ಬಪ್ಪನಾಡು: ಒಂದೂವರೆ ಲಕ್ಷ ಮಲ್ಲಿಗೆ ಚೆಂಡು ಸಮರ್ಪಣೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಉತ್ಸವದ ಅತ್ಯಂತ ಶ್ರೇಷ್ಠ ಸೇವೆಯಾಗಿರುವ ಶ್ರೀದೇವಿಯ ಶಯನೋತ್ಸವಕ್ಕೆ ಹೂ ಅರ್ಪಿಸುವ ಸೇವೆಯಂಗವಾಗಿ ಈ ಬಾರಿ ಒಂದೂವರೆ ಲಕ್ಷಕ್ಕೂ ಮಿಕ್ಕಿದ ಮಲ್ಲಿಗೆ ಚೆಂಡು ಸಮರ್ಪಣೆಯಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ. ಸಂಜೆ 3 ಗಂಟೆಯ ಬಳಿಕ ಮಲ್ಲಿಗೆ ಸಮರ್ಪಣೆ ಸೇವೆ ಆರಂಭ ಗೊಂಡಿತ್ತು. ಮಲ್ಲಿಗೆಯನ್ನು ತಡ ರಾತ್ರಿ ಗರ್ಭಗುಡಿಯೊಳಗೆ ಜೋಡಿಸಿ ದೇವಿಗೆ ಶಯನೋತ್ಸವ ನಡೆಯಿತು.

Related Posts

Leave a Reply

Your email address will not be published.