ಉಪ್ಪುಂದ ಮಡಿಕಲ್‍ನಲ್ಲಿ ದೋಣಿ ದುರಂತ : ಅವಘಡದಲ್ಲಿ ಓರ್ವ ಮೃತ್ಯು, ಇನ್ನೋರ್ವರಿಗಾಗಿ ಹುಡುಕಾಟ
ಬೈಂದೂರು ತಾಲ್ಲೂಕಿನ ಉಪ್ಪುಂದ ಮಡಿಕಲ್‍ನ ಕರ್ಕಿಕಳಿ ಎಂಬಲ್ಲಿ ಸಂಜೆ ದೋಣಿ ದುರಂತ ಸಂಭವಿಸಿದ್ದು, ಒಬ್ಬರು ಮೃತಪಟ್ಟು ಒಬ್ಬರು ನಾಪತ್ರೆಯಾಗಿದ್ದಾರೆ. ನಾಗೇಶ್ (30)ಮೃತಪಟ್ಟಿದ್ದು, ಸತೀಶ್ ಖಾರ್ವಿ(34) ನಾಪತ್ತೆಯಾಗಿರುವ ಮೀನುಗಾರ.
ಸಚಿನ್ ಖಾರ್ವಿ ಮಾಲೀಕತ್ವದ ಮಾಸ್ತಿ ಮರ್ಲು ಚಿಕ್ಕು ಪ್ರಸಾದ ಹೆಸರಿನ ನಾಡದೋಣಿಯಲ್ಲಿ ಬೆಳಿಗ್ಗೆ ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ತೆರಳಿ ಮೀನುಗಾರಿಕೆ ಮುಗಿಸಿಕೊಂಡು ಉಪ್ಪುಂದ ಮಡಿಕಲ್‍ನ ಕರ್ಕಿಕಳಿ ಬಳಿ ದಡಕ್ಕೆ ದೋಣಿಯನ್ನು ತರುವಾಗ ಸಮುದ್ರದ ದೈತ್ಯ ಅಲೆಗಳಿಗೆ ಸಿಲುಕಿ ದೋಣಿ ಮುಗುಚಿ ಬಿದ್ದಿದೆ.
ದೋಣಿಯಲ್ಲಿದ್ದ ಎಂಟು ಮೀನುಗಾರರ ಪೈಕಿ ನಾಗೇಂದ್ರ ಖಾರ್ವಿ(29), ನಾಗೇಶ್ ಖಾರ್ವಿ (24), ದೇವೇಂದ್ರ ಖಾರ್ವಿ(25), ಅಣಪ್ಪ ಖಾರ್ವಿ(45), ಆದರ್ಶ ಖಾರ್ವಿ(20), ಸಚಿನ್ ಖಾರ್ವಿ (25) ಸುರಕ್ಷಿತವಗಿ ದಡ ಸೇರಿದ್ದಾರೆ. ಆದರೆ, ನಾಗೇಶ್ (30) ದಡ ಸೇರುವಾಗ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಂಬುಲೆನ್ಸ್ ಮೂಲಕ ಮೂಲಕ ಬೈಂದೂರು ಸರ್ಕಾರಿ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಸತೀಶ್ ಖಾರ್ವಿ(34) ಎಂಬುವರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. ಮೀನುಗಾರರು ಉಪ್ಪುಂದ ಗ್ರಾಮದ ಕರ್ಕಿಕಳಿ ನಿವಾಸಿಗಳಾಗಿದ್ದು ಬೈಂದೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.