ಮಂಗಳೂರು: ಕುಂದಾಪುರದಿಂದ ಮೈಸೂರ್-ಮಂಡ್ಯ ತೆರಳುವ ದುರ್ಗಾಂಬಾ ಮೋಟಾರ್ಸ್ ಬಸ್ ಚಾಲಕನ ಧಾವಂತಕ್ಕೆ ಒಂದು ಹಸು ಸಾವನ್ನಪ್ಪಿ, ಇನ್ನೊಂದು ಗಂಭೀರ ಗಾಯಗೊಂಡಿರುವ ಘಟನೆ ಕೋಡಿಕಲ್ ಜಂಕ್ಷನ್ನಿನಲ್ಲಿ ತಡರಾತ್ರಿ ವೇಳೆ ಸಂಭವಿಸಿದೆ. ಅಪಘಾತ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ವಾಹನ ಸವಾರರು ಬಸ್ ತಡೆದು ಚಾಲಕನನ್ನು ತರಾಟೆಗೆತ್ತಿಕೊಂಡಿದ್ದಾರೆ.
ಬ್ರಹ್ಮಾವರ : ಬ್ರಹ್ಮಾವರ ಬಳಿಯ ಚೇರ್ಕಾಡಿಯಲ್ಲಿ ಬಡಗುತಿಟ್ಟಿನ ಯಕ್ಷಗಾನ ಸವ್ಯಸಾಚಿ ಗುರು ಮಂಜುನಾಥ್ ಪ್ರಭು 32 ವರ್ಷದ ಹಿಂದೆ ಸ್ಥಾಪಿಸಿದ ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳದವರಿಂದ ಶ್ರೀ ಕೃಷ್ಣ ಪಾರಿಜಾತ ಪ್ರಸಂಗ ನೀಲಾವರ ಶ್ರೀ ಮಹಿಷಮರ್ಧಿನೀ ದೇವಸ್ಥಾನದಲ್ಲಿ ಜರುಗಿತು. ಎಂಜಿನಿಯರಿಂಗ್ ಸೇರಿದಂತೆ ನಾನಾ ಉನ್ನತ ಶಿಕ್ಷಣ ಪಡೆಯುವ 7 ಯುವತಿಯರಿಂದ ಪ್ರದರ್ಶನ ಕಂಡ ಶ್ರೀ ಕೃಷ್ಣ ಪಾರಿಜಾತ ಪ್ರಸಂಗ ಯಕ್ಷಗಾನ ಈ ತಂಡದ 1334 ನೇ ಪ್ರದರ್ಶನವಾಗಿದೆ . ರಜಾ ದಿನದಲ್ಲಿ
ನಾಮ್ಕಾವಸ್ಥೆಗೋ ಎಂಬಂತ್ತೆ ಸಮಾಜ ಕಲ್ಯಾಣ ಇಲಾಖೆ ಪಡುಬಿದ್ರಿಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ದಲಿತ ಮುಖಂಡರು ಕೇಳಲಾದ ಪ್ರಶ್ನೆಗೆ ಸ್ವತಃ ಅಧಿಕಾರಿಗಳೇ ಉತ್ತರಿಸಲಾಗದೆ ತಡವರಿಸಿದ ಘಟನೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆ ಉಡುಪಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಹಾಗೂ ಪಡುಬಿದ್ರಿ ಪೊಲೀಸ್ ಠಾಣೆ ಜಂಟಿಯಾಗಿ ಆಯೋಜಿಸಿದ ಸಭಾ ಕಾರ್ಯಕ್ರಮದ ಸಭಾ ವೇದಿಕೆಗೆ ಹಾಕಲಾದ ಬ್ಯಾನರ್ ನಲ್ಲಿ ಅಸಾಮಾನತೆಯ ಬದಲಿಗೆ ದಲಿತರನ್ನು ನಿಂದಿಸುವ ಶಬ್ದ ಬಳಕೆ ಮಾಡಿದ್ದು ಸರಿಯೆ… ಎಂದು
ಪುತ್ತೂರು ಜಿಎಲ್ ಮಹಲಿನ ಭಾರತ್ ಸಿನಿಮಾ ಮಂದಿರದಲ್ಲಿ ಪೊಲಿಸ್ ಇಲಾಖೆಯ ವಿನಂತಿ ಮೇರೆಗೆ ಕಣ್ಣೂರ್ ಸ್ಕ್ವಾಡ್ ಸಿನಿಮಾ ವೀಕ್ಷಣೆಗೆ ಜಿಎಲ್ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಜಿ ಎಲ್ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ ಅವರ ಕಾರ್ಯವನ್ನು ಮೆಚ್ಚಿ ಪೊಲೀಸ್ ಇಲಾಖೆ ಅಭಿನಂದನಾ ಪತ್ರವನ್ನು ನೀಡಿ ಅಭಿನಂದಿಸಿದರು. ಇದೇ ವೇಳೆ ಜಿಎಲ್ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯರವರು ಮಾತನಾಡಿ, ಈ ಸಿನಿಮಾದ ವೀಕ್ಷಣೆ ಮೂಲಕ ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿಗಳಿಗೆ ಇನ್ನಷ್ಟು
ದಕ್ಷಿಣ ಕನ್ನಡದಲ್ಲಿ ಸೃಷ್ಟಿಯಾದ ಮರಳಿನ ಅಭಾವಕ್ಕೆ ಅಧಿಕಾರಿಗಳೆ ಕಾರಣ ಎಂದು ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಶನ್ ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ. ಈ ಸಮಸ್ಯೆಗೆ 10 ದಿನದೊಳಗೆ ಪರಿಹಾರ ಕಲ್ಪಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್‍ನ ಅಧ್ಯಕ್ಷ ಮಹಾಬಲ ಕೊಟ್ಟಾರಿ ದ.ಕ.ಜಿಲ್ಲೆಯಲ್ಲಿ ಮರಳಿನ ಕೊರತೆಯಿಲ್ಲ ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಳಿನ ಸಮಸ್ಯೆ
ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ವಿದ್ಯಾರ್ಥಿಗಳು 2023 ರ ಅಕ್ಟೋಬರ್ 19 ರಿಂದ 22 ರವರೆಗೆ ಕರ್ನಾಟಕದ ಕಲಬುರಗಿಯಲ್ನಡೆದ ಸಿಬಿಎಸ್ ಸಿ ದಕ್ಷಿಣ ವಲಯ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿಸಿದರು. 6 ನೇ ತರಗತಿ ವಿದ್ಯಾರ್ಥಿನಿ ತಸ್ಮಯಿ ಶೆಟ್ಟಿ 1000 ಮೀ ಮತ್ತು 500 ಮೀಟರ್‌ಗಳಲ್ಲಿ 2 ಚಿನ್ನದ ಪದಕಗಳನ್ನೂ, 6ನೇ ತರಗತಿ ವಿದ್ಯಾರ್ಥಿಯುವರಾಜ್ ಡಿ ಕುಂಡರ್ 300 ಮೀ ಮತ್ತು 500 ಮೀಟರ್‌ಗಳಲ್ಲಿ 2 ಚಿನ್ನದ ಪದಕಗಳನ್ನು ಪಡೆದಿರುತ್ತಾರೆ.
ಮಂಗಳೂರು ಶಾರದೆ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ವೆಂಕಟರಮಣ ದೇವಳದ ಆಚಾರ್ಯ ಮಠದ ವಸಂತ ಮಂಟಪದಲ್ಲಿ ಪೂಜಿಸಲ್ಪಟ್ಟ 101ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಬೃಹತ್ ವಿಸರ್ಜನಾ ಶೋಭಾಯಾತ್ರೆ ವೈಭವದಿಂದ ನಡೆಯಿತು. ಬುಧವಾರ ಸಂಜೆ ಪೂರ್ಣಾಲಂಕಾರಗೊಂಡ ಶ್ರೀ ಶಾರದಾ ಮಾತೆಯ ದರ್ಶನಕ್ಕೆ ಭಕ್ತಾಧಿಗಳಿಗೆ ಅವಕಾಶ ನೀಡಲಾಗಿದ್ದು, ರಾತ್ರಿ ಮಹಾಮಂಗಳಾರತಿ ಬಳಿಕ ಶ್ರೀ ವೆಂಕಟರಮಣ ದೇವರ ಪ್ರದಕ್ಷಿಣೆ ಬಳಿಕ ಶ್ರೀ ಶಾರದಾ ಮಾತೆಯ ಬೃಹತ್ ವಿಸರ್ಜನಾ ಶೋಭಾಯಾತ್ರೆ
ಮಂಗಳೂರಿನ ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್‍ನ ವಾರದ ವಿಶೇಷ ಮೀಟಿಂಗ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ವಿಶೇಷ ಅತಿಥಿಯಾಗಿ ಆಗಮಿಸಿದ್ದು, ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್‍ನಲ್ಲಿರುವ ಉದ್ಯಮಿಗಳಿಗೆ ಉತ್ಸಾಹ ತುಂಬಿಸಿದರು. ಮಂಗಳೂರಿನಲ್ಲಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಉದ್ಯಮಿಗಳಿಗಾಗಿಯೇ ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್ ಆರಂಭವಾಗಿದ್ದು,
ಮಂಜೇಶ್ವರ ಸಮೀಪದ ಕುಂಜತ್ತೂರಿನ ದಾರುಸ್ಸಲಾಂ ಸಲಫಿ ಮಸೀದಿ ತಿರುವಿನಲ್ಲಿರುವ ಖಾಸಗಿ ಅಪಾರ್ಟ್ಮೆಂಟ್‍ನಿಂದ ಶೌಚಾಲಯದ ನೀರು ಸಾರ್ವಜನಿಕ ಸ್ಥಳಕ್ಕೆ ಹಾಗೂ ಸಮೀಪದ ರಸ್ತೆಗೆ ಹರಿದು ಬರುತಿದ್ದು, ಪರಿಸರವೆಲ್ಲ ದುರ್ವಾಸನೆ ಆವರಿಸಿದೆ. ಪರಿಸರವಾಸಿಗಳು ಹಾಗೂ ಈ ದಾರಿಯಿಂದ ಸಾಗುವವರು ಮೂಗು ಮುಚ್ಚಿಕೊಂಡು ಸಾಗುವ ಪರಿಸ್ಥಿತಿ ಎದುರಾಗಿದೆ. ಈ ದಾರಿಯಾಗಿ ದಿನನಿತ್ಯ ಶಾಲೆಗೂ ಮದ್ರಸಕ್ಕೂ ನೂರಾರು ವಿದ್ಯಾರ್ಥಿಗಳು ಈ ಶೌಚಾಲಯದ ನೀರನ್ನು ದಾಟಿಕೊಂಡೇ ಸಾಗಬೇಕಾದ
ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ತತ್ವಚಿಂತನೆಯನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಸ್ಥಾಪಿತ ಕುದ್ರೋಳಿ ಶ್ರೀಕ್ಷೇತ್ರದ ದಸರಾ ವಿಶ್ವವಿಖ್ಯಾತ ಮಂಗಳೂರು ದಸರಾವೆಂದೇ ಪ್ರಸಿದ್ಧ. ಈ ದಸರಾ ಶೋಭಾಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಕ್ರೈಸ್ತ ಬಾಂಧವರ ಟ್ಯಾಬ್ಲೊ ಮಂಗಳೂರು ದಸರಾ ಮೆರುಗು ಹೆಚ್ಚಿಸಿದೆ. ಜೊತೆಗೆ ಧರ್ಮಧರ್ಮಗಳ ನಡುವಿನ ಬಾಂಧವ್ಯ ವೃದ್ಧಿಸಿದೆ. ಕ್ರೈಸ್ತ ಬಾಂಧವರ ಸ್ತಬ್ಧಚಿತ್ರ ಇದೇ ಮೊದಲ ಬಾರಿಗೆ ಮಂಗಳೂರು ದಸರಾ




























