ಪುತ್ತೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾಮಗಾರಿಗಳು ಕುಸಿತವಾಗುತ್ತಿದೆ. ಬೆಂಗಳೂರಿನಲ್ಲಿ ಸರ್ಕಾರದ ನಿರ್ಲಕ್ಷ್ಯಕ್ಕೆ ಎರಡು ಜೀವ ಬಲಿಯಾಗಿದೆ. ರಸ್ತೆಯಲ್ಲಿ ಸಂಚರಿಸುವ ಸಮಯ ಎಲ್ಲಿ ಕುಸಿಯುತ್ತದೆ, ಮೇಲ್ಸೇತುವೆ ಎಲ್ಲಿ ತಲೆಗೆ ಬೀಳುತ್ತದೆ ಎಂದು ಭಯದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಅಮಲಾ ರಾಮಚಂದ್ರ ಹೇಳಿದರು. ಈ
ಬೈಂದೂರ: ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಕೆರೆಯಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬಡಾಕೆರೆ ಗ್ರಾಮದ ಆಚಾರಬೆಟ್ಟು ಎಂಬಲ್ಲಿ ನಿನ್ನೆ ರಾತ್ರಿ ಸುಮಾರು 8.30ರ ಹೊತ್ತಿಗೆ ಚಿರತೆ ರಸ್ತೆಯಲ್ಲಿ ಓಡಾಡುತ್ತಿರುವುದು ವಾಹನ ಸವಾರರು ಗಮನಿಸಿ ಚಿತ್ರ ಸಹಿತ ಸರೆಹಿಡಿದ್ದಾರೆ.ಕೆಲವು ದಿನಗಳಿಂದ ಆಚಾರಬೆಟ್ಟು ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದಾಗಿ ಗ್ರಾಮಸ್ಥರು ಮಾಹಿತಿ
ಆಶ್ರಯ ಬಳಗ ಪದವಿನಂಗಡಿ ಕಟ್ಟೆ ಮಂಗಳೂರು ಹಾಗೂ ಊರ ಹತ್ತು ಸಮಸ್ತರು ಇವರ ಆಶ್ರಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಧ್ರುವ ಶ್ರೀ ಪಟ್ಲ ಸತೀಶ್ ಶೆಟ್ಟಿವರ ಸಾರಥ್ಯದಲ್ಲಿ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಆಡಿತೋರಿಸಲಿದ್ದಾರೆ. ಪದವಿನಂಗಡಿಯ ಬೆನಕಾ ಸಭಾಂಗಣದಲ್ಲಿ ಜನವರಿ 17ರಂದು ಮಂಗಳವಾರ ಸಂಜೆ 6.30ಕ್ಕೆ ಚೌಕಿ ಪೂಜೆ ರಾತ್ರಿ 8 ಗಂಟೆಗೆ
ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ತುಳು ಎಂ.ಎ. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಚಂದ್ರಹಾಸ ಕಣಂತೂರು ಅವರು ಪ್ರಥಮ ರ್‍ಯಾಂಕ್ ಪಡೆದಿರುತ್ತಾರೆ. ಹಂಪನಕಟ್ಟೆಯ ಮಂಗಳೂರು ವಿ.ವಿ.ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ವಿದ್ಯಾರ್ಥಿಯಾಗಿದ್ದ ಚಂದ್ರಹಾಸ ಕಣಂತೂರು ಅವರು ತುಳು ಬರಹಗಾರರಾಗಿ , ವಾಗ್ಮಿಯಾಗಿ ಖ್ಯಾತಿ ಪಡೆದವರು. ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಲೆಕ್ಕಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಚಂದ್ರಹಾಸ ಕಣಂತೂರು ಅವರು
ಉಳ್ಳಾಲ: ಕೊರಗಜ್ಜನ ಕುರಿತಾದ ಬಹು ಬಾಷಾ ಚಿತ್ರ “ಕರಿ ಹೈದ ಕರಿಯಜ್ಜ” ದ ಯಶಸ್ಸಿಗೆ ಕಲ್ಲಾಪು ಬುರ್ದುಗೋಳಿಯ ಕೊರಗಜ್ಜ-ಗುಳಿಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿದ ನಟಿಯರಾದ ಭವ್ಯ ,ಶೃತಿ ಮತ್ತು ಚಿತ್ರ ತಂಡವು ಗುಳಿಗನಿಗೆ ಹರಕೆಯ ಹುಂಜವನ್ನ ಸಮರ್ಪಿಸಿದ್ದಾರೆ. ತ್ರಿವಿಕ್ರಮ ಸಪಲ್ಯ ಅವರು 5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ” ಕರಿ ಹೈದ ಕರಿಯಜ್ಜ” ಚಿತ್ರದ ಚಿತ್ರೀಕರಣದ ಆರಂಭದಲ್ಲೇ ನಿರ್ದೇಶಕರಾದ ಸುಧೀರ್ ರಾಜ್ ಉರ್ವ
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಘಟಕದ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಯವರು, ಕರ್ನಾಟಕ ರಾಜ್ಯ, ಜಿಲ್ಲೆಗಳಲ್ಲಿನ ಎಲ್ಲಾ ಪದಾಧಿಕಾರಿಗಳು, ಘಟಕಗಳನ್ನು ಅನ್ವಯಿಸುವಂತೆ ವಿಸರ್ಜಿಸಿರುತ್ತಾರೆ. ಎಲ್ಲಾ ವಿಧಾನಸಭಾ ಅಭ್ಯರ್ಥಿ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಪೂರ್ಣಪ್ರಮಾಣದಲ್ಲಿ ಸಕ್ರಿಯವಾಗಿ ಪಕ್ಷದ ನಾಯಕರು, ಕಾರ್ಯಕರ್ತರ ಸಮನ್ಚಯದಲ್ಲಿ ಪಕ್ಷದ ಪ್ರಚಾರ ಅಭಿಯಾನದಲ್ಲಿ ಭಾಗವಹಿಸುತ್ತಾ, ಶೀಘ್ರದಲ್ಲೇ ಹೊಸದಾಗಿ, ರಾಜ್ಯ ಚುನಾವಣಾ ಉಸ್ತುವಾರಿ
ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಮತ್ತು RJD ಪಕ್ಷದ ಹಿರಿಯ ನಾಯಕ ಶರದ್ ಯಾದವ್ ಅವರು ಗುರುವಾರ ನಿಧನರಾಗಿದ್ದಾರೆ.ಅವರಿಗೆ 75 ವರ್ಷ ವಯಸ್ಸಾಗಿತ್ತು. ಶರದ್ ಯಾದವ್ ಅವರ ನಿಧನದ ಸುದ್ದಿಯನ್ನು ಪುತ್ರಿ ಸುಭಾಷಿಣಿ ಶರದ್ ಯಾದವ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶರದ್ ಯಾದವ್ ಅವರನ್ನು ಗುರುಗ್ರಾಮ್ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.
ಪಡುಬಿದ್ರಿ ಪಡುಹಿತ್ಲು ಜಾರಂದಾಯ ಬಂಟ ದೈವಸ್ಥಾನಕ್ಕೆ ಊರ ಪರವೂರ ಭಕ್ತಾಧಿಗಳು ನೀಡಿದ ಸುಮಾರು 60ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಖಡ್ಸಲೆ ಹಾಗೂ ಬೃಹತ್ ಕಾಲು ದೀಪವನ್ನು ಅದ್ಧೂರಿಯಾಗಿ ನೂರಾರು ಮಂದಿ ಭಕ್ತರು ಸೇರಿದ ಮೆರವಣಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ಅರ್ಪಿಸಲಾಯಿತು. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಧಾನದಿಂದ ಹೊರಟ ಭವ್ಯ ಮೆರವಣಿಗೆಯಲ್ಲಿ ಅವಳಿ ಕುದುರೆಗಳು, ಭಜನಾ ಕುಣಿತ, ಕುದುರೆ ರಥ, ಚೆಂಡೆ, ವಾದ್ಯ ವಾದನ ಮುಂತಾದವುಗಳು ಗಮನ ಸೆಳೆದವು. ಈ ಬಗ್ಗೆ
ಯಾರಿಗೆ ತನ್ನಲ್ಲಿ ತನಗೆ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೊ ಅವನು ನಾಸ್ತಿಕ ಎಂದು. ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ. ಶೈವಾವಸ್ಥೆಯಿಂದಲೇ ಮಕ್ಕಳು ಶಕ್ತಿ ಶಾಲಿಗಳಾಗುವಂತೆ ಮಾಡಿ. ಅವರಿಗೆ ದುರ್ಬಲತೆಯನ್ನಾಗಲಿ, ಮೂಢ ಆಚರಣೆಗಳನ್ನಾಗಲಿ ಬೋಧಿಸಬೇಡಿ.
ಮಂಗಳೂರು: ಈ ಹಿಂದೆ ಮಗ್ಗಿಯನ್ನು ಭಾಯಿಪಾಠ ಮಾಡೋದು ಒಂದು ಸಾಧನೆಯಾಗಿತ್ತು ಹಾಗೂ ವಿದ್ಯಾರ್ಥಿಗಳಿಗೆ ಸವಾಲು ಕೂಡ ಆಗಿತ್ತು. ಆದರೆ ಇದೀಗ ಬದಲಾದ ಶಿಕ್ಷಣ ಕಲಿಕೆಯಲ್ಲಿ ಸರಳವಾಗಿ ಮಗ್ಗಿ ಅಥವಾ ಟೇಬಲ್ ಗಳನ್ನು ಮಕ್ಕಳು ಲೀಲಾಜಾಲವಾಗಿ ಕಂಠ ಪಾಠದಿಂದ ಹೇಳುತ್ತಾ ಇದೀಗ ದಾಖಲೆಯ ಮೇಲೆ ದಾಖಲೆ ನಿರ್ಮಿಸುತ್ತಿದ್ದಾರೆ. ಅಂತಹ ಒಂದು ದಾಖಲೆಯನ್ನು ಶ್ರೀ ಚೈತನ್ಯ ಟೆಕ್ನೋ ಶಾಲೆಯ ಮಕ್ಕಳು ಮಾಡಿದ್ದಾರೆ. ನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು




























