Home Articles posted by v4team (Page 267)

ಮೂಡುಬಿದಿರೆ: ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ  ಕ್ರಮ

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿರುವ, ಹೆಲ್ಮೆಟ್ ಧರಿಸದ, ಚಾಲನ ಅನುಜ್ಞಾ ಪತ್ರವಿಲ್ಲದೆ ಚಾಲನೆಯನ್ನು ಮಾಡುತ್ತಿರುವವರ ವಿರುದ್ಧ ಮೂಡುಬಿದಿರೆ ಪೊಲೀಸರು  ಕ್ರಮಕೈಗೊಂಡರು.

ಮೇ.26ರಂದು ಪಿರ್ಕಿಲು ತುಳು ಸಿನಿಮಾ ತೆರೆಗೆ

ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಸತೀಶ್ ಪೆರ್ನೆ ಮತ್ತು ಶಿವಪ್ರಸಾದ್ ಇಜ್ಜಾವು ನಿರ್ಮಾಣದಲ್ಲಿ ತಯಾರಾದ ಪಿರ್ಕಿಲು ತುಳು ಸಿನಿಮಾ ಮೇ.26ರಂದು ಕರಾವಳಿ ಜಿಲ್ಲೆಯಾದ್ಯಂತ ತೆರಕಾಣಲಿದೆ ಎಂದು ನಿರ್ದೇಶಕ ಹೆಚ್.ಡಿ ಆರ್ಯ ಹೇಳಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸ್ಯ ಮತ್ತು ಕೌಟುಂಬಿಕ ಕಥಾ ಹಂದರ ಹೊಂದಿರುವ ಚಿತ್ರ ಇದ್ದಾಗಿದ್ದು, ಪಿರ್ಕಿಲು ಎಂದು ಊರಿನ ಜನರಿಂದ ಕರೆಸಿಕೊಳ್ಳುವ ಹುಡುಗರು ಏನೆಲ್ಲ

ನಳಿನ್ ಕುಮಾರ್ ಕಟೀಲ್ ವಿರುದ್ಧ ಹಿಂದೂ ಮಹಾಸಭಾ ಕಿಡಿ

ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿರುದ್ಧ ಹಿಂದೂ ಮಹಾಸಭಾ ಕಿಡಿಕಾರಿದೆ. ನಳಿನ್ ಕುಮಾರ್ ಕಟೀಲ್ ಅವರು ತಾಕತ್ತಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲಿ, ಅರುಣ್ ಕುಮಾರ್ ಪುತ್ತಿಲ ಅವರು ಪಡೆದ ಮತಗಳ 10 ಶೇಖಡಾ ಮತಗಳನ್ನು ಪಡೆದು ತೋರಿಸಲಿ ಎಂದು ಹಿಂದೂ ಮಹಾಸಭಾ ಚಾಲಕ್ ಧರ್ಮೇಂದ್ರ ಅಮೀನ್ ಸವಾಲೆಸೆದಿದ್ದಾರೆ. ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಳಿನ್ ಕುಮಾರ್ ಕಟೀಲು ಅವರಿಗೆ ವೈಯಕ್ತಿಕವಾಗಿ ಚುನಾವಣೆ ಎದುರಿಸುವ

ಧಾರ್ಮಿಕ ಕ್ಷೇತ್ರದಿಂದ ಧರ್ಮದ ಜಾಗೃತಿ ನಡೆಯಲಿ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಧಾರ್ಮಿಕ ಕ್ಷೇತ್ರಗಳ ಮೂಲಕ ಧರ್ಮದ ಜಾಗೃತಿ ನಡೆಯಬೇಕು, ಭಕ್ತಿಯ ಆಲಯಗಳಲ್ಲಿ ಭಕ್ತರ ನಿಸ್ವಾರ್ಥ ಸೇವಾ ಸಂಪನ್ನತೆ ಹೆಚ್ಚಾದಾಗ ಕ್ಷೇತ್ರ ಬೆಳಗುತ್ತದೆ. ನಮ್ಮ ಹಿಂದೂ ಸಂಸ್ಕೃತಿ ಪ್ರತೀ ಮನೆಯಿಂದ ಬೆಳಗಿದಲ್ಲಿ ಅದು ಜಗತ್ತಿಗೆ ಬೆಳಕಾಗುತ್ತದೆ ಎಂದು ಉಡುಪಿ ಅಧೋಕ್ಷಜ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ. ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠೆ ಬ್ರಹ್ಮಕುಂಭಾಷೇಕ ಮತ್ತು ನಾಗಮಂಡಲೋತ್ಸವದ ಪ್ರಯುಕ್ತ

ನೂತನ ಸರ್ಕಾರದಲ್ಲಿ ಬಿಲ್ಲವ ಮುಖಂಡರಿಗೆ ಸಚಿವ ಸ್ಥಾನ ನೀಡಿ : ಸತ್ಯಜಿತ್ ಸುರತ್ಕಲ್

ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರದಲ್ಲಿ ಬಿಲ್ಲವ ಸಮುದಾಯದ ಕನಿಷ್ಠ ಎರಡು ಮಂದಿಗೆ ಸಚಿವ ಸ್ಥಾನ ನೀಡಬೇಕೆಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದ್ದಾರೆ. ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರು ವಿಧಾನಪರಿಷತ್ ಸದಸ್ಯರನ್ನು ಒಳಗೊಂಡು ಐದು ಜನ ಶಾಸಕರನ್ನು ಹೊಂದಿರುವ ನಮ್ಮ ಸಮಾಜಕ್ಕೆ ಎರಡು ಮಂತ್ರಿಸ್ಥಾನವನ್ನು ನೀಡಬೇಕು. ಅದೇ ರೀತಿ ನೂತನ

ನೈಋತ್ಯ ರೈಲ್ವೆ ವಲಯದ ಸದಸ್ಯರಾಗಿ ರಾಜೇಶ್ ಪುದುಶೇರಿ ನೇಮಕ

ಬೆಳ್ತಂಗಡಿ: ನೈಋತ್ಯ ರೈಲ್ವೆ ವಲಯದ ಸದಸ್ಯರಾಗಿ ರಾಜೇಶ್ ಪುದುಶೇರಿ ಆಯ್ಕೆಯಾಗಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಇವರ ಸೇವೆಯನ್ನು ಗುರುತಿಸಿ ರಾಜ್ಯ ಸಭಾ ಸದಸ್ಯರು ಹಾಗೂ ಇತರ ನಾಯಕರ ಶಿಫಾರಸ್ಸಿನಂತೆ ಭಾರತ ಸರ್ಕಾರವು ನೈಋತ್ಯ ರೈಲ್ವೆ ವಲಯದ ಸದಸ್ಯರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ರಾಜೇಶ್ ಪುದುಶೇರಿ ಅವರು ಬೆಂಗಳೂರು ರೈಲ್ವೆಯ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ಡಿಜಿ-ಐಜಿಪಿಯಾಗಿ ಆಲೋಕ್‌ ಮೋಹನ್‌ ಅಧಿಕಾರ ಸ್ವೀಕಾರ

ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಆಲೋಕ್‌ ಮೋಹನ್‌ ಸೋಮವಾರ ಅಧಿಕಾರ ಸ್ವೀಕರಿಸಿದರು. ಸಿಬಿಐ ನಿರ್ದೇಶಕರಾಗಿ ನೇಮಕಗೊಂಡ ಪ್ರವೀಣ್‌ ಸೂದ್‌ ಅವರು ಆಲೋಕ್‌ ಮೋಹನ್‌ ಅವರಿಗೆ ಬ್ಯಾಟನ್‌ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಕೊಳ್ನಾಡು: ಕಟ್ಟತ್ತಿಲ ಶ್ರೀ ಮಹಾಮ್ಮಾಯೀ ದೇವಿ ದೈವಸ್ಥಾನ, ಮೇ 23- 29ರ ವರೆಗೆ ದೈವಸ್ಥಾನದ ಬ್ರಹ್ಮಕಲಶ

ವಿಟ್ಲ: ಕೊಳ್ನಾಡು ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಶ್ರೀ ಮಹಾಮ್ಮಾಯೀ ದೇವೀ ಹಾಗೂ ಪರಿವಾರ ದೈವಗಳ ಟ್ರಸ್ಟ್ ವತಿಯಿಂದ ಮೇ 23ರಿಂದ 29ರ ವರೆಗೆ ಶ್ರೀ ಕ್ಷೇತ್ರ ಕಟ್ಟತ್ತಿಲದಲ್ಲಿ ಶ್ರೀ ಮಹಾಮ್ಮಾಯೀ ದೈವದ ಪುನರ್ ಪ್ರತಿಷ್ಠೆ ಬ್ರಹ್ಮಕಲಶ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ನಾಯ್ಕ್ ದೈಪಲ ಮತ್ತು ಟ್ರಸ್ಟ್ ಅಧ್ಯಕ್ಷ ರವೀಂದ್ರನಾಥ ಕೆ.ಮುಳ್ಳೇರಿಯ ತಿಳಿಸಿದರು. ವಿಟ್ಲದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಮಾರು 400 ವರ್ಷಗಳ

ಸರ್ಕಾರದ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸಬೇಕು : ಉದಯ ಶೆಟ್ಟಿ ಮುನಿಯಾಲು

ಸರ್ಕಾರದ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕಾರ್ಯ ನಾವು ಮಾಡಬೇಕಾಗಿದೆ. ಎಂದು ಉದಯ ಶೆಟ್ಟಿ ಮುನಿಯಾಲು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದ ದೊರೆತ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮುಂಬರುವ ತಾಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ನಾವು ಇಂದಿನಿಂದಲೇ ಸಿದ್ಧತೆ ನಡೆಸಬೇಕಾಗಿದೆ ಗೆಲುವಿಗಾಗಿ ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ತಂಡವಾಗಿ ಕಾರ್ಯನಿರ್ವಹಿಸಬೇಕಾಗಿದೆ.