Home Articles posted by v4team (Page 416)

ಶಿಥಿಲಾವಸ್ಥೆಯಲ್ಲಿ ಕರ್ನಾಟಕ-ಕೇರಳ ಸಂಪರ್ಕದ ಕೊಂಡಿ

ಪುತ್ತೂರು; ಎರಡು ಪ್ರಬಲ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಕಿರುಸೇತುವೆಯೊಂದು ಯಾರೂ ಕೇಳುವವರಿಲ್ಲದೆ ಅನಾಥಪ್ರಜ್ಞೆಯಿಂದ ಶಿಥಿಲಗೊಂಡು ಬಳಲುತ್ತಿದೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬಲಾಡ್ಯವಾಗಿರುವ ಈ ರಾಜ್ಯಗಳ ನಡುವೆ ಈ ಕಿರುಸೇತುವೆಗೆ ಕಾಯಕಲ್ಪವಾಗದೆ ಇಲ್ಲಿ ಸಂಚರಿಸುವ ವಾಹನಗಳಿಗೆ ಮಾರಕ ಪ್ರದೇಶವಾಗಿ ಮಾರ್ಪಟ್ಟಿದೆ. ಸುಮಾರು 42 ವರ್ಷಗಳ ಹಿಂದೆ

ಬ್ರಹ್ಮಾವರ ; ಅಟೋ ಚಾಲಕರು ಸೂಕ್ತ ದಾಖಲೆ ಅಟೋದಲ್ಲಿರಿಸಿಕೊಳ್ಳಿ – ಠಾಣಾಧಿಕಾರಿ ರಾಜಶೇಖರ

ಬ್ರಹ್ಮಾವರ ರಥ ಬೀದಿಯ ಬಳಿ ಆರ್. ಕೆ. ಶೆಟ್ಟಿಯರಿಂದ ಕೊಡುಗೆಯಾಗಿ ನೂತನವಾಗಿ ರಚನೆಯಾದ ಅಯ್ಯಪ್ಪ ರಿಕ್ಷಾ ನಿಲ್ದಾಣವನ್ನು ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ರಾಜಶೇಖರ ವಂದಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಟೋ ಚಾಲಕರು ಯಾವತ್ತೂ ಸೂಕ್ತ ದಾಖಲೆಯನ್ನು ಅಟೋದಲ್ಲಿ ಇರಿಸಿಕೊಳ್ಳಿ. ದೇಶದ ಬಹತೇಕ ಜನರು ಅಟೋ ರಿಕ್ಷಾವನ್ನು ನಂಬಿಕೊಂಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ನಿಮ್ಮ ಕುಟುಂಬದ ಸುರಕ್ಷೆಗೆ ಇದು ಸಹಕಾರಿ ಎಂದರು. ಬ್ರಹ್ಮಾವರ ವ್ಯವಸಾಯ ಸೇವಾ

ಟಯರ್ಸ್ ಉದ್ಯಮಿ ಪೂವಪ್ಪ ಕುಂದರ್ ನಿಧನ

ಮೂಡುಬಿದಿರೆ : ಕಳೆದ ಹಲವು ವರ್ಷಗಳಿಂದ ಟಯರ್ ಉದ್ಯಮವನ್ನು ನಡೆಸುತ್ತಾ ಬಂದಿರುವ ಹನುಮಾನ್ ಟಯರ‍್ಸ್ ನ ಮಾಲಕ, ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಪೂವಪ್ಪ ಕುಂದರ್ ಅವರು ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಲತ: ಪರಂಗಿಪೇಟೆಯ ನಿವಾಸಿಯಾಗಿದ್ದ ಪೂವಪ್ಪ ಕುಂದರ್ ಮೂಡುಬಿದಿರೆಗೆ ಉದ್ಯೋಗವನ್ನು ಅರಸಿಕೊಂಡು ಬಂದು ಮೂಡುಬಿದಿರೆಯಲ್ಲಿ ಮಂಜುನಾಥ ಟೈರ್ ರಿಸೋಲಿಂಗ್ ಘಟಕದ ಮೂಲಕ ಅನುಭವ ಗಳಿಸಿ ಬಳಿಕ ಸ್ವರಾಜ್ಯ ಹನುಮಾನ್

ಉಳ್ಳಾಲ – ಪುತ್ರನ ಆತ್ಮಹತ್ಯೆ ಬೆನ್ನಲ್ಲೇ, ತಂದೆಯೂ ಆತ್ಮಹತ್ಯೆ

ಉಳ್ಳಾಲ : ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಎಂಬವರ ಮೃತದೇಹ ಸೋಮವಾರ ಬೆಳಿಗ್ಗೆ ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಪುತ್ರನೂ ಆತ್ಮಹತ್ಯೆ ನಡೆಸಿದ 32 ದಿನಗಳ ಅಂತರದಲ್ಲಿ ತಂದೆಯೂ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಪುತ್ರ ರಾಜೇಶ್ (26) ಕಳೆದ ಜು. 10 ರಂದು ನಾಪತ್ತೆಯಾಗಿದ್ದು, ಬಳಿಕ ರಾಜೇಶ್ ನ ಮೃತದೇಹ 12 ರಂದು ಬೆಳಗ್ಗೆ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ

ಕುಲಾಲ ಸಂಘ ಮುಂಬಯಿ ಮಹಿಳಾ ವಿಭಾಗದ ಆಶ್ರಯದಲ್ಲಿ, ”ಆಟಿದ ಒಂಜಿ ದಿನ” ಕಾರ್ಯಕ್ರಮ

ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಅ. 6 ರಂದು ಆಟಿದ ಒಂಜಿ ದಿನ ಕಾರ್ಯಕ್ರಮವನ್ನು ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್ ಹಾಲ್ ನಲ್ಲಿ ಕುಲಾಲ ಸಂಘ ಮುಂಬಯಿ ಇಲ್ಲಿ ಅಧ್ಯಕ್ಷರಾದ ರಘು ಎ. ಮೂಲ್ಯ ಪಾದೆ ಬೆಟ್ಟು, ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಮಮತಾ ಎಸ್. ಗುಜರನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ನಡೆಯಿತು.ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಘದ ಅಧ್ಯಕ್ಷ

ಬೈಂದೂರಿನ ವಿಹಿಂಪ ಮತ್ತು ಭಜರಂಗದಳದಿಂದ ಅಖಂಡ ಭಾರತ ಸಂಕಲ್ಪ ದಿನ ಪ್ರಯುಕ್ತ ಪಂಜಿನ ಮೆರವಣಿಗೆ

ವಿಶ್ವಹಿಂದೂ ಪರಿಷತ್ ಭಜರಂಗದಳ ಬೈಂದೂರು ಪ್ರಖಂಡ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಪ್ರಯುಕ್ತ ಪಂಜಿನ ಮೆರವಣಿಗೆ ಬೈಂದೂರಿನಲ್ಲಿ ನಡೆಯಿತು. ಯೋಜನಾನಗರದ ನಾಗಬನ ಸಮಿತಿ ಅಧ್ಯಕ್ಷರಾದ ಕೃಷ್ಣದೇವಾಡಿಗ ಬೈಂದೂರು ಪಂಜಿನ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು. ಸಭಾಕಾರ್ಯಕ್ರಮದಲ್ಲಿ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ದಿಕ್ಸುಚಿ ಭಾಷಣಕಾರರಾಗಿ

ಸುಳ್ಯದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ

ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಸುಳ್ಯ ಘಟಕ, ಸುಳ್ಯ ತಾಲೂಕು ಸಮಿತಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಹಾಗೂ ಗ್ರಾಮೀಣ ಕ್ರೀಡಾಕೂಟ, ಅಭಿನಂದನಾ ಸಮಾರಂಭ, ಸಾಧಕರಿಗೆ ಸನ್ಮಾನ, ಪದಗ್ರಹಣ ಸಮಾರಂಭ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಕೆವಿಜಿ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಅಭಿನಂದಿಸಲಾಯಿತು. ನಂತರ ವಿವಿಧ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಕಳ : ಕೊಳಚೆ ನೀರಿನ ದುರ್ವಾಸನೆಯಿಂದ ಸ್ಥಳೀಯ ಜನತೆಗೆ ಸಂಕಷ್ಟ

ಕಾರ್ಕಳ ಪುರಸಭೆ ವ್ಯಾಪ್ತಿಯ ಗಾಂಧಿ ಮೈದಾನದ ಮುಖ್ಯ ರಸ್ತೆಯಲ್ಲಿ ಸುಮಾರು 20 ದಿನಗಳಿಂದ ಒಳ ಚರಂಡಿಯ ನೀರು ಹರಿಯುತ್ತದೆ. ಈ ನೀರು ದುರ್ವಾಸನಿಂದ ಕೂಡಿದ ಪರಿಣಾಮ ಸ್ಥಳೀಯ ವಸತಿ ಸಂಕೀರ್ಣದಲ್ಲಿ ವಾಸಿಸುವ ಜನತೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ಅದಲ್ಲದೆ ಪಕ್ಕದಲ್ಲಿ ಕ್ರೈಸ್ ಕಿಂಗ್ ಚರ್ಚ್ ಹಾಗೂ ಕಾನ್ವೆಂಟ್ ಮತ್ತು ಸಾವಿರಾರು ಮಕ್ಕಳು ಓದುತ್ತಿರುವ ಶಾಲೆಯೂ ಇದೆ. ಎಲ್ಲರೂ ಈ ತ್ಯಾಜ್ಯ ನೀರಿನ ದುರ್ವಾಸನೆಯನ್ನು ಸಹಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.

ದ.ಕ. ಜಿಲ್ಲೆಯ ಬಿಜೆಪಿ ಶಾಸಕರಿಂದ ಪ್ರತಿಭಟನೆ

ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ಶಾಸಕರಿಗೆ ಅಗೌರವ, ಹಕ್ಕುಚ್ಯುತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಗ್ರಾಪಂ, ತಾಲೂಕು ಮಟ್ಟದ ಕಾರ್ಯಕ್ರಮಗಳನ್ನು ದಿಢೀರ್ ರದ್ದುಪಡಿಸಿ ಕಾಂಗ್ರೆಸ್ ನಾಯಕರು ದುರಾಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಗಳು ಕ್ಷೇತ್ರದ ಶಾಸಕರನ್ನು ಕಡೆಗಣಿಸಿ ದರ್ಪ ಮೆರೆಯುತ್ತಾರೆ. ಗ್ರಾಪಂ ಮಟ್ಟದ ಅಧಿಕಾರಿಗಳನ್ನು

ಕಟಪಾಡಿ: ಕಾರು ಡಿಕ್ಕಿ ದಂಪತಿಗೆ ಗಾಯ

ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಗಾಯಗೊಂಡ ಘಟನೆ ಕಟಪಾಡಿ ಬಳಿ ನಡೆದಿದೆ. ತೆಂಕ ಎರ್ಮಾಳು ನಿವಾಸಿಗಳಾದ ದೀರಜ್ ಹಾಗೂ ಅವರ ಪತ್ನಿ ಪವಿತ್ರ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಪರಿಣಾಮ ಕಟಪಾಡಿ ಪೇಟೆ ಬಳಿ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕವನ್ನು ಏರಿ ನಂತರ ದ್ವಿಚಕ್ರ ವಾಹನಕ್ಕೆ