ಬ್ರಹ್ಮಾವರದಲ್ಲಿ ಶ್ರಾವಣ ಮಾಸದ ಜನಪದ ಆಚರಣೆ “ಹೊಸ್ತಿಲ ಅಜ್ಜಿ” ಸಂಭ್ರಮ

ಬ್ರಹ್ಮಾವರ: ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸೋಣ ತಿಂಗಳಿನಲ್ಲಿ ಆಚರಿಸುವ “ಹೊಸ್ತಿಲ ಅಜ್ಜಿ” ಎಂಬ ಆಚರಣೆ ಮಾಯವಾಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಬ್ರಹ್ಮಾವರ ಬಂಟರ ಯಾನೆ ನಾಡವರ ಸಂಘದ ಸಭಾಭವನದಲ್ಲಿ “ಹೊಸ್ತಿಲ ಅಜ್ಜಿ ಶ್ರಾವಣ ಸಂಭ್ರಮ” ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿ ಯುವ ಪೀಳಿಗೆಗೆ ಪರಿಚಯಿಸಲಾಗಿದೆ.

ಶ್ರಾವಣ ಮಾಸದಲ್ಲಿ ಮಾತ್ರ ಒಂದು ದಿನ ರಾತ್ರಿ ಹೊಸ್ತಿಲಗೆ ನಾನಾ ಬಗೆಯ ಭಕ್ಷ್ಯಗಳು, ಖಾದ್ಯಗಳ ಜತೆಯಲ್ಲಿ ಶಾಖಾಹಾರಿಗಳು ತರಕಾರಿ ಪಲ್ಯವನ್ನು ಇರಿಸಿದರೆ ಮಾಂಸಹಾರಿಗಳು ಉದ್ದಿನ ದೋಸೆ ಮತ್ತು ಕೋಳಿ, ಮೀನು ಸಾರನ್ನು ಬಡಿಸಿ ದೂಪ, ದೀಪದ ಆರತಿ ಮಾಡಿ ತೆಂಗಿನ ಕಾಯಿ ಒಡೆದು ಪೂಜಿಸುತ್ತಾರೆ. ಹೊಸ್ತಿಲ ಬಳಿ ಇರುವ ಮನೆಯ ಮಕ್ಕಳು ದೋಸೆ ಮತ್ತು ಇರಿಸದ ತಿಂಡಿಯನ್ನು ಕೊಂಡು ಹೋಗುವಾಗ ಅವರಿಗೆ ಅರಿವಿಗೆ ಬಾರದಂತೆ ಸೊಪ್ಪಿನ ಕೋಲಿನಿಂದ ಅಜ್ಜಿಯನ್ನು ಮನೆಯಿಂದ ಓಡಿಸುತ್ತಾರೆ. ನಂತರ ಮನೆ ಮಂದಿ ಸೇರಿ ಊಟ ಮಾಡುವುದೇ “ಹೊಸ್ತಿಲ ಅಜ್ಜಿ” ಆಚರಣೆ.

ಬೆಂಗಳೂರಿನ ವಿಐಪಿ ಹೈಸ್ಕೂಲ್‍ನ ಪ್ರಿನ್ಸಿಪಾಲ್ ಬಾರಕೂರಿನ ಸಾಕಮ್ಮ ಶೆಟ್ಟಿ ಈ ಆಚರಣೆಯ ಕಾರ್ಯಕ್ರಮವನ್ನು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿ, ಹೊಸ್ತಿಲ ಪೂಜೆ ನೆರವೇರಿಸಿದರು. ಬಂಟರ ಯಾನೆ ನಾಡವರ ಸಂಘದ ಪದಾಧಿಕಾರಿಗಳು, ಮಹಿಳಾ ಸದಸ್ಯೆಯರು ಭಾಗವಹಿಸಿದ್ದರು.

Related Posts

Leave a Reply

Your email address will not be published.