ಪೇ ಚಾನಲ್‍ಗಳ ಗ್ರಾಹಕರ ಮಾಸಿಕ ದರ ಏರಿಕೆ

ಕೇಂದ್ರ ಸರಕಾರವು ಎನ್‍ಟಿಒ 3.0 ನಿಯಮದ ಪ್ರಕಾರ ಬ್ರಾಂಡ್ ಕ್ಯಾಸ್ಟರ್ ಪೇ ಚಾನೆಲ್‍ಗಳ ದರ ಏರಿಸಲು ಅನುಮತಿ ನೀಡಿರುವ ಪರಿಣಾಮವಾಗಿ, ಎಲ್ಲಾ ಪೇ ಚಾನೆಲ್‍ಗಳ ದರ ಏಪ್ರಿಲ್ ರಿಂದ ಏರಿಕೆಯಾಗಿರುತ್ತದೆ. ಕಳೆದ ಹಲವು ದಿನಗಳ ಹಿಂದೆ ಕೇಬಲ್ ಆಪರೇಟರ್ ಪ್ರತಿಭಟನೆ ನಡೆಸಿದ್ದು, ಆದರೂ ಪೇ ಚಾನೆಲ್‍ಗಳ ಮಾಸಿಕ ದರವನ್ನು ಏರಿಸಿರುತ್ತಾರೆ. ಹಾಗಾಗಿ ಎಲ್ಲ ಗ್ರಾಹಕರ ಮಾಸಿಕ ದರವು ಹೆಚ್ಚಾಗಿದ್ದು, ಗ್ರಾಹಕರು ಸ್ಥಳೀಯ ಕೇಬಲ್ ಆಪರೇಟರ್‍ನವರಿಗೆ ಸಹಕರಿಸಬೇಕಾಗಿ ಉಡುಪಿ ಜಿಲ್ಲಾ ಕೇಬಲ್ ಆಪರೇಟರ್‍ಗಳ ಸಂಘ ವಿನಂತಿಸಿದೆ.