ಬಿಜೆಪಿಗೆ ನಾಲ್ಕರಲ್ಲಿ ಮೂರು ಎರಡು ಲಾಭ, ಹೇಗೆ? ಭಾರತ, ಇಂಡಿಯಾಕ್ಕೆ ಸೋಲು, ಎಲ್ಲಿ?
ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ಬಿಜೆಪಿಗೆ ಲಾಭ ನೀಡಿದೆ. ಕಾಂಗ್ರೆಸ್ ಬಲ ನಿಂತ ನೀರಾಗಿದೆ. ಭಾರತ, ಇಂಡಿಯಾಗಳು ಸೋತು ಹೋಗಿವೆ. ಬಿಜೆಪಿಯಯ 142 ಹೆಚ್ಚು ಶಾಸಕರನ್ನು ಗೆದ್ದಿದೆ. ನಾಲ್ಕು ರಾಜ್ಯಗಳಲ್ಲೂ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆದಿದೆ. ಕಾಂಗ್ರೆಸ್ ಮತ ಭಾರ ಭಾರೀ ಇಳಿಯದಿದ್ದರೂ ಒಟ್ಟು 66 ಶಾಸಕರನ್ನು ಕಳೆದುಕೊಂಡಿದೆ. ತೆಲಂಗಾಣದಲ್ಲಿ ಮಾತ್ರ ಅದು ತನ್ನ ಶಾಸಕ ಸಂಖ್ಯೆ ಹೆಚ್ಚಿಸಿಕೊಂಡು ಮೂರು ರಾಜ್ಯಗಳ ಕೊರತೆಯನ್ನು ಸ್ವಲ್ಪ ಭರ್ತಿ ಮಾಡಿಕೊಂಡಿದೆ.
ಬಿಜೆಪಿ ಆಳುಗೆ ರಾಜ್ಯಗಳ ಸಂಖ್ಯೆ 12ಕ್ಕೆ ಏರಿದರೆ, ಕಾಂಗ್ರೆಸ್ ಆಳುವ ರಾಜ್ಯಗಳ 3ಕ್ಕೆ ಇಳಿಯುತ್ತಿದೆ. ಇವುಗಳ ಮೈತ್ರಿ ಸರಕಾರಗಳು ಹಲವೆಡೆ ಇವೆ. ಪ್ರಾದೇಶಿಕ ಪಕ್ಷಗಳು ತಮ್ಮ ನೆಲೆಯಲ್ಲಿ ಬಲ ಹೊಂದಿದ್ದರೂ ರಾಷ್ಟ್ರೀಯವಾಗಿ ಅವು ಬಿಜೆಪಿ ಇಲ್ಲವೇ ಕಾಂಗ್ರೆಸ್ ಪಕ್ಷಗಳನ್ನು ಆಶ್ರಯಿಸಲೇಬೇಕು. ತೆಲಂಗಾಣ ರಾಷ್ಟ್ರ ಸಮಿತಿಯು ಭಾರತ ರಾಷ್ಟ್ರ ಸಮಿತಿಯಾಗಿ ಚುನಾವಣೆಗೆ ಇಳಿದಿತ್ತು. ಆದರೆ ಸರಿಯಾದ ಹೊಂದಾಣಿಕೆ ಇಲ್ಲದೆ ಅದರ ಭಾರತ ಅಧಿಕಾರ ಕಳೆದುಕೊಂಡಿದೆ. ಇಂಡಿಯಾ ಅಧಿಕಾರಕ್ಕೆ್ಲೆಲ್ಲ ಏನೂ ಆಗಿಲ್ಲ. ಬಿಜೆಪಿ ವಿರೋಧಿ ಒಣ ಮಾತಿನಿಂದ ಏನೂ ಆಗದು. ಗಟ್ಟಿ ರಾಜಕೀಯ ಹೋರಾಟ ಬೇಕಾಗಿದೆ.
ಹೆಚ್ಚಿನ ಎಸ್‌ಸಿ/ಎಸ್‌ಟಿ, ಮಹಿಳಾ ಮತಗಳು ಬಿಜೆಪಿಗೆ ಹೋಗಿವೆ. ಕಾಂಗ್ರೆಸ್ಸಿನ ಜಾತಿ ಗಣತಿ ಬಡಗಣ ಭಾರತದಲ್ಲಿ ಮುಖ್ಯವಾಗಿ ಮಧ್ಯ ಭಾರತದಲ್ಲಿ ಕೆಲಸಕ್ಕೆ ಬಂದಿಲ್ಲ. ಜಾತಿ ಸಂಖ್ಯೆಗನುಸಾರ ಅವಕಾಶ ಎಂಬ ಅದರ ಘೋಷಣೆಯನ್ನು ಮೇಲ್ಜಾತಿಗಳು ಅಮುಕಿರುವುದು ಸ್ಪಷ್ಟ. ಬಿಜೆಪಿಯ ಗೆಲುವಿನಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ನೀಡಿದ ಗ್ಯಾರಂಟಿ ಕೊಡುಗೆಗಳ ಪಾತ್ರವೂ ಇದೆ.
ಬಿಜೆಪಿಗೆ ತೆಂಕಣ ಭಾರತ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಕಾಂಗ್ರೆಸ್ಸಿಗೆ ತೆಲಂಗಾಣದಲ್ಲಿ ಮಾತ್ರ 45+ ಆಗಿದೆ. ಜನತಾ ಕಾಂಗ್ರೆಸ್ ಪಕ್ಷವು ಛತ್ತೀಸಗಡದಲ್ಲಿ ಇದ್ದ 5 ಸ್ಥಾನ ಕಳೆದುಕೊಂಡಿದೆ. ಕಾಂಗ್ರೆಸ್ಸಿಗೆ ಏಟಾಗಿ, ಬಿಜೆಪಿಗೆ ವರವಾಗಿ ಪರಿಣಮಿಸಿತು. ಬಿಎಸ್‌ಪಿ ಮಧ್ಯ ಪ್ರದೇಶದಲ್ಲಿ ಇದ್ದ 2 ಮತ್ತು ರಾಜಸ್ತಾನದಲ್ಲಿ ಇದ್ದ 6ರಲ್ಲಿ 4ನ್ನು ಕಳೆದುಕೊಂಡಿದೆ. ಬಿಜೆಪಿಯು ಮಧ್ಯ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡು, ರಾಜಸ್ತಾನ, ಛತ್ತೀಸಗಡಗಳಲ್ಲಿ ಮತ್ತೆ ಸರಕಾರ ರಚಿಸುತ್ತಿದೆ. ಎರಡು ರಾಜ್ಯ ಕಳೆದುಕೊಂಡ ಕಾಂಗ್ರೆಸ್ ಬಹುಕಾಲದ ಬಳಿಕ ತೆಲಂಗಾಣದಲ್ಲಿ ಅಧಿಕಾರಕ್ಕೆ ಏರಿದೆ. ಮಧ್ಯ ಪ್ರದೇಶದಲ್ಲಿ ಬಿಜೆಪಿ 163, ಕಾಂಗ್ರೆಸ್ 66 ಸ್ಥಾನ ಗೆದ್ದಿವೆ. ಬಿಎಸ್‌ಪಿ ಇದ್ದ ಎರಡು ಕಳೆದುಕೊಂಡಿದೆ.
ರಾಜಸ್ತಾನದಲ್ಲಿ ಬಿಜೆಪಿಯು 115, ಕಾಂಗ್ರೆಸ್ ಪಕ್ಷ 69 ಸ್ಥಾನಗಳನ್ನು ಗೆದ್ದುಕೊಂಡಿವೆ. ಬಿಎಸ್‌ಪಿ ಹೊಂದಿದ್ದ 6ರಲ್ಲಿ ಎರಡು ಉಳಿಸಿಕೊಂಡಿದೆ. ಛತ್ತೀಸಗಡದಲ್ಲಿ ಬಿಜೆಪಿಗೆ 54, ಕಾಂಗ್ರೆಸ್ಸಿಗೆ 35 ಸ್ಥಾನ ಸಿಕ್ಕಿವೆ. ಜನತಾ ಕಾಂಗ್ರೆಸ್ ಇದ್ದ 5 ಸ್ಥಾನ ಕಳೆದುಕೊಂಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ 64 ಸ್ಥಾನ ಪಡೆದು ಅಧಿಕಾರಕ್ಕೆ ಏರಿದೆ. 39 ಸ್ಥಾನ ಗೆದ್ದ ಬಿಆರ್‌ಎಸ್ ಅಧಿಕಾರ ಕಳೆದುಕೊಂಡಿದೆ. ಬಿಆರ್‌ಎಸ್‌ಗೆ 49 ಸ್ಥಾನ ನಷ್ಟ ಆಗಿದೆ. ಬಿಜೆಪಿ 8 ಸ್ಥಾನ ಗೆದ್ದಿದೆ, ಅದು ಒಂದು ಸ್ಥಾನ ಮಾತ್ರ ಹೊಂದಿತ್ತು.