ರಾಷ್ಟ್ರಧ್ವಜದ ಬ್ಯಾಡ್ಜ್ ಉಲ್ಟಾ ಧರಿಸಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್

ರಾಷ್ಟ್ರಧ್ವಜದ ಬ್ಯಾಡ್ಜ್ ನ್ನು ಉಲ್ಟಾ ಧರಿಸಿ ರಸ್ತೆಯಲ್ಲಿ ಪಥಸಂಚಲನ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬೆಂಗಳೂರು :ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ರಾಷ್ಟ್ರದ ಧ್ವಜಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಚಿವ ಭೈರತಿ ಬಸವರಾಜ್ ಅಪಮಾನ ಮಾಡಿದ್ದಾರೆ.ಇನ್ನೊಂದು ಕಡೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿರಂಗಾ ಯಾತ್ರೆ ನಡೆಸುವ ಸಮಯದಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಎಬಿವಿಪಿ ಧ್ವಜ ಹಿಡಿದು ಅವಮಾನ ಮಾಡಿದ್ದಾರೆ.

ರಾಷ್ಟ್ರ ಧ್ವಜಕ್ಕಾಗಿ ರೂಪಿಸಲಾಗಿರುವ ಧ್ವಜ ಸಂಹಿತೆ ಪರಿಗಣನೆ ಮಾಡದ ಸಚಿವ ಭೈರತಿ ಬಸವರಾಜ್ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರ ಧ್ವಜದ ಬ್ಯಾಡ್ಜ್ ಅನ್ನು ಉಲ್ಟಾ ಧರಿಸಿ ರಸ್ತೆಯಲ್ಲಿ ಪಥಸಂಚಲನ ಮಾಡಿದ್ದಾರೆ. ನಳೀನ್ ಕುಮಾರ್ ಕಟೀಲ್ ಹಾಗೂ ಭೈರತಿ ಬಸವರಾಜ್. ನಿನ್ನೆ ಕೆ.ಆರ್.ಪುರಂ ನಲ್ಲಿ ನಡೆದ ರೋಡ್ ಶೋ ನಲ್ಲಿ ಧ್ವಜಕ್ಕೆ ಅಪಮಾನ ಮಾಡಿದ್ದಾರೆ.
