ನಿವೃತ್ತ ಮುಖ್ಯ ಶಿಕ್ಷಕ ಸುರೇಶ ಭಂಡಾರಿಗೆ ಬೀಳ್ಕೊಡುಗೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳ್ಳಬೈಲು ಇಲ್ಲಿನ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಸಂಪನ್ಮೂಲ ವ್ಯಕ್ತಿ ಸುರೇಶ ಭಂಡಾರಿ ಮತ್ತು ಅವರ ಪತ್ನಿ ಶಾಂತಾ ಶೆಟ್ಟಿಯರವರನ್ನು ವೇದಮೂರ್ತಿ ಕೊಡಕಟ್ಟು ಮಂಜುನಾಥ ಉಪಾಧ್ಯಾಯ ಶಾಲಾ ವತಿಯಿಂದ ಹಾಗೂ ಊರವರ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನಿತರು ಬೈಂದೂರು, ಕಮಲಶಿಲೆ ಮತ್ತಿತರ ಕಡೆಗಳಲ್ಲಿ ಶಿಕ್ಷಕರಾಗಿ, ಬ್ರಹ್ಮಾವರ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದೇ ಸಂದರ್ಭದಲ್ಲಿ ಸಂದೀಪ್ ಶೆಟ್ಟಿ ಶಿರಿಯಾರ ಇವರು ವಿದ್ಯಾರ್ಥಿಗಳಿಗೆ ಕೊಡಮಾಡಿದ ಸಮವಸ್ತ್ರವನ್ನು ವಿತರಿಸಲಾಯಿತು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಗೋಪಾಲ ನಾಯ್ಕ, ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್, ಕಿರಣ್ ಶೆಟ್ಟಿ ಪಡುಮುಂಡು, ರವೀಂದ್ರನಾಥ ಶೆಟ್ಟಿ ಕೊಳ್ಳಬೈಲು, ಪ್ರದೀಪ್ ಬಲ್ಲಾಳ್ ಶಿರಿಯಾರ, ಶೇಖರ ಸುವರ್ಣ ಸಕ್ಕಟ್ಟು, ಪ್ರಸಾದ್ ಶೆಟ್ಟಿ ಕೊಳ್ಳಬೈಲು, ರಾಘವೇಂದ್ರ ಆಚಾರ್ಯ ಸಾೈಬ್ರಕಟ್ಟೆ, ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗರಾಜ ಆಚಾರ್ಯ, ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಹಶಿಕ್ಷಕ ಗಣೇಶ್ ರಾವ್, ಸವಿತಾ ಸಿ.ಟಿ, ಜಯಲಕ್ಷ್ಮಿ ಎಚ್.ವಿ, ಗೌರವ ಶಿಕ್ಷಕಿ ಶ್ರೀರಕ್ಷಾ, ನವ್ಯ ಸಹಕರಿಸಿದರು.