ಆ.12 ಮತ್ತು 13ರಂದು ಬ್ರಹ್ಮಾವರದಲ್ಲಿ ಸಸ್ಯ ಮೇಳ ಮತ್ತು ಆಹಾರೋತ್ಸವ
ಬ್ರಹ್ಮಾವರ ರೋಟರಿ ರೋಯಲ್, ಕೃಷಿ ಕೇಂದ್ರ ಬ್ರಹ್ಮಾವರ, ತೋಟಗಾರಿಕಾ ಇಲಾಖೆ, ಇವರ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66 ನಿರ್ಮಲ ಪ್ರೌಢಶಾಲಾ ಆವರಣದಲ್ಲಿ ಅಗಸ್ಟ್ 12 ಮತ್ತು 13ರಂದು ಸಸ್ಯ ಮೇಳ ಮತ್ತು ಆಹಾರೋತ್ಸವ ಜರುಗಲಿದೆ ಎಂದು ರೋಟರಿ ರೋಯಲ್ ಅಧ್ಯಕ್ಷ ಅಭಿರಾಮ್ ನಾಯಕ್ ಕಾರ್ಯಕ್ರಮದ ಆವರಣದಲ್ಲಿ ಹೇಳಿದರು.
ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು ರೋಟರಿ , ಕೃಷಿ ವಿಜ್ಞಾನಿಗಳು ಇನ್ನಿತರ ಗಣ್ಯರ ಸಮ್ಮುಖದಲ್ಲಿ ಸಸ್ಯ ಮತ್ತು ಮಣ್ಣು ಫಲವತ್ತತೆಯ ಮಾಹಿತಿಯ ವಿಚಾರ ಗೋಷ್ಠಿ , ನಾನಾ ಆಹಾರ ತಿನಿಸುಗಳು ನಡೆಯಲಿದ್ದು 2 ದಿನವೂ ಸಂಜೆ ಆರು ಗಂಟೆ ತನಕ ಸಾರ್ವಜನಿಕರಿಗೆ ಮುಕ್ತ ಅವಕಾಶ ಇದೆ.
ಕಾರ್ಯಕ್ರಮದಲ್ಲಿ ರಾಜಾದ್ಯಂತ ನೂರಾರು ಸಸ್ಯ ಮತ್ತು ಆಹಾರ ಉತ್ಪನ್ನ ಮಳಿಗೆಗಳು ಆಗಮಿಸಲಿದ್ದು ಅದರ ಪೂರ್ವ ಸಿದ್ಧತೆಯಾಗಿ ಸ್ಟಾಲ್‍ಗಳ ರಚನೆಯ ಕಾರ್ಯ ನಡೆಯುತ್ತಿದೆ .
ಮಾಜಿ ರೋಟರಿ ಜಿಲ್ಲಾ ಗವರ್ನರ್ ಜ್ಞಾನ ವಸಂತ ಶೆಟ್ಟಿ , ರೋಟರಿ ರಾಯಲ್ ಕಾರ್ಯದರ್ಶಿ ವಿಜಯೇಂದ್ರ ಶೆಟ್ಟಿ, ಸಂಯೋಜಕ ಅಶೋಕ್ ಕುಮಾರ್ ಶೆಟ್ಟಿ, ಬ್ರಹ್ಮಾವರ ಕೃಷಿ ಕೇಂದ್ರದ ವಿಜ್ಞಾನಿ ಡಾ , ಧನಂಜಯ ಬಿ. ಉಪಸ್ಥಿತರಿದ್ದರು.