ಬಜಪೆ: ಯುವಕ ನಾಪತ್ತೆ
ಬಜಪೆ: ಗುರುಪುರ ಫಲ್ಗುಣಿ ನದಿಯ ಸೇತುವೆ ಸಮೀಪದಿಂದ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಳಲಿ ಮಟ್ಟಿ ತಿಮ್ಮೊಟ್ಟು ನಿವಾಸಿ ಚೇತನ್ ಪೂಜಾರಿ ( 27) ಎಂದು ತಿಳಿದು ಬಂದಿದೆ.
ಗುರುವಾರ ಸಂಜೆಯಿಂದ ಗುರುಪುರ ಫಲ್ಗುಣಿ ನದಿ ಸೇತುವೆಯಲ್ಲಿ ಬೈಕ್ ವೊಂದು ನಿಲ್ಲಿಸಿವ ಕುರಿತು ಬಜ್ಪೆ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬೈಕ್ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದಾಗ ಚೇತನ್ ಪೂಜಾರಿ ಗುರುವಾರದಿಂದ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಬಳಿಕ ಆತನ ಮನೆಯವರನ್ನು ಕೆರೆಸಿ ವಿಚಾರಿಸಿದಾಗ ಪತ್ತೆಯಾಗಿರುವ ಬೈಕ್ ಚೇತನ್ ಚಲಾಯಿಸಿಕೊಂಡು ಬಂದಿರುವುದು ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.