ಬ್ರಹ್ಮಾವರ: ಸಕ್ಕರೆ ಕಾರ್ಖಾನೆ ವಿವಾದ ಮತ್ತೆ ಮುನ್ನೆಲೆಗೆ-ಮಹಾಸಭೆ ಮುಂದೂಡಿಕೆ
ಬ್ರಹ್ಮಾವರದಲ್ಲಿರುವ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು ಸೋಮವಾರ ನಡೆಯಬೇಕಾದ ಮಹಾಸಭೆಯಲ್ಲಿ ಗೊಂದಲ ಉಂಟಾಗಿ ಸಭೆ ಮುಂದೂಡಲ್ಪಟ್ಟಿದೆ.
ಬ್ರಹ್ಮಾವರದ ಹೋಟೇಲ್ ಸಭಾಂಗಣದಲ್ಲಿ ಬೈಕಾಡಿ ಸುಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ನಿಗದಿಯಾಗಿತ್ತು. ಇದೇ ಸಮಯದಲ್ಲಿ ಸಭಾ ಭವನದ ಇನ್ನೊಂದು ಭಾಗದಲ್ಲಿ ರೈತ ಸಂಘದ ಅಧ್ಯಕ್ಷ ಪ್ರತಾಪ್‍ಚಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆಯ ಅವ್ಯವಹಾರದ ಬಗ್ಗೆ ಸಮಾಲೋಚನೆ ಸಭೆ ನಡೆದಿತ್ತು.
ಸಮಾಲೋಚನಾ ಸಭೆಯಲ್ಲಿದ್ದ ಸಕ್ಕರೆ ಕಾರ್ಖಾನೆಯ ಸದಸ್ಯರು ಮಹಾಸಭೆಗೆ ಬಂದು ಮಹಾಸಭೆಗೆ ಖಾಸಗಿ ಭದ್ರತಾ ತಂಡವನ್ನು ನಿಯೋಜನೆ ಮಾಡಿರುವ ಬಗ್ಗೆ ಮತ್ತು ಅಧ್ಯಕ್ಷರ ಕುರಿತು ಪ್ರಶ್ನೆ ಕೇಳಿದಾಗ ಮಾತಿಗೆ ಮಾತು ಬೆಳೆದು ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಯಿತು. ಬಳಿಕ ಸಭೆಯಲ್ಲಿ ಹಾಜರಿದ್ದ ಡಿ. ಆರ್. ಅಧಿಕಾರಿ ರಮೇಶ್ ಅÀವರ ಸೂಚನೆ ಮೇರೆಗೆ ಮಹಾಸಭೆಯನ್ನು ಮುಂದೂಡಲಾಯಿತು.