Home Blog Left SidebarPage 771

ಬಂಟ್ವಾಳದ ಅಮ್ಟಾಡಿಯಲ್ಲಿ ಸಾಂಪ್ರದಾಯಿಕ ನೇಜಿ ನಾಟಿ : ಸಂಧಿ, ಪಾಡ್ದನ ಹಾಡುವ ಮೂಲಕ ಗಮನ ಸೆಳೆದ ಮಹಿಳೆಯರು

ಬಂಟ್ವಾಳ: ಕಾರ್ಮಿಕರ ಕೊರತೆಯಿಂದ ಭತ್ತದ ಸಾಗುವಳಿಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು ಅಳಿದುಳಿದಿರುವ ಗದ್ದೆಗಳು ಬಹುತೇಕ ಬರಡಾಗಿದ್ದರೆ ಕೆಲವೊಂದು ಗದ್ದೆಗಳಲ್ಲಿ ಯಾಂತ್ರೀಕ ವಿಧಾನದಲ್ಲಿ ಕೃಷಿ ಕಾರ್ಯಗಳು ನಡೆಯುತ್ತಿವೆ. ಕೃಷಿ ಚಟುವಟಿಕೆಗಳು ಅವನತಿಗೆ ಸಾಗುತ್ತಿದ್ದಂತೆಯೇ ಅದರೊಂದಿಗೆ ಮಿಳಿತವಾಗಿರುವ ಅನೇಕ ಕೃಷಿ ಸಂಬಂಧಿ ಆಚರಣೆಗಳು, ಜಾನಪದೀಯವಾದ

ಮುಂಬೈ: ಐಕಳ ಹರೀಶ್ ಶೆಟ್ಟಿಯವರ ‘ಸಾರ್ವಭೌಮ’ ಗೌರವ ಗ್ರಂಥ ಲೋಕಾರ್ಪಣೆ

ಮುಂಬೈ: “ಐಕಳ ಹರೀಶ್ ಶೆಟ್ಟಿಯವರು ಹೊರನಾಡಿನ ಪ್ರತಿಸೂರ್ಯ.ಮುಂಬೈನ ತುಳು ಕನ್ನಡಿಗರ ಧೀಮಂತ ನಾಯಕ. ಅವರು ತಾರಾಮೌಲ್ಯ ಇರುವ ಕೆಲವೇ ಕೆಲವು ಸಂಘಟಕರಲ್ಲಿ ಒಬ್ಬರು. ಕ್ರಿಯಾಶೀಲ, ಚಿಂತನಶೀಲ , ಸಹನಶೀಲ ಮತ್ತು ಆಧ್ಯಾತ್ಮಶೀಲಗಳನ್ನು ಮೈಗೂಡಿಸಿಕೊಂಡ ಮಹಾನಾಯಕ. ಇಂತಹ ಅಪರೂಪದ ದಣಿವರಿಯದ ಚೇತನ, ಸಂಘಟನ ಸೀಮಾಪುರುಷ , ಸಾಹಸಪುರುಷನನ್ನು ಗೌರವಿಸುವುದು ವಿಶ್ಕವಿದ್ಯಾಲಯದ ಕರ್ತವ್ಯ ಎಂಬ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ” ಎಂಬುದಾಗಿ

ಮೂಡುಬಿದಿರೆ:ರಾಜ್ಯಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಗಾರ

ಮೂಡುಬಿದಿರೆ: ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘ ದ.ಕ.ಪ.ಪೂ ಕಾಲೇಜುಗಳ ಪ್ರಾಂಶುಪಾಲರುಗಳ ಸಂಘ ಹಾಗೂ ಮೂಡುಬಿದಿರೆಯ ಜೈನ್ ಪ.ಪೂ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಹೊಸ ಶಿಕ್ಷಣ ನೀತಿಯಲ್ಲಿ ರಾಜ್ಯಶಾಸ್ತ್ರದ ವ್ಯಾಪ್ತಿ ಮತ್ತು ಸ್ವರೂಪ’ದ ಕುರಿತು ರಾಜ್ಯಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಗಾರ ಜೈನ ಪ.ಪೂ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಕಾರ್ಯಗಾರವನ್ನು ಉದ್ಘಾಟಿಸಿ

ಮೂಡುಬಿದಿರೆ:ಬಿಡುಗಡೆಯಾಗದ ಅನುದಾನ ಅರ್ಧದಲ್ಲಿಯೇ ನಿಂತ ಅನೇಕ ಫಲಾನುಭವಿಗಳ ಮನೆ

ವಸತಿ ಯೋಜನೆಗಳಗೆ ಸರಕಾರದಿಂದ ಅನುದಾನ ಬಿಡುಗಡೆಯಾಗದೆ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಹಿಂದೆ ಮಂಜೂರಾತಿ ಆದೇಶ ನೀಡಿದ ಅನೇಕ ಪಲಾನುಭವಿಗಳ ಮನೆಗಳು ಅನುದಾನ ಇಲ್ಲದೆ ಅರ್ಧದಲ್ಲಿ ನಿಂತಿವೆ. ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಫಲಾನುಭವಿಗಳ ಜತೆಗೂಡಿ ಮರಸಭೆ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಪುರಸಭೆಯ ಕಾಂಗ್ರೆಸ್ ಸದಸ್ಯರು ಎಚ್ಚರಿಕೆ ನೀಡಿದರು. ಪುರಸಭೆ ವಿಶೇಷ ಸಭೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ

ಉಚ್ಚಿಲ : ಅಪಘಾತದಲ್ಲಿ ತಂದೆ ಸಾವು, ಪುತ್ರನಿಗೆ ಗಂಭೀರ ಗಾಯ

ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ತಂದೆ ಸ್ಥಳದಲ್ಲೇ ಮೃತಪಟ್ಟು ಮಗ ತೀವ್ರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಮೃತರನ್ನು ಬೆಳಗಾವಿ ಮೂಲದ ಪ್ರಭಾಕರ್ ಕೋತ ಎಂದು ಗುರುತಿಸಲಾಗಿದ್ದು, ಗಾಯಗೊಂಡವರು ಸಮರ್ಥ್ (14) ಎಂಬವರಾಗಿದ್ದಾರೆ. ಮೃತ ಪ್ರಭಾಕರ್ ಹಾಗು ಅವರ ಮಗ ಸಮರ್ಥ್ ಬೆಳಗಾವಿಯಿಂದ ಮಂಗಳವಾರ ರಾತ್ರಿ ಸರಕಾರಿ ಬಸ್ಸು ಮೂಲಕ ಹೊರಟು ಕಾಪು ಸಮೀಪದ

ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಪ್ರಗತಿಪರ ಕೃಷಿಕರಾದ ಭಾಸ್ಕರ್ ಹೆಗ್ಡೆ ತಮ್ಮ ಮನೆಯಲ್ಲಿ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ತೆಳ್ಳಾರಿನಲ್ಲಿ ಇಂದು ಬೆಳಗ್ಗೆ ನಡೆದಿದೆ. ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ನೀಲೆಬೆಟ್ಟು ಗುತ್ತು ಮನೆ ನಿವಾಸಿ ಭಾಸ್ಕರ ಹೆಗ್ಡೆ (63) ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಗ್ಗೆ ಪತ್ನಿ ಅಡುಗೆ ಮನೆಯಲ್ಲಿದ್ದ ವೇಳೆ ಭಾಸ್ಕರ ಹೆಗ್ಡೆ ಮನೆಯಲ್ಲಿದ್ದ ನಾಡಕೋವಿಯಿಂದ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಅಪಘಾತದಲ್ಲಿ ಗಾಯಾಳು ಬಾಲಕ ಮಿದುಳು ನಿಷ್ಕ್ರಿಯ : ಅಂಗಾಂಗ ದಾನಕ್ಕೆ ಮುಂದಾದ ಹೆತ್ತವರು

ಉಳ್ಳಾಲ : ಬಸ್ಸಿಂದ ಬಿದ್ದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪಿಯುಸಿ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದು, ಹೆತ್ತವರು ಶೋಕದ ನಡುವೆಯೂ ಆಸ್ಪತ್ರೆಯಲ್ಲಿ ಅಂಗಾಂಗ ದಾನ ನಡೆಸುವ ತೀರ್ಮಾನಕ್ಕೆ ಮುಂದಾಗಿದ್ದಾರೆ‌. ಸಿಟಿ ಬಸ್ಸಿಂದ ಎಸೆಯಲ್ಪಟ್ಟು ಒಂದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಪಿಯು ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದು , ಮಡುಗಟ್ಟಿದ ಶೋಕದ ನಡುವೆಯೂ ಕುಟುಂಬ ವರ್ಗದವರು

ಅ.18ರಂದು ಸುರತ್ಕಲ್ ಟೋಲ್ ತೆರವಿಗೆ ತೀರ್ಮಾನಿಸಿದ ಪ್ರತಿಭಟನಾಕಾರರು

ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಟೋಲ್ ಗೇಟ್ ಹೋರಾಟ ಸಮಿತಿ ನೇತೃತ್ವದಲ್ಲಿ ಒಂದು ದಿನದ ಧರಣಿ ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಿತು. ಧರಣಿ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲಿಂಗೇಗೌಡ ಭೇಟಿ ನೀಡಿದ್ರು. ಇದೇ ವೇಳೆ ಪ್ರತಿಭಟನಾ ನಿರತರು ಟೋಲ್ ಗೇಟ್ ತೆರವು ದಿನಾಂಕ ಘೋಷಣೆ ಮಾಡುವಂತೆ ಅವರನ್ನು ಆಗ್ರಹಿಸಿದರು. ಪೇಪರ್ ವರ್ಕ್ ನಡೆಯುತ್ತಿದೆ. 20 ದಿನಗಳಿಂದ

ಶಿರ್ವ :ಮೆಸ್ಕಾಂ ಸಿಬ್ಬಂದಿಗಳ ಮೇಲೆ ನುಗ್ಗಿದ ಕಾರು

ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಯಲ್ಲಿ ಮೆಸ್ಕಾಂ ಸಿಬ್ಬಂದಿ ಗಳು ಟ್ರಾನ್ಸ್ಪರ್ಮಾರ್ ಅಳವಡಿಸುತ್ತಿದ್ದ ವೇಳೆ ಬರುತ್ತಿದ್ದ ವಾಹನಗಳನ್ನು ನಿಲ್ಲಿಸುತ್ತಿದ್ದರೂ ಮುನ್ನಗ್ಗಿ ಬಂದ ಕಾರೊಂದು ಕಾರ್ಯನಿರತ ಮೆಸ್ಕಾಂ ಸಿಬ್ಬಂದಿಗಳಿಗೆ ಗುದ್ದಿದ ಮೂವರು ಗಾಯಗೊಂಡಿದ್ದಲ್ಲದೆ, ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದ ಘಟನೆ ಶಿರ್ವದಲ್ಲಿ ಸಂಭವಿಸಿದೆ. ಶಿರ್ವ ನ್ಯಾರ್ಮ ಎಂಬಲ್ಲಿ ಟ್ರಾನ್ಸ್ಫಾರ್ಮರ್ ಕೆಲಸ ಪ್ರಗತಿಯಲ್ಲಿದ್ದು, 12 ಮಂದಿ ಮೆಸ್ಕಾಂ ಸಿಬ್ಬಂದಿ ಕೆಲಸ

ಅಡುಗೆ ಅನಿಲ ವಿತರಣೆಯಲ್ಲಿ ಅಕ್ರಮ ಆರೋಪ : ವೀಡಿಯೋ ವೈರಲ್

ಮಂಜೇಶ್ವರಂ: ಮಂಜೇಶ್ವರ ಹೊಸಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಅನಂತ ಗ್ಯಾಸ್ ಏಜೆನ್ಸಿ ಮೂಲಕ ವಿತರಿಸಲಾಗುತ್ತಿರುವ ಅಡುಗೆ ಅನಿಲ ವಿತರಣೆಯಲ್ಲಿ ತೂಕ ಕಡಿಮೆ ಇರುವುದಾಗಿ ಆರೋಪಿಸಿ ಗ್ರಾಹಕರೊಬ್ಬರು ವೀಡಿಯೋ ಒಂದನ್ನು ವೈರಲ್ ಮಾಡಿದ ಬೆನ್ನಲ್ಲೇ ಗ್ರಾಹಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು.ಆದರೆ ಏಜನ್ಸಿ ಕಚೇರಿ ಮುಂಬಾಗದಲ್ಲಿ ಇರಿಸಲಾಗಿದ್ದ ತೂಕ ಕಡಿಮೆ ಕಂಡು ಬಂದ ಅಡುಗೆ ಅನಿಲವನ್ನು ಬೇರೆಯೇ ಇಡಲಾಗಿತ್ತೆಂದೂ ಅದನ್ನು ವಿತರಿಸುವ ಉದ್ದೇಶವಿರಲಿಲ್ಲವೆಂದೂ ಗ್ಯಾಸ್