Home Articles posted by v4team (Page 265)

ಮಳೆಗಾಲದಲ್ಲಿ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು-ಶಾಸಕ ಖಾದರ್ ಆದೇಶ

ಉಳ್ಳಾಲ: ಮಳೆಗಾಲದಲ್ಲಿ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಧಿಕಾರಿಗಳು ತಕ್ಷಣದಿಂದ ಕ್ರಮಕೈಗೊಳ್ಳಬೇಕು, ಉಳ್ಳಾಲ ನಗರಸಭೆಯಾದ್ಯಂತ 8 ಟ್ಯಾಂಕರ್ಗಳ ಮೂಲಕ ಸರಬರಾಜು ಆಗುತ್ತಿರುವ ಕುಡಿಯುವ ನೀರು ಸಮರ್ಪಕವಾಗಿ ಎಲ್ಲರ ಉಪಯೋಗಕ್ಕೆ ಬರಬೇಕು. ಕಡಲ್ಕೊರೆತದಿಂದ ಹಾನಿಗೊಳಗಾದ ಮುಕ್ಕಚ್ಚೇರಿ ಸೀಗ್ರೌಂಡ್ ಮತ್ತು ಉಚ್ಚಿಲ ಸೋಮೇಶ್ವರದಲ್ಲಿ ಅನುದಾನ

ಯೂನಿಟಿ ಆಸ್ಪತ್ರೆಯಲ್ಲಿ ದೈತ್ಯ ಥೈಮಸ್ ಗೆಡ್ಡೆಯ ಯಶಸ್ವಿ ಶಸ್ತ್ರಕ್ರಿಯೆ

ವೈದ್ಯಕೀಯ ಪರಿಣತಿ ಮತ್ತು ಗಮನಾರ್ಹ ಸಾಧನೆಯಲ್ಲಿ, ಪ್ರಸಿದ್ಧ ಹಿರಿಯ ಸಲಹೆಗಾರ ಕಾರ್ಡಿಯೋ ಥೊರಾಸಿಕ್ ಸರ್ಜನ್, ಡಾ.ಮೂಸಾ ಕುನ್ಹಿ ನೇತೃತ್ವದ ವೈದ್ಯರ ತಂಡ, ಯೂನಿಟಿ ಆಸ್ಪತ್ರೆ 37 ವರ್ಷದ ರೋಗಿಯಿಂದ ದೈತ್ಯ ಥೈಮಸ್ ಗೆಡ್ಡೆಯನ್ನು (ಥೈಮೋಮಾ) ಯಶಸ್ವಿಯಾಗಿ ತೆಗೆದುಹಾಕಿದೆ. ದಿಗ್ಬ್ರಮೆಗೊಳಿಸುವ 2201512ಸೆಂ.ಮೀ ಅಳತೆಯ ಗೆಡ್ಡೆ, ಹಲವಾರು ವರ್ಷಗಳಿಂದ ರೋಗಿಯ ಎದೆಯೊಳಗೆ ಬೆಳೆದು, ಪ್ರಮುಖ ಅಪಧಮನಿಗಳು, ವಿಂಡ್ ಪೈಪ್ ಮತ್ತು ಆಹಾರ ಪೈಪ್‌ಗಳನ್ನು ಸಂಕುಚಿತಗೊಳಿಸಿತ್ತು.

ಉತ್ತಮ ಸಮಾಜ, ಸಾಮರಸ್ಯಕ್ಕಾಗಿ ಕಾಂಗ್ರೆಸ್‍ಗೆ ಮತ ಕೊಟ್ಟಿದ್ದಾರೆ: ಖಾದರ್

ಸತ್ಯ- ಅಸತ್ಯ, ಪ್ರಚಾರ-ಅಪಪ್ರಚಾರದ ಬಗ್ಗೆ ರಾಜ್ಯದಲ್ಲಿ ಚುನಾವಣೆ ಆಗಿತ್ತು. ರಾಜ್ಯದ ಜನತೆ ಸತ್ಯಕ್ಕೆ ಜಯ ಕೊಟ್ಟಿದ್ದಾರೆ. ಜನರು ಬೆಲೆಯೇರಿಕೆ, ದ್ವೇಷ ಭಾವನೆಯಿಂದ ಕಂಗೆಟ್ಟು ನಿರಾಶರಾಗಿದ್ದರು. ಉತ್ತಮ ಸಮಾಜ, ಸಾಮರಸ್ಯಕ್ಕಾಗಿ ಕಾಂಗ್ರೆಸಿಗೆ ಮತ ಕೊಟ್ಟಿದ್ದಾರೆ. ಕರಾವಳಿಯಲ್ಲಿ ಜನರ ವಿಶ್ವಾಸಗಳಿಸಬೇಕಾಗಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಡಿದರು. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ವ್ಯತ್ಯಾಸವನ್ನು

ಬಿಜೆಪಿಯಿಂದ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ : ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹೇಳಿಕೆ

ಪುತ್ತೂರು: ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯ ಎಸಗಿದವರು ಯಾರು ಎಂದು ಗೊತ್ತಿದ್ದರೂ, ಬಿಜೆಪಿ ಪ್ರತಿಭಟನಾ ನಾಟಕ ಮಾಡಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಆಗಿರುವುದು ಕೈಲಾಗದವರು ಮೈ ಪರಚಿಕೊಂಡಂತೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಇವತ್ತು ಪರಿಸ್ಥಿತಿ ಎನಾಗಿದೆ ಎಂದರೆ ಬಿಜೆಪಿ ವಿಲವಿಲ ಒದ್ದಾಡುತ್ತಿದೆ. ಯಾರಿಗೂ ಚಪ್ಪಲಿ ಹಾಕುವ ದುಸ್ತಿತಿ ನಮ್ಮ ಪಕ್ಷಕ್ಕೆ

ಬೈಕಂಪಾಡಿಯಲ್ಲಿ ರೈಲು ಢಿಕ್ಕಿಯಾಗಿ ಬೀಡಾಡಿ ಎಮ್ಮೆಗಳ ಸಾವು : ಜಾನುವಾರುಗಳ ವಿಲೇವಾರಿಗೆ ಮುಂದಾಗದ ಇಲಾಖೆ

ಬೈಕಂಪಾಡಿಯ ಅಂಗರ ಗುಂಡಿಯಲ್ಲಿ ಗೂಡ್ಸ್ ರೈಲು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದ ಜಾನುವಾರಗಳ ವಿಲೇವಾರಿ ಕಾರ್ಯಾಚರಣೆ ಸ್ಥಳೀಯ ಯುವಕರು ಮತ್ತು ಡಿವೈಎಫ್‍ಐ ಮುಖಂಡರ ಸಹಕಾರದಲ್ಲಿ ನಡೆಯಿತು.ರೈಲು ಹಳಿಯ ಮೇಲೆ ಮೇಯುತ್ತಿದ್ದ 20ಕ್ಕೂ ಅಧಿಕ ಎಮ್ಮೆಗಳು ಗೂಡ್ಸ್ ರೈಲು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದವು. ಬೆಳಿಗ್ಗೆ ಅಪಘಾತ ಸಂಭವಿಸಿದ್ದು ಶವಗಳು ಚೆಲ್ಲಾಪಿಲ್ಲಿಯಾಗಿದ್ದರೂ ಸಂಜೆ ತನಕ ಅವುಗಳ ವಿಲೇವಾರಿ ಮಾಡಲು ಇಲಾಖೆ ಮುಂದಾಗಿರಲಿಲ್ಲ. ಈ ಸಂದರ್ಭ

ಚುನಾವಣಾ ಕಣದಿಂದ ದೂರ ಸರಿದ ರಮಾನಾಥ್ ರೈ

ಚುನಾವಣಾ ರಾಜಕೀಯದಿಂದ ನಿವೃತ್ತಗೊಳ್ಳುತ್ತಿದ್ದೇನೆ. ಪಕ್ಷದ ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ರಮಾನಾಥ ರೈ ಘೋಷಿಸಿದ್ದಾರೆ. ಅವರು ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವಿಗೆ ಶ್ರಮಿಸಿದ ರಾಜ್ಯದ ಜನತೆಗೆ ಹಾಗೂ ನನ್ನ ಕ್ಷೇತ್ರದಲ್ಲಿ ನನಗೆ ಮತ ಚಲಾಯಿಸಿದ ಮತದಾರರಿಗೆ, ಪಕ್ಷದ

ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋಲಿನ ಆತ್ಮಾವಲೋಕನ ನಡೆಸುತ್ತೇವೆ-ಡಿ.ಆರ್.ರಾಜು

ಕಾರ್ಕಳ: ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನ ಪಡೆದಿದೆ. ಗೆಲುವಿನ ಹಾಗೂ ಸೋಲಿನ ಅಂತರದ ಕಾರಣದ ಬಗ್ಗೆ ಆತ್ಮಾವಲೋಕನ ನಡೆಸಿ ಉಭಯ ಜಿಲ್ಲೆಯ ನಾಯಕರು ಪಕ್ಷವನ್ನು ಮುಂಬರುವ ಚುನಾವಣೆಗೆ ಸಿದ್ಧಗೊಳಿಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಡಿ.ಆರ್ ರಾಜು ಹೇಳಿದರು. ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಪರ ಅಲೆಯಿಂದ 135 ಸೀಟು ಗೆದ್ದಿದೆ. ಆದರೆ ಎರಡು

ಕಾರ್ಕಳ : ಮೂರು ಮಾರ್ಗದ ಅಂಗಡಿಯಲ್ಲಿ ಮಾರಿಯಮ್ಮನ ಪೂಜೆ

ಕಾರ್ಕಳ ಇಂದಿನಿಂದ ಸಂಭ್ರಮದ ಎರಡು ದಿನಗಳ ಮಾರಿ ಪೂಜೆ ಇಂದು ಬೆಳಗಿನ ಜಾವ ಪ್ರಾರಂಭವಾಗಿ ನಾಳೆ ಸಂಜೆಗೆ ಕೊನೆಗೊಳ್ಳಲಿದೆ. ಇಂದು ಬೆಳಿಗ್ಗೆ ಮೂರು ಮಾರ್ಗದಲ್ಲಿರುವ ಅಂಗಡಿಯಲ್ಲಿ ಮಾರಿಯಮ್ಮನ ಪೂಜೆ ಪುರಸ್ಕಾರ ಮಾಡಿದ ನಂತರ ಕುಳ್ಳಿರಿಸಿ ಬೆಳಗಿನಿಂದಲೇ ಭಕ್ತಾದಿಗಳು ಮಾರಿಯಮ್ಮನ ದರ್ಶನವನ್ನು ಸರತಿ ಸಾಲಿನಲ್ಲಿ ನಿಂತು ದರ್ಶನ್ ಪಡೆದು ತಮ್ಮ ಹರಕೆ ಕಾಣಿಕೆಗಳನ್ನು ಅರ್ಪಿಸಿದರು. ಶ್ರೀದೇವಿ ದುರ್ಗೆ ಅವತಾರವಾಗಿದ್ದು ಊರಿನ ಸಕಲ ಕಷ್ಟ ದಾರಿದ್ರಾ ರೋಗ ರುಜಿನಗಳನ್ನು

ಬಸ್ ಚಾಲಕನ ಅಜಾಗರುಕತೆ ಚಾಲನೆಯಿಂದ ಸರಣಿ ಅಪಘಾತ

ಖಾಸಗಿ ಬಸ್ ಚಾಲಕನೊರ್ವ ಏಕಾಏಕಿ ಬಸ್‍ನ್ನು ಹೆದ್ದಾರಿಗಡ್ಡವಾಗಿ ತಿರುಗಿಸಿದ್ದರ ಪರಿಣಾಮ ನಡೆದ ಸರಣಿ ಅಪಘಾತದಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.ಪಡುಬಿದ್ರಿಯ ಅಪಾಯಕಾರಿ ತಿರುವು ಸಹಿತ ಜಂಕ್ಷನ್‍ನಲ್ಲಿ ಮಂಗಳೂರು ಕಡೆಯಿಂದ ಬಂದ ಖಾಸಗಿ ಬಸ್ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಉಡುಪಿ ಕಡೆಯಿಂದ ಹೆದ್ದಾರಿಯಲ್ಲಿ ವಾಹನಗಳು ಬರುತ್ತಿದ್ದರೂ ಕ್ಯಾರೇ ಎನ್ನದೆ ಏಕಾಏಕಿ ಹೆದ್ದಾರಿಗಡ್ಡವಾಗಿ ಬಸ್ ಚಲಾಯಿಸಿದಾಗ ಹೆದ್ದಾರಿಯಲ್ಲಿ ಬರುತ್ತಿದ್ದ

ತೋಟ ಬೆಂಗ್ರೆ ಜನರಲ್ ಸ್ಟೋರ್ ಗೆ ಬೆಂಕಿ- ಬೆಂಕಿ ನಂದಿಸಲು ಸ್ಥಳೀಯರ ಹರಸಾಹಸ

ಮಂಗಳೂರಿನ ತೋಟ ಬೆಂಗ್ರೆ ಪರಿಸರದ ಜನರಲ್ ಸ್ಟೋರ್ ಗೆ ಬೆಂಕಿಸರಿಸುಮಾರು 2 ಘಂಟೆ ರಾತ್ರಿ ಜನರಲ್ ಸ್ಟೋರ್‍ಗೆ ಬೆಂಕಿ ಕಾಣಿಸಿದ್ದು ಇದ್ದನ್ನು ಗಮನಿಸಿದ್ದ ಸ್ಥಳೀಯರು ಕದ್ರಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಮ್ಮಿಂದ ಆಗುವಷ್ಟು ಸ್ಥಳಿಯರೇ ನಂದಿಸುವಲ್ಲಿ ಕಾರ್ಯದಲ್ಲಿ ತೊಡಗಿದ್ದರು. ಬಳಿಕ ಬಂದ ಕದ್ರಿ ಅಗ್ನಿಶಾಮಕ ದಳದ ಅಧಿಕಾರಿಗಳು ಸಿಬ್ಬಂದಿಗಳು ಜೊತೆ ಸೇರಿ ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿ ಅಂಗಡಿಯ ವಸ್ತುಗಳೆಲ್ಲಾ ಸಂಪೂರ್ಣ