ಬಂಟ್ವಾಳ: ಇರ್ವತ್ತೂರು ಪದವಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ
ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇರ್ವತ್ತೂರುಪದವು ಆಶ್ರಯದಲ್ಲಿ 17ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಇರ್ವತ್ತೂರು ಗಣೇಶನ ಕಟ್ಟೆಯ ಬಳಿ ನಡೆಯಿತು.
ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ರಾಮಕೃಷ್ಣ ಎಸ್. ಧ್ವಜಾರೋಹಣ ನೆರವೇರಿಸಿದರು. ಆಟೋಟ ಸ್ಪರ್ಧೆ ಹಾಗೂ ಸಭಾ ಕಾರ್ಯಕ್ರಮಕ್ಕೆ ಇರ್ವತ್ತೂರು ಗ್ರಾ.ಪಂ. ಅಧ್ಯಕ್ಷರಾದ ಮಾಲತಿ ಚಾಲನೆ ನೀಡಿದರು.
ಇರ್ವತ್ತೂರು ಗ್ರಾ.ಪಂ. ಉಪಾಧ್ಯಕ್ಷರಾದ ಹರಿಣಾಕ್ಷಿ ನಾಗೇಶ್, ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ನಿಶ್ಚಿತ್ ಶೆಟ್ಟಿ ಮಜಲು, ಗೌರವಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಇರ್ವತ್ತೂರು, ದೇವಪ್ಪ ಶೆಟ್ಟಿ ಕುಂಟಜಾಲು, ಇರ್ವತ್ತೂರು ಗ್ರಾ.ಪಂ. ಸದಸ್ಯರಾದ ಸುಧೀಂದ್ರ ಶೆಟ್ಟಿ ಎರ್ಮೆನಾಡು, ಪ್ರಶಾಂತ್ ಜೈನ್ ಸೇವಾ, ವಿಜಯ ಶೆಟ್ಟಿ ಇರ್ವತ್ತೂರು, ಸುಚಿತ್ರ ಶೆಟ್ಟಿ, ದಯಾನಂದ ಎರ್ಮೆನಾಡು, ಶುಭಕರ ಶೆಟ್ಟಿ ಮಠ, ಎಂ.ಪಿ ಶೇಖರ್, ಸಮಿತಿಯ ಸದಸ್ಯರಾದ ಸತೀಶ್ ಕರ್ಕೆರ, ಗಂಗಯ್ಯ ಡಿ.ಎನ್, ಸಂಜೀವ ಡಿ.ಎನ್, ಆನಂದ ದೊಡ್ಡಕೆರೆ, ಸುಧಾಕರ, ಶ್ರೀಧರ, ಯತೀಶ್ ಸೇವಾ, ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.