ಬೆಂಗಳೂರು: ಎನ್‍ಬಿಯ ಮಿಸ್ಟರ್, ಮಿಸ್, ಟೀನ್ ಕರ್ನಾಟಕ-2023ರ ಸೀಸನ್-4
ಎನ್‍ಬಿಯ ಮಿಸ್ಟರ್, ಮಿಸ್, ಟೀನ್ ಕರ್ನಾಟಕ-2023ರ ಸೀಸನ್ 4 ಬೆಂಗಳೂರಿನ ಫಾಕ್ಸ್‍ಗ್ಲೋವ್ ಇಂಟರ್‍ನ್ಯಾಶನಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಈ ಸ್ಪರ್ಧೆಗೆ ಕರ್ನಾಟಕದ ವಿವಿಧ ಭಾಗಗಳಿಂದ 35 ಸ್ಪರ್ಧಿಗಳು 3 ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಎನ್‍ಬಿಯ ಮಿಸ್ಟರ್ ಕರ್ನಾಟಕದಲ್ಲಿ ವಿನ್ನರ್ ಆಗಿ ವಚನ ಎಸ್, 1ನೇ ರನ್ನರ್ ಅಪ್ ಸಂತೋಷ್ ಗೌಡ, ಎರಡನೇ ರನ್ನರ್ ಅಪ್ ಆಗಿ ಪ್ರಜ್ವಲ್ ಆಯ್ಕೆಯಾದರು.
ಎನ್‍ಬಿಯ ಮಿಸ್ ಕರ್ನಾಟಕದಲ್ಲಿ ಪ್ರೇಕ್ಷಾ ಎನ್.ವಿ ವಿನ್ನರ್ ಆದ್ರೆ, ಅನುಶಿಕ ಕೊಟ್ಟಾರಿ 1ನೇ ರನ್ನರ್ ಅಪ್, ರೋಶನಿ ಗೌಡ 2ನೇ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು. ಮಿಸ್ ಟೀನ್ ಕರ್ನಾಟಕ ವಿಭಾಗದಲ್ಲಿ ವಿನ್ನರ್ ಆಗಿ ಸಿಂಚನ ಪ್ರಕಾಶ್, 1ನೇ ರನ್ನರ್ ಅಪ್ ಆಗಿ ಇಶಿಕಾ ಶೆಟ್ಟಿ, ಎರಡನೇ ರನ್ನರ್ ಅಪ್ ಆಗಿ ಡಿಂಲ್ಪಿಶಾ ಪ್ರಶಸ್ತಿಯನ್ನು ಗೆದ್ದುಕೊಂಡರು.
ಕಾರ್ಯಕ್ರಮವನ್ನು ನವೀನ್ ಬಿಲ್ಲವ ಅವರು ನಿರ್ದೇಶಿಸಿದ್ದಾರೆ. ಅನುಷಾ ರಾಜ್ ಮತ್ತು ಕ್ರಿಸ್ಟಿನಾ ರೋಸ್ಲೀನ್ ಜಾರ್ಜ್ ಅವರು ಸಹಕರಿಸಿದ್ದಾರೆ. ಜ್ಯೂರಿಗಳಾಗಿ ನಟಿ ಮೌನಾ ಗುಡ್ಡೆಮನೆ, ರೂಪದರ್ಶಿ ಸೋನಿಯಾ ಜೋಸೆಫ್, ಚಲನಚಿತ್ರ ನಿರ್ಮಾಪಕ ಸಂದೀಪ್ ಮಲಾನಿ, ನಟ ವಂಶಿಕೃಷ್ಣ, ಎನ್‍ಬಿಯ ಬ್ರಾಂಡ್ ಅಂಬಾಸಿಡರ್ ಕ್ರಿಸ್ಟಿನಾ ರೋಸ್ಲಿನ್ ಜಾರ್ಜ್, ರುಬಾರು ಮಿಸ್ಟರ್ ಇಂಡಿಯಾ ಯೂನಿವರ್ಸ್ ಬಾದಲ್ ಬಿಸ್ಟ್, ಉಪಸ್ಥತರಿದ್ದರು.ವಿಜೆ ಡಿಕ್ಸನ್ ಕಾರ್ಯಕ್ರಮವನ್ನು ನಿರೂಪಿಸಿದರು.