ಮಂಗಳೂರು: ಅದ್ಯಪಾಡಿ ಬೀಬಿಲಚ್ಚಿಲ್ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ
ಮಂಗಳೂರಿನ ಅದ್ಯಪಾಡಿ ಶ್ರೀ ಬೀಬಿಲಚ್ಚಿಲ್ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕರಾದ ಗೋಪಾಲ ಕೃಷ್ಣ ಭಟ್ ಹಾಗೂ ಪ್ರಸಾದ್ ಭಟ್ ಅವರು, ಪೂಜ ವಿಧಿ ವಿಧಾನ ನೆರವೇರಿಸಿದರು.
ಊರ ಪರ ವೂರ ಹಾಗೂ ಬೈಲು ಮಾಗಣೆಯ ಸಮಸ್ತ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಕ್ಷೇತ್ರದ ಆಡಳಿತ ಮಂಡಳಿಯವರು ಹಾಗೂ ಮೊಕ್ತೇಸರರದ ಮೋನಪ್ಪ ಮೇಸ್ತ್ರಿ ಉಪಸ್ಥಿತರಿದ್ದರು.