವ ವರ ನಾಪತ್ತೆಯಾಗಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ತೌಡುಗೋಳಿ ವರ್ಕಾಡಿ ಎಂಬಲ್ಲಿ ಮನೆಯಲ್ಲಿ ಸಂಜೆ ನಡೆಯಬೇಕಾಗಿದ್ದ ಮೆಹಂದಿ ಶಾಸ್ತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪೋಷಕರು,ಕುಟುಂಬಸ್ಥರು ಸಂಭ್ರಮದಲ್ಲಿ ತೊಡಗಿದ್ದರೆ ಇತ್ತ ಹಣ್ಣು ಖರೀದಿಗೆಂದು ತೆರಳಿದ್ದ ವರನೇ ನಾಪತ್ತೆಯಾಗಿದ್ದು ವಧೂ ವರರ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ. ತೌಡುಗೋಳಿ- ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ‌ ಐತಪ್ಪ ಶೆಟ್ಟಿ ಅವರ

ಮೀನುಗಾರಿಕೆಯ ಖುತುಮಾನ ಅಂತ್ಯ : ಸಮುದ್ರ ದಡದಲ್ಲಿ ಲಂಗರು ಹಾಕಿದ ಬೋಟುಗಳು

ಕರಾವಳಿ ಅಂದಾಕ್ಷಣ ನೆನಪಾಗೋದೇ ಕಡಲು. ಇಲ್ಲಿನ ಕಡಲಿನ ಮೀನುಗಾರಿಕೆಯಲ್ಲಿ ಕೋಟಿಗಟ್ಟಲೆ ಮೌಲ್ಯದ ಮೀನುಗಾರಿಕೆ ಪ್ರತೀ ವರ್ಷ ನಡೆಯುತ್ತಿದೆ. ಅದೆμÉ್ಟೂೀ ಮಂದಿ ಮೀನುಗಾರರು ಇದನ್ನೆ ನಂಬಿಕೊಂಡು ಭವಿಷ್ಯ ರೂಪಿಸಿಕೊಂಡಿದ್ದಾರೆ. ಮೀನುಗಾರಿಕೆಯೇ ಕರಾವಳಿಯ ಮುಖ್ಯ ಉದ್ಯಮ. ಇದೀಗ ಜೂನ್ 1ರಿಂದ ಜುಲೈ 31ರವರೆಗೆ ಅಂದ್ರೆ ಎರಡು ತಿಂಗಳುಗಳ ಕಾಲ ತಾತ್ಕಾಲಿಕವಾಗಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಮೀನುಗಾರಿಕೆಯ ಖುತುಮಾನ ಅಂತ್ಯಗೊಳ್ಳಲಿದ್ದು, ಮೀನುಗಾರಿಕಾ ಬೋಟುಗಳು

ಜೂನ್ 3ರಂದು ದಿ.ಜಾರ್ಜ್ ಫೆರ್ನಾಂಡಿಸ್ ರವರ ಜನ್ಮದಿನಾಚರಣೆ, ಪ್ರಶಸ್ತಿ ಪ್ರದಾನ

ಮುಂಬಯಿ :ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಅಭಿವೃದ್ದಿಗಾಗಿ ವಿವಿಧ ರೀತಿಯಲ್ಲಿ ಶ್ರಮಿಸುತ್ತಿರುವ ಮುಂಬಯಿಯಲ್ಲಿ ನೆಲೆಸಿದ ಕರ್ನಾಟಕದ ಕರಾವಳಿಯ ಎಲ್ಲಾ ಜಾತೀಯ ಹಾಗೂ ವಿವಿಧ ಭಾಷೀಯ ಸಂಘಟನೆಗಳನ್ನೊಳಗೊಂಡ ಏಕೈಕ ಸರಕಾರೇತರ ಸಂಘಟನೆ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ. ಇದರ ಮಾರ್ಗದರ್ಶಕರಾಗಿದ್ದ ಮಾಜಿ ಕೇಂದ್ರ ಸಚಿವ ದಿ. ಜಾರ್ಜ್ ಫೆರ್ನಾಂಡಿಸ್ ಅವರ 94ನೇ ಜನ್ಮದಿನಾಚರಣೆ ಅಂಗವಾಗಿ ಜೂನ್ 3 ರಂದು ಅವರ ಸ್ಮರಣಾರ್ಥ ರಾಷ್ಟೀಯ ಪ್ರಶಸ್ತಿ ಪ್ರದಾನ ಸಮಾರಂಭ ರಂಜನಿ

ಮುಂಗಾರು ಮಳೆ ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಜ್ಜು : ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್

ಮುಂಗಾರು ಮಳೆ ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಜ್ಜಾಗಿದೆ. ಪ್ರಕೃತಿ ವಿಕೋಪ ಸಮರ್ಥವಾಗಿ ನಿರ್ವಹಿಸಲು ಬೇಕಾದ ಎಲ್ಲಾ ರೀತಿ ಸಿದ್ಧತೆಯನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್ ಹೇಳಿದರು. ವಿ4ನ್ಯೂಸ್‍ನೊಂದಿಗೆ ಮಾತನಾಡಿದ ಅವರು, ಈಗಾಗಲೇ ಸ್ಪೀಕರ್ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದ್ದು, ಇದರಲ್ಲಿ ಸ್ಪೀಕರ್ ಅವರು ಕೆಲವೊಂದು

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ – ರನ್ ವೇ ಕಾಮಗಾರಿ ಪೂರ್ಣ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2.45 ಕಿ.ಮೀ. ಉದ್ದದ ರನ್‍ವೇ ಮರುನಿರ್ಮಾಣ ಕಾಮಗಾರಿ ಮೇ 28ರಂದು ಪೂರ್ಣಗೊಂಡಿದೆ. ಈಗಾಗಲೇ ತಜ್ಞರ ತಂಡ ಪ್ರಾಥಮಿಕ ಸಮೀಕ್ಷೆ ನಡೆಸಿದ್ದು, ಅಂತಿಮ ಸಮೀಕ್ಷೆಯ ಬಳಿಕ ಜೂ. 1ರಿಂದ ಹಗಲು ವೇಳೆಯಲ್ಲೂ ನಿಲ್ದಾಣದ ಕಾರ್ಯಾಚರಣೆ ಆರಂಭವಾಗಲಿದೆ. ವಿಮಾನಯಾನ ಸುರಕ್ಷಾ ಮಾನದಂಡಗಳ ಪ್ರಕಾರ ಕಾಮಗಾರಿ ಕೈಗೊಳ್ಳಲಾಗಿದ್ದು, ಮಾ. 10ರಂದು ಆರಂಭವಾದ ಈ ಕಾಮಗಾರಿ 75 ದಿನಗಳಲ್ಲಿ ಮುಗಿಸಲಾಗಿದೆ. ಗಟ್ಟಿಯಾದ ರನ್‍ವೇಯಲ್ಲಿ

ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಸ್ಕೂಲ್ – ವೆಲ್ಕಂ ಡೇ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ

ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಸ್ಕೂಲ್, ಮಾಣಿಯ ವಿದ್ಯಾನಗರದಲ್ಲಿರುವ ಈ ಶಾಲೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ಹೆಸರುವಾಸಿಯಾದ ಸಂಸ್ಥೆ. ಇದೀಗ ಈ ಶಾಲೆಯಲ್ಲಿ ನಾಳೆ ವೆಲ್ಕಂ ಡೇ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಬೆಳಗ್ಗೆ 9.30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಟ್ರಸ್ಟ್ನ ಅಧ್ಯಕ್ಷ ಪ್ರಹಲ್ಲಾದ್ ಶೆಟ್ಟಿ ಜೆ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಕ್ತಿ ಎಜುಕೇಶನಲ್ ಟ್ರಸ್ಟ್ನ ಸ್ಥಾಪಕ ಡಾ ಕೆಸಿ ನಾಯ್ಕ್,

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತರಾಮ್ ಭೇಟಿ

ಉಳ್ಳಾಲ: ಸ್ಯಾಂಡಲ್‍ವುಡ್‍ನ ಡಿಂಪಲ್ ಬೆಡಗಿ ರಚಿತಾರಾಮ್ ಅವರಿಂದು ಮಂಗಳೂರು ಹೊರವಲಯದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿತಳಕ್ಕೆ ಭೇಟಿ ನೀಡಿ ತಮ್ಮ ನಟನೆಯ ಹೊಸ ಚಿತ್ರಗಳಾದ ಮ್ಯಾಟ್ನಿ,ಬ್ಯಾಡ್ ಮ್ಯಾನರ್ಸ್ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು. ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರಣೀಕದ ಬಗ್ಗೆ ಹೇಳಿದ್ರು. ಹಾಗಾಗಿ ನನಗೂ ಇಲ್ಲಿಗೆ ಬರಬೇಕು ಅನ್ನಿಸಿತು. ಕೊರಗಜ್ಜನ ಕ್ಷೇತ್ರವು ಪ್ರಾಕೃತಿಕ ಸೌಂದರ್ಯವನ್ನೊಳಗೊಂಡಿದ್ದು, ತುಂಬಾ

ವಿಟ್ಲ : ವಿವಾಹಿತ ನೇಣ ಬಿಗಿದು ಆತ್ಮಹತ್ಯೆ

ವಿಟ್ಲ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಅಳಕೆಮಜಲು ಸಮೀಪ ನಡೆದಿದೆ. ಅಳಕೆಮಜಲು ನಿವಾಸಿ ಧೀರಜ್ (30) ಮೃತಪಟ್ಟ ವ್ಯಕ್ತಿ. ಧೀರಜ್ ಬಿ.ಸಿ.ರೋಡ್ ನ ಹೋಂಡಾ ಶೋ ರೂಂ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಒಂದು ವರುಷದ ಹಿಂದಷ್ಟೇ ವಿವಾಹವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.