ಬ್ರಹ್ಮಾವರ: ಬಾರಕೂರಿನ ವಿವಿಧ ದೇವಾಲಯಗಳಲ್ಲಿ ವರಮಹಾಲಕ್ಷ್ಮೀ ಪೂಜೆ

ಬ್ರಹ್ಮಾವರ: ಬಾರಕೂರಿನ ವಿವಿಧ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀ ವೃತ ಪೂಜೆ ನಡೆಯಿತು. ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ, ಮೂಡುಕೇರಿ ಶ್ರೀ ಸರಸ್ವತಿ ನಾರಾಯಣಿ ದೇವಸ್ಥಾನ, ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾ ಪರಮೇಶ್ವರೀ ದೇವಸ್ಥಾನ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ,

ಕಚ್ಚೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ, ಶ್ರೀ ಏಕನಾಥೇಶ್ವರೀ ದೇವಸ್ಥಾನ, ಕಚ್ಚೂರು ಮಾಲ್ತಿ ದೇವಿ ದೇವಸ್ಥಾನ,

ಮೂಡುಕೇರಿ ಶ್ರೀ ವೇಣು ಗೋಪಾಲಕೃಷ್ಣ, ಬೆಣ್ಣೆಕುದ್ರು ಶ್ರೀ ಕುಲ ಮಹಾ ಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯಲ್ಲಿ ಸಹಸ್ರಾರು ಮಹಿಳೆಯರು ಪಾಲ್ಗೊಂಡರು.
