ಬೈಂದೂರು: ಗ್ರಾಮ ಲೆಕ್ಕಾಧಿಕಾರಿ ದಾಖಲೆ ಪರಿಶೀಲಿಸದೆ ಆದಾಯ ಪತ್ರ ನೀಡಿದ್ದಾರೆ: ಗ್ರಾಮಸ್ಥರ ಆರೋಪ
ಬೈಂದೂರು: ಇಡೂರು ಕುಂಜ್ಞಾಡಿ ಗ್ರಾಮ ಲೆಕ್ಕಾಧಿಕಾರಿ ದಾಖಲೆ ಪರಿಶೀಲಿಸದೆ ಆದಾಯ ಪತ್ರ ನೀಡಿದ್ದಾರೆ: ಗ್ರಾಮಸ್ಥರ ಆರೋಪ
ಬೈಂದೂರು ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿಯ ಇಡೂರು ಕುಂಜ್ಞಾಡಿ ಗ್ರಾಮದ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಅಂದಿನ ಕುಂದಾಪುರ ತಹಸಿಲ್ದಾರ್ ಕಿರಣ್ ಗೋರಯ್ಯ ಮರುಪರಿಶೀಲಿಸಬೇಕು ಹಾಗೂ ನೀಡಿರುವ ದಾಖಲೆ ಪತ್ರಗಳನ್ನು ಹಿಂಪಡೆಯಬೇಕೆಂದು ಆದೇಶಿಸಿರುತ್ತಾರೆ ಆದರೆ ಕಾಣದ ಕೈಗಳು ಕೆಲಸ ಮಾಡಿ ಸರಕಾರದ ದಿಕ್ಕು ತಪ್ಪಿಸುವ ಕೆಲಸ ಆಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ
ಗ್ರಾಮಕರಣಿಕರು ಸುಜಾತ ಶೆಟ್ಟಿ ಬಿನ್ ಸೂಲಿಯಣ್ಣ ಶೆಟ್ಟಿ ಇವರಿಗೆ ಆದಾಯದ ಬಗ್ಗೆ ದಾಖಲೆಗಳನ್ನು ಹಾಜರುಪಡಿಸುವ ಬಗ್ಗೆ ತಿಳುವಳಿಕೆ ಪತ್ರವನ್ನು ನೀಡಲಾಗಿಯೂ ದಾಖಲೆಗಳನ್ನು ಇದುವರೆಗೆ ಹಾಜರುಪಡಿಸಿರುವುದಿಲ್ಲ.
ಈ ಪ್ರಕರಣದಲ್ಲಿ ಕುಂದಾಪುರ ತಾಲೂಕು, ಇಡೂರು ಕುಂಜ್ಞಾಡಿ ಗ್ರಾಮದ ಸುಜಾತ ಶೆಟ್ಟಿ ಬಿನ್ ಸೂಲಿಯಣ್ಣ ಶೆಟ್ಟಿ ಇವರು ಹೆಚ್ಚಿನ ಆದಾಯ ಹೊಂದಿರುವುದಾಗಿ ದೂರು ಬಂದಿರುವ ಹಿನ್ನಲೆಯಲ್ಲಿ ಆದಾಯದ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮವನ್ನು ಜರುಗಿಸಲು ಗ್ರಾಮಸ್ಥರ ಆಗ್ರಹ.
ಸುಳ್ಳು ದಾಖಲೆ ನೀಡಿ ಸರಕಾರದ ಬೊಕ್ಕಸಕ್ಕೆ ಮೋಸ ಮಾಡಿದವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ