ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಮಿತಡ್ಕ ವಡ್ಯಾ ಎಂಬಲ್ಲಿ ಸಾರ್ವಜನಿಕ ರಸ್ತೆಗೆ ಮರ ಬಿದ್ದು ಸಂಪೂರ್ಣ ಸಾರ್ವಜನಿಕರಿಗೆ ಸಂಪರ್ಕ ಕಡಿತಗೊಂಡಿದೆ ಇದಕ್ಕೆ ಸುಮಾರು 10 ದಿನದಿಂದ ಇಲ್ಲಿಯ ಶಾಲಾ ಮಕ್ಕಳಿ ಗೆ ಸಾರ್ವಜನಿಕರಿಗೆ ತೊಂದರೆ ಈಡಾಗಿದ್ದು ಯಾವುದೇ ಅಧಿಕಾರಿಗಳು ಹಾಗೂ ಪಂಚಾಯತ್ ಸಿಬ್ಬಂದಿಗಳೂ ಕೂಡ ಭೇಟಿ ನೀಡದೆ ಜನಪ್ರತಿನಿಧಿಯು ಕೂಡ ಭೇಟಿ ನೀಡದೆ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ತುಳುನಾಡಿನ ದೈವಾರಾಧನೆ ಮತ್ತು ಅದರ ಕಟ್ಟುಪಾಡುಗಳನ್ನು ಬಿಂಬಿಸುವ ಕಲಾತ್ಮಕ ಚಿತ್ರ `ಜೀಟಿಗೆ’ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. ಮಲಯಾಳಂ ನಿರ್ದೇಶಕ ಜಯರಾಜ್ ಜತೆ ಪಳಗಿದ ಸಂತೋಷ್ ಮಾಡ ನಿರ್ದೇಶನದ ಚೊಚ್ಚಲ ಚಿತ್ರವನ್ನು ನಿರ್ಮಾಣ ಮಾಡಿರುವುದು ಅರುಣ್ ರೈ ತೋಡಾರ್. ಪರಂಪರಾಗತವಾಗಿ ದೈವದ ನರ್ತನ ಸೇವೆ ಮಾಡುತ್ತ ಬಂದಿರುವ ತನಿಯಪ್ಪ, ತನ್ನ ಮಗನಿಗೆ ಈ ಚಾಕರಿ ಬೇಡ ಎಂದು ವಿದ್ಯಾಭ್ಯಾಸ
ಮಣಿಪಾಲ, 21 ಜುಲೈ 2022: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಜೀವರಸಾಯನಶಾಸ್ತ್ರ ಪ್ರಯೋಗಾಲಯದಲ್ಲಿ ಸುಧಾರಿತ ಇಮ್ಯುನೊ ವಿಶ್ಲೇಷಕ ಕೋಬಾಸ್ ಇ 801 ಯಂತ್ರವನ್ನು ಉದ್ಘಾಟಿಸಲಾಯಿತು. ಪ್ರಯೋಗಾಲಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸುಧಾರಿತ ಯಂತ್ರವನ್ನು ಕೆಎಂಸಿ ಡೀನ್ ಡಾ ಶರತ್ ಕುಮಾರ್ ರಾವ್ , ಮಣಿಪಾಲದ ಬೋಧನಾ ಆಸ್ಪತೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಮತ್ತು ಮುಖ್ಯ ವೈದ್ಯಕೀಯ ಅಧೀಕ್ಷಕರಾದ ಡಾ ಅವಿನಾಶ್ ಶೆಟ್ಟಿ ಉದ್ಘಾಟಿಸಿದರು . ರೋಶ್
ಸುಳ್ಯ ತಾಲೂಕಿನ ಕಳಂಜದಲ್ಲಿ ಮೊನ್ನೆ ರಾತ್ರಿ ದುಷ್ಕರ್ಮಿಗಳಿಂದ ತೀವ್ರ ಹಲ್ಲೆಗೊಳಗಾದ ಮಸೂದ್ ಎಂಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದು ಯು.ಟಿ.ಖಾದರ್ ತೀವ್ರ ಖಂಡನೆ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ. ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯ ಮುಖಂಡರು ಜಿಲ್ಲಾಡಳಿತ ಪರಿಹಾರ ಘೋಷಿಸುವ ವರೆಗೂ ಮಯ್ಯತ್ (ಮೃತ ಶರೀರ) ನ್ನು ಪಡೆಯುವುದಿಲ್ಲ ಎಂಬುದಾಗಿ ಧರಣಿ ನಿರತರಾಗಿದ್ದು ಸ್ಥಳಕ್ಕೆ ಮಾಜಿ ಸಚಿವ ಶಾಸಕ
ಪ್ರೇಮಕಾಂತಿ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ಇ ದರ ಸ್ಥಾಪಕರಾದ ಪ್ರೊ.ಪ್ರೇಮಲತಾ ಶೆಟ್ಟಿ ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ತಾ.21-7-2022 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರಿಗೆ 91 ವರ್ಷ ಪ್ರಾಯವಾಗಿತ್ತು. ಸರಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ಸುಮಾರು 40 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಜೀವನ ಹಾಗೂ ಶಿಕ್ಷಣ ರಂಗದಲ್ಲಿ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದರು.
ನಿರಂತರವಾಗಿ ಪರಿಸರದ ಮೇಲೆ ಉಂಟಾಗುತ್ತಿರುವ ದೌರ್ಜನ್ಯದಿಂದಾಗಿ ಪರಿಸರದಲ್ಲಿ ಬದುಕು ಕಟ್ಟಿಕೊಂಡಿರುವ ಜೀವ ಸಂಕುಲಗಳು ನಾಶವಾಗಿ, ಪರಿಸರದ ಸಮತೋಲನ ತಪ್ಪಿ ಹೋಗುತ್ತಿದೆ. ಜೈವಿಕ ಸರಪಳಿ ನಾಶವಾಗಿ ಹಲವಾರು ವಿರಳ ಗಿಡ ಸಸ್ಯಗಳು ಮತ್ತು ಪ್ರಾಣಿ ಸಂಕುಲಗಳು ನಾಶವಾಗಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಕೂಡಲೇ ಎಚ್ಚೆತ್ತುಕೊಂಡು ಗಿಡಗಳನ್ನು ನೆಟ್ಟು ಮರಗಳನ್ನು ಪೋಷಿಸಿ ಪರಿಸರವನ್ನು ರಕ್ಷಿಸಬೇಕು. ಹಾಗಾದರೆ ಮಾತ್ರ ನಾಡು ಸಮೃದ್ಧವಾಗಿ ಕಾಲ ಕಾಲಕ್ಕೆ ಮಳೆ,
ಥಾಣೆ: ಮಾನವನಿಗೆ ಒಂದು ಧರ್ಮವಿದೆ, ಅದುವೇ ಮಾನವ ಧರ್ಮ. ಮಾನವ ಧರ್ಮ ವನ್ನು ಸಂಸ್ಕಾರದ ಮೂಲಕ ಅರಿಯಬೇಕು. ಅದರಿಂದ ಸಂಸ್ಕøತಿ ಉಳಿಯಲು ಸಾಧ್ಯವಿದೆ. ಸ್ವಾರ್ಥದ ಬದುಕು ಹೋಗಿ ನಿಸ್ವಾರ್ಥದ ಬದುಕು ನಮ್ಮದಾಗಬೇಕು. ಅಂತಹ ಗುಣ ನಮಗೆ ಬರಬೇಕು. ಕಡಲಿನಂತಹ ವಿಶಾಲವಾದ ಗುಣ ನಮ್ಮಲ್ಲಿರಲಿ. ನಮ್ಮನ್ನು ನಾವು ಅರಿಯಬೇಕು.ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥ ರಾದಾಗ ಮಾತ್ರ ಉತ್ತಮವಾದ ಜೀವನವನ್ನು ನಡೆಸಲು ಸಾಧ್ಯ ಎಂದು ಒಡಿಯೂರು ಒಡೆಯ ಶ್ರೀ ಗುರುದೇವಾನಂದ ಸ್ವಾಮೀಜಿ
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುದರಂಗಡಿ ಪ. ಪೂ. ಕಾಲೇಜಿನಲ್ಲಿ ಪತ್ರಿಕಾ ಮಾಹಿತಿ ಕಾರ್ಯಗಾರ ನೆರವೇರಿತು.ಪತ್ರಿಕಾ ಕಾರ್ಯಗಾರವನ್ನು ಸಂಪನ್ಮೂಲ ವ್ಯಕ್ತಿ ಉಡುಪಿ ಎಂಜಿಎಂ ಕಾಲೇಜು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರಾಗ ಬೇಕಾದವರು ಪ್ರಮುಖವಾಗಿ ಯಾವುದೇ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸ ಬೇಕಾಗಿರುವುದು ಅತ್ಯಗತ್ಯವಾಗಿದೆ. ವೃತ್ತಿ ಬದುಕಿನಲ್ಲಿ ಪತ್ರಕರ್ತರಿಗಿರುವಷ್ಟು ಹೊಸತನ,
2017ರ ಡಿಸೆಂಬರ್ ತಿಂಗಳ 29ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಇರುವ (ಆಗಿನ) ವಿಜಯ ಬ್ಯಾಂಕ್‍ನಲ್ಲಿ ಕ್ಯಾಶಿಯರ್ ಅಗಿದ್ದ ವಿಕಾಸ್ ಶೆಟ್ಟಿ ರೂ. 27,29,875/- ಎಗರಿಸಿದ್ದರು. ಆ ಶಾಖೆಯ ಮ್ಯಾನೇಜರ್ 2017ರ ಡಿಸೆಂಬರ್ 28ರಿಂದ 30ರ ವರೆಗೆ ರಜೆಯಲ್ಲಿದ್ದರು. ಪ್ರಭಾರ ಮ್ಯಾನೇಜರ್ ಅವರ ಟ್ಯಾಲಿ ಸಾಫ್ಟ್‍ವೇರ್‍ನಲ್ಲಿ ಅಂತಿಮ ನಗದು ಪರೀಕ್ಷಿಸುವಾಗ ಈ ಮೊತ್ತ ಕಡಿಮೆ ಇದ್ದದ್ದು ಗೊತ್ತಾಗಿತ್ತು.ಆರೋಪಿ ವಿಕಾಸ್ ಶೆಟ್ಟಿಯವರನ್ನು ವಿಚಾರಿಸಿದಾಗ
ಹಿರಿಯ ನಾಟಕಕಾರ, ನಿರ್ದೇಶಕ, ವಜ್ರನೇತ್ರ ಪತ್ರಿಕೆ ಸಂಪಾದಕ, ರತ್ನಾಕರ ರಾವ್ ಕಾವೂರುರವರು (81) ಇಂದು ಬೆಳಿಗ್ಗೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಸಾಮಾಜಿಕ, ಪೌರಾಣಿಕ, ಆಧ್ಯಾತ್ಮಿಕ, ನವ್ಯ ಮತ್ತು ಐತಿಹಾಸಿಕ ಹೀಗೆ ಐದು ಬಗೆಯ ನಾಟಕ ರಚನೆಯಲ್ಲಿ ಅವರದ್ದು ಗಮನಾರ್ಹ ಸಾಧನೆಯಾಗಿತ್ತು. ವಜ್ರನೇತ್ರ ಎಂಬ ಕನ್ನಡ ಪತ್ರಿಕೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಿ ಸರಕಾರದ ಗಮನ ಸೆಳೆಯುತ್ತಿದ್ದ ಅವರು ಸುಧೀರ್ಘ 60 ವರ್ಷಗಳ ಕಾಲ ಸರಸ್ವತಿಯ


















