ಮಂಗಳೂರು: ಬಿಎನ್‍ಐ ಮಂಗಳೂರಿನಿಂದ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋ-2023

ಬಿಎನ್‍ಐ ಮಂಗಳೂರು ವತಿಯಿಂದ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋ-2023ನ್ನು ಸೆಪ್ಟಂಬರ್ 30ರಿಂದ ಅಕ್ಟೋಬರ್ 2ರ ವರೆಗೆ ನಗರದ ಡಾ. ಟಿ.ಎಂ.ಎ.ಪೈ ಇಂಟರ್ ನ್ಯಾಶನಲ್ ಕನ್ವೆನ್ಷನ್ ಸೆಂಟರ್‍ನಲ್ಲಿ ಆಯೋಜಿಸಲಾಗಿದೆ ಎಂದು ಬಿಎನ್‍ಐ ಮಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಗಣೇಶ್ ಎನ್. ಶರ್ಮ ತಿಳಿಸಿದರು.
ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಬಿಎನ್‍ಐ ಮಂಗಳೂರು ಬಿಸ್‍ನೆಸ್ ನೆಟ್ವರ್ಕ್ ಇಂಟರ್‍ನ್ಯಾಷನ್‍ನ ಒಂದು ಭಾಗವಾಗಿದೆ. ಕಳೆದ ಬಾರಿಯೂ ಬಿಎನ್‍ಐ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋವನ್ನು ಆಯೋಜಿಸಿ ಯಶಸ್ವಿಯನ್ನು ಕಂಡಿದ್ದೇವೆ. ಈ ಬಾರಿ ಸೆಪ್ಟಂಬರ್ 30ರಿಂದ ಅಕ್ಟೋಬರ್ 2ರ ವರೆಗೆ ಅಂದರೆ ಮೂರು ದಿನಗಳ ಕಾಲ ಎಕ್ಸ್‍ಪೋ ವನ್ನು ಆಯೋಜಿಸಿದ್ದೇವೆ. ಇದರಲ್ಲಿ ಸುಮಾರು 120ಕ್ಕೂ ದೇಶ ಮತ್ತು ವಿದೇಶಿ ಬ್ರಾಂಡ್‍ಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಅನಾವರಣಗೊಳ್ಳಲಿದೆ. ಎಲ್ಲರೂ ಬಿಎನ್‍ಐ ಮಂಗಳೂರಿನಿಂದ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋದ ಪ್ರಯೋಜವನ್ನು ಪಡೆದುಕೊಳ್ಳಿ ಎಂದರು.
ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋದ ಚೇರ್‍ಮ್ಯಾನ್ ಮೋಹನ್ ರಾಜ್ ಅವರು ಮಾತನಾಡಿ, ಮಂಗಳೂರಿನ ಆಯ್ದ ವ್ಯವಹಾರಗಳಿಗೆ ಗೋಚರತೆ ಮತ್ತು ಮಾನ್ಯತೆ ನೀಡುವ ಉದ್ದೇಶದಿಂದ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋವನ್ನು ಹಮ್ಮಿಕೊಂಡಿದ್ದೇವೆ. 120 ಬಿಎನ್‍ಐ ಸದಸ್ಯರ ಸ್ಟಾಲ್‍ಗಳನ್ನು ಹೊಂದಿದ್ದು, ಮೂರು ದಿನಗಳ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೇರಳ, ಕೊಡಗಿನ ಇತರ ಭಾಗಗಳ ಗ್ರಾಹಕರಿಗೆ ತಮ್ಮ ತಕ್ಷಣದ ಅಗತ್ಯತೆಗಳು ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಗುಣಮಟ್ಟದ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಎಕ್ಸ್‍ಪೋ ಸಹಾಯ ಮಾಡುತ್ತದೆ ಎಂದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಬಿಎನ್‍ಐ ಮಂಗಳೂರಿನ ಸದಸ್ಯರಾದ ಸುನೀಲ್ ದತ್ ಪೈ, ದೀಪಿಕಾ ಶೆಟ್ಟಿ, ಸ್ವೀಕೃತ್, ಮಹೇಶ್ ಉಪಸ್ಥಿತರಿದ್ದರು.