ಮಂಗಳೂರು: ವಿ4 ನ್ಯೂಸ್‍ನ ಸಿಪಿಎಲ್ ಖ್ಯಾತಿಯ ವಿಧಾತ್ರೀ ಕಲಾವಿದರಿಂದ ದೈವರಾಜೆ ಶ್ರೀ ಬಬ್ಬುಸ್ವಾಮಿ ನಾಟಕ ಪ್ರದರ್ಶನ

ಮಂಗಳೂರಿನ ಅದ್ಯಪಾಡಿ ಬೀಬಿಲಚ್ಚಿಲ್‍ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಪ್ರಯುಕ್ತ ವಿ4 ನ್ಯೂಸ್‍ನ ಸಿಪಿಎಲ್ ಖ್ಯಾತಿಯ ವಿಧಾತ್ರೀ ಕಲಾವಿದೆರ್ ಕೈಕಂಬ-ಕುಡ್ಲ ಇವರು ಅಭಿನಯಿಸುವ ಭಕ್ತಿ ಪ್ರಧಾನ ತುಳು ನಾಟಕ ದೈವರಾಜೆ ಶ್ರೀ ಬಬ್ಬುಸ್ವಾಮಿ ಇಂದು (ಶುಕ್ರವಾರ) ರಾತ್ರಿ 9 ಗಂಟೆಗೆ ಪ್ರದರ್ಶನಗೊಳ್ಳಲಿದೆ.

ನಟ, ನಿರ್ದೇಶಕರಾದ ವಿಜಯ್ ಕುಮಾರ್ ಕೊಡಿಯಾಲ್‍ಬೈಲ್ ಇವರ ಸಲಹೆ ಮತ್ತು ಸಹಕಾರದೊಂದಿಗೆ, ಭರತ್ ಎಸ್. ಕರ್ಕೇರ ಅವರ ಕಥೆ ಮತ್ತು ಸಂಭಾಷಣೆಯಲ್ಲಿ ಚಿದಾನಂದ ಅದ್ಯಪಾಡಿ ನಿರ್ದೇಶನದಲ್ಲಿ ಮತ್ತು ಪ್ರಶಾಂತ್ ಕುಮಾರ್ ಬೇಡಗುಡ್ಡೆ ಅವರ ಸಂಗೀತ ಸಂಯೋಜನೆಯಲ್ಲಿ ಚಾರಿತ್ರಿಕ ತುಳು ನಾಟಕ ದೈವರಾಜೆ ಶ್ರೀ ಬಬ್ಬುಸ್ವಾಮಿ ನಾಟಕ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 9844023564, 3164632658ಗೆ ಸಂಪರ್ಕಿಸಬಹುದು.
