ಬೇಲೂರು ಕಸಬಾ ಹೋಬಳಿ ಎ ಮಟ್ಟದ ಕ್ರೀಡಾ ಕೂಟ
ಬೇಲೂರು ಕಸಬಾ ಹೋಬಳಿ ಎ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟವು ವಿದ್ಯಾವಿಕಾಸ್ ಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನಡೆಯಿತು.
ಕ್ರೀಡಾ ಕೂಟದಲ್ಲಿ ವಿದ್ಯಾವಿಕಾಸ ಶಾಲೆಯ ಬಾಲಕರು ವೈಯುಕ್ತಿಕ ಪ್ರಶಸ್ತಿ ಮತ್ತು ಸಮಗ್ರ ಪ್ರಶಸ್ತಿಯನ್ನು ವಿದ್ಯಾವಿಕಾಸ ಹಾಗೂ ಸರ್ವೋದಯ ಶಾಲೆಗಳು ಸಮನಾಗಿ ಪಡೆದುಕೊಂಡಿವೆ. ಬಾಲಕರ ವಿಭಾಗದಲ್ಲಿ ವಿದ್ಯಾವಿಕಾಸ ಶಾಲೆ, ಬಾಲಕೀಯರ ವಿಭಾಗದಲ್ಲಿ ಸರ್ವೋದಯ ಶಾಲೆ ತನ್ನದಾಗಿಸಿಕೊಂಡಿದೆ.
ಈ ಕ್ರಿಡಾ ಕೂಟದ ಯಶಸ್ಸಿಗೆ ಶಾಲೆಯ ದೈಹಿಕ ಶಿಕ್ಷಕ ಯಶವಂತ್ ಹಾಗೂ ಇತರ ಶಿಕ್ಷಕ ವೃಂದ ಕಾರಣರಾಗಿದ್ದಾರೆಂದು ವಿದ್ಯಾವಿಕಾಸ ಸಂಸ್ಥೆಯ ಅಧ್ಯಕ್ಷ ರಂಗನಾಥ್ ತಿಳಿಸಿದರು.