Home Articles posted by v4team (Page 763)

ಮೂಡುಬಿದಿರೆ ಗಣೇಶೋತ್ಸವ ಶೋಭಾಯಾತ್ರೆ : ತೆಂಗಿನ ಗೆರಟೆಯಲ್ಲಿ ಕಷಾಯ ಸೇವನೆ

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಉತ್ತಮ ಆರೋಗ್ಯದ ದೃಷ್ಠಿಯಿಂದಲೋ ಅಥವಾ ಆರ್ಥಿಕವಾಗಿ ಹಿಂದುಳಿದುದರಿಂದ ಗ್ಲಾಸ್ ಅಥವಾ ಸ್ಟೀಲ್ ಲೋಟಗಳನ್ನು ತೆಗೆದುಕೊಳ್ಳಲು ಅಸಹಾಯಕರಾಗಿರುವುದರಿಂದಲೋ ಏನೋ ತೆಂಗಿನ ಗೆರಟೆಯಲ್ಲಿಯೇ ಚಹಾ, ನೀರು ಅಥವಾ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರು. ನಂತರದ ದಿನಗಳಲ್ಲಿ ನಾವು ಅಭಿವೃದ್ಧಿ ಹೊಂದುತ್ತಿದ್ದಂತೆ ಪ್ಲಾಸ್ಟಿಕ್ ಲೋಟ, ಸ್ಟೀಲ್

ಆಯುರ್ವೇದ ಚಿಕಿತ್ಸೆ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಪದವಿನಂಗಡಿಯ”ಪುನರ್ವಸು” ಆಯುರ್ವೇದ ಕ್ಲಿನಿಕ್

ಮಂಗಳೂರಿನ ಪದವಿನಂಗಡಿಯಲ್ಲಿರುವ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಔಷಧ ಮಳಿಗೆ ಹಾಗೂ ಪುನರ್ವಸು ಆಯುರ್ವೇದ ಕ್ಲೀನಿಕ್ ರೋಗಿಗಳ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಬೆಳಗ್ಗೆ 10ರಿಂದ ಸಾಯಂಕಾಲ 7ರ ವರೆಗೆ ಕಾರ್ಯ ನಿರ್ವಹಿಸುತ್ತದೆ. ವೈದ್ಯಕೀಯ ಸಲಹೆ ಹಾಗೂ ಸಮಾಲೋಚನೆಗೆ ವೈದ್ಯೆ ಡಾ ಸೌಮ್ಯಶ್ರೀ ಕೆ. ಎಂ ಇವರು ಲಭ್ಯರಿರುತ್ತಾರೆ. ಅಲರ್ಜಿ, ಥೈರಾಯಿಡ್, ಮಧುಮೇಹ, ಕೊಲೆಸ್ಟ್ರಾಲ್, ಬೊಜ್ಜು, ಬಂಜೆತನ, ಸ್ತ್ರೀ ರೋಗಗಳು, ಡಿಸ್ಕ್‍ನ ಸಮಸ್ಯೆ, ವಾತ ರೋಗಗಳು,

ಪ್ರೀತಿಯ ಸಾಕು ನಾಯಿಗೆ ಸೀಮಂತ

ಮಂಗಳೂರು:ಮಹಿಳೆಯರಿಗೆ ಸೀಮಂತ ಮಾಡುವುದು ಸಾಮಾನ್ಯ,ಆದರೆ ಇಲ್ಲೊಬ್ಬರು ಸಾಕು ನಾಯಿಗೆ ಸೀಮಂತದ ಮಾಡಿದ್ದಾರೆ. ಸೀಮಂತದ ಫೂಟೊ, ವೀಡಿಯೋ ವ್ಯೆರಲ್ ಆಗಿವೆ.ಮಂಗಳೂರಿನ ಗುರುಪುರ ಕ್ಯೆಕಂಬದ ಮಂಜುಳ ಹಾಗೂ ಭಾಸ್ಕರ್ ಎಂಬುವವರ ಪುತ್ರಿ ಸುಶ್ಮಿತಾ ಸಾಲ್ಯಾನ್ ಎಂಬುವವರಿಗೆ ಸಾಕುಪ್ರಾಣಿ ಎಂದರೆ ತುಂಬಾ ಪ್ರೀತಿ, ತಮ್ಮ ಮನೆಯಲ್ಲಿ ಸಾಕಿದ್ದ, ಒಂದುವರೆ ವರುಷದ ಶಾಡೊ ಎಂಬ ಗರ್ಭಿನಿ ನಾಯಿಗೆ ಹಸಿರು ಬಳೆ ,ಹಸಿರು ಸೀರೆ , ಕುಂಕುಮ ಅರಸಿನ ಹಚ್ಚಿ, ಆರತಿ ಬೆಳಗಿ ಸೀಮಂತ

ಇಲಿಜ್ವರ : ಉಡುಪಿ ಜಿಲ್ಲೆಯಲ್ಲಿ 112 ಮಂದಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 305 ಮಂದಿ

ಹವಾಮಾನ ವೈಪರೀತ್ಯದಿಂದಾಗಿ ಕರಾವಳಿಯಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಶೀತ, ಜ್ವರ, ಗಂಟಲು ನೋವು, ವಾಂತಿ, ಅಲರ್ಜಿಯಿಂದ ವೈದ್ಯರನ್ನು ಸಂಪರ್ಕಿಸುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ನಡುವೆ ಸದ್ದಿಲ್ಲದೇ ಇಲಿ ಜ್ವರವೂ ತನ್ನ ಕಬಂಧ ಬಾಹುವನ್ನು ಚಾಚುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಮಳೆಗಾಲದಲ್ಲಿ 112 ಮಂದಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 305 ಮಂದಿ ಇಲಿಜ್ವರ ಬಾಧಿತರಾಗಿದ್ದಾರೆ.

ಪತ್ರಕರ್ತ ಸಂಶುದ್ದೀನ್ ಎಣ್ಮೂರ್ ಅವರಿಗೆ ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ ಪ್ರದಾನ

ಬಂಟ್ವಾಳ: ಪತ್ರಕರ್ತ ಸಂಶುದ್ದೀನ್ ಎಣ್ಮೂರು ಅವರಿಗೆ ವೆಬ್ ಸೈಟ್ ನಲ್ಲಿ ಪ್ರಕಟವಾದ ರಾಜ್ಯ ಮಟ್ಟದ ಅತ್ಯುತ್ತಮ ವರದಿಗೆ ನೀಡುವ ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ – 2022 ಅನ್ನು ರವಿವಾರ ನೀಡಿ ಗೌರವಿಸಲಾಯಿತು ನಿರತ ಸಾಹಿತ್ಯ ಸಂಪದ ಕಡೆಗೋಳಿ ತುಂಬೆ ಹಾಗೂ ಗಲ್ಫ್ ಕನ್ನಡಿಗ ಡಾಟ್ ಕಾಮ್ ಇದರ ಜಂಟಿ ಆಶ್ರಯದಲ್ಲಿ ಬಿ ಸಿ ರೋಡ್ ನ ಕೈಕುಂಜೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತುವಿನ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ರಕರ್ತ ಸಂಶುದ್ದೀನ್

ಮಣಿಪಾಲ: ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಓರ್ವ ಪೊಲೀಸ್ ವಶಕ್ಕೆ

ಕುಡಿದ ಮತ್ತಿನಲ್ಲಿ ಕಾರನ್ನು ಹಿಮ್ಮುಖವಾಗಿ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಓರ್ವ ಗಾಯಗೊಂಡು, ಎರಡು ಕಾರುಗಳು ಜಖಂಗೊಂಡಿರುವ ಘಟನೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಶನಿವಾರ ತಡರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಅಪಘಾತ ಪಡಿಸಿದ ಕಾರು ಚಾಲಕ ಸುಹಾಸ್ ಹಾಗೂ ಆತನ ಕಾರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇವರು ತನ್ನ ಸ್ನೇಹಿತರೊಂದಿಗೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿಯ ಬ್ಯಾರೆಲ್ಸ್ ಪಬ್‌ಗೆ ಬಂದಿದ್ದು, ಅಲ್ಲಿ ಮದ್ಯ ಸೇವಿಸಿ

ಪುತ್ತೂರು: ಅಪಘಾತದಲ್ಲಿ ಬೈಕ್ ಸವಾರ ಮೃತ್ಯು

ಪುತ್ತೂರು: ಬೈಕೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಬಸ್‌ಗೆ ಡಿಕ್ಕಿಯಾದ ಘಟನೆ ಸೆ.3ರಂದು ರಾತ್ರಿ ಪರ್ಲಡ್ಕ  ರಸ್ತೆಯಲ್ಲಿ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ವೀರಮಂಗಲದ ಭರತ್‌ರಾಜ್ ಗೌಡ ಎಂಬವರು ಮೃತಪಟ್ಟಿದ್ದಾರೆ. ಪುತ್ತೂರು ಗಣೇಶೋತ್ಸವ ಶೋಭಾಯಾತ್ರೆಗೆಂದು ಬಂದಿದ್ದ ಕೊಳ್ತಿಗೆ ಪೆರ್ಲಂಪಾಡಿ ನಿವಾಸಿ ಜಯದೀಪ್ ಅವರ ಪುತ್ರ ಧನುಷ್(24ವ) ಮತ್ತು ವೀರಮಂಗಲ ಖಂಡಿಗ ಚಂದ್ರಶೇಖರ್ ಗೌಡ ಅವರ ಪುತ್ರ ಭರತ್ ರಾಜ್ ಗೌಡ(22ವ)ರವರು ಡ್ಯೂಕ್

ಉಳ್ಳಾಲ: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ

ಉಳ್ಳಾಲ, ಸೆ.3; ಹಿಂದೂ ಯುವಸೇನೆಯ ಸಕ್ರಿಯ ಕಾರ್ಯಕರ್ತ ಕುಂಪಲ ಹನುಮಾನ್ ನಗರ ನಿವಾಸಿ ಜಯಂತ್  ಎಸ್. ಕುಂಪಲ(49)  ಕೃಷ್ಣ ನಗರದ  ಬಾಡಿಗೆ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಿಕ್ಷಾ ಚಾಲಕನಾಗಿದ್ದ ಅವರು ಕುಂಪಲ ಹನುಮಾನ್ ನಗರದಲ್ಲಿ ನೂತನ ಮನೆ ನಿರ್ಮಾಣದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈ ನಡುವೆ ಆತ್ಮಹತ್ಯೆಗೈದಿರುವುದು ಸಂಶಯಕ್ಕೆಡೆ ಮಾಡಿದೆ. ಕೂಳೂರಿನಲ್ಲಿ ನಿನ್ನೆ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಯಂತ್ ,

ಅನಾರೋಗ್ಯ ಪೀಡಿತ ವಯೋವೃದ್ದೆಯ ನೋವಿಗೆ ಸ್ಪಂದಿಸಿದ ಯುವಕರು

ಕಾಪು :ಪುರಾಸಭಾ ವ್ಯಾಪ್ತಿಯ ಮಲ್ಲಾರಿನ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಅನಾರೋಗ್ಯ ಪೀಡಿತ ವಯೋವೃದ್ದೆಯ ನೋವಿಗೆ ಸ್ಪಂದಿಸುವ ಮೂಲಕ ಯುವಕರು ಮಾದರಿಯಾಗಿದ್ದಾರೆ. ಕೊಂಬಗುಡ್ಡೆ ಪ್ರಶಾಂತ್ ಪೂಜಾರಿ, ಪುರಸಭಾ ಸದಸ್ಯ ಉಮೇಶ್ ಪೂಜಾರಿ, ಶಿವಾನಂದ ಪೂಜಾರಿ ಸಹಿತ ಯುವಕರ ತಂಡ ಒಂಟಿ ಮಹಿಳೆಯ ಅನಾರೋಗ್ಯ ಪರಿಸ್ಥಿತಿಯನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕುಟುಂಬ ವರ್ಗದಿಂದ ದೂರವಾಗಿದ್ದ ಲೀಲಾ ಪೂಜಾರ್ತಿ ತೀವ್ರ ಅನಾರೋಗ್ಯದಿಂದ

ಸೆ.4ರಂದು ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ “ಅಮೃತಭಾರತಿಗೆ ಸಂಗೀತದಾರತಿ” ಕಾರ್ಯಕ್ರಮ

ಸಂಗೀತ ಭಾರತಿ ಟ್ರಸ್ಟ್ (ರಿ.) ಕುಂದಾಪುರ ಮತ್ತು ಚಿರಂತನ ಚ್ಯಾರಿಟೇಬಲ್ ಟ್ರಸ್ಟ್, ಸುರತ್ಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 04, ಬೆಳಗ್ಗೆ 09:30ರಿಂದ ಸಂಜೆ 07:00 ರವರೆಗೆ ಹಿಂದುಸ್ಥಾನಿ ಯುವ ಶಾಸ್ತ್ರೀಯ ಸಂಗೀತೋತ್ಸವ “ಅಮೃತಭಾರತಿಗೆ ಸಂಗೀತದಾರತಿ” ಕಾರ್ಯಕ್ರಮ ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ. ಉದಯೋನ್ಮುಖ ಸಂಗೀತ ಕಲಾವಿದರಿಗೆ ಹಾಗೂ ಕಲೆ, ಸಂಸ್ಕೃತಿ, ಸಂಗೀತಕ್ಕೆ ಹೆಚ್ಚಿನ ಉತ್ತೇಜನ ನೀಡಲೆಂದು ರೂಪಿಸಿದ ಈ