Home ಕರಾವಳಿ Archive by category ಉಡುಪಿ (Page 64)

ಕಾರ್ಕಳದ ಪಕ್ಷೇತರ ಅಭ್ಯರ್ಥಿ ಡಾ. ಮಮತಾ ಹೆಗ್ಡೆ ಬಿರುಸಿನ ಪ್ರಚಾರ

ಕಾರ್ಕಳದ ಪಕ್ಷೇತರ ಅಭ್ಯರ್ಥಿ ಡಾ. ಮಮತಾ ಹೆಗ್ಡೆ ಅವರು ಕ್ಷೇತ್ರಾದ್ಯಂತ ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಕ್ಷೇತ್ರದ ಪ್ರಭಾವಿ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಡಾ. ಮಮತಾ ಹೆಗ್ಡೆ ಆರೋಪಿಸಿದ್ದಾರೆ. ಕ್ಷೇತ್ರಾದ್ಯಂತ ಮತದಾರರು ಭ್ರಷ್ಟಾಚಾರದ ವಿರುದ್ಧ ನಿಂತಿದ್ದು ತನ್ನ

ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರಿಂದ ಬಿರುಸಿನ ಮತ ಪ್ರಚಾರ

ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರು ಗಂಗೊಳ್ಳಿ ಮತ್ತು ಹೊಸೂರು ಭಾಗದಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಗುರುರಾಜ್ ಗಂಟಿಹೊಳೆ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಬೈಂದೂರಿನ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ : ಕಾರ್ಕಳದ ವಿವಿಧೆಡೆ ಮತಪ್ರಚಾರ

ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಕಾವು ಏರತೊಡಗಿದೆ. ಒಂದು ಕಡೆಯಿಂದ ಬಿಸಿಲಿನ ತಾಪ. ಇನ್ನೊಂದು ಕಡೆಯಿಂದ ಚುನಾವಣಾ ಪ್ರಚಾರದ ಕಾವು ಈ ಮಧ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾದ ವಿ. ಸುನಿಲ್ ಕುಮಾರ್ ಅವರು ಮುಡಾರು ಗ್ರಾಮದ ಬಜೆಗೂಳಿಯಲ್ಲಿ ಪಾದಯಾತ್ರೆ ಮೂಲಕ ಮನೆಗಳಿಗೆ ಹಾಗೂ ಅಂಗಡಿ ಹೋಟೆಲ್ ಗಳಿಗೆ ಮತ್ತು ಗೇರು ಬೀಜದ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಬಳಿ ತಮ್ಮ ಅವಧಿಯಲ್ಲಿ ಆದ ಯೋಜನೆಗಳನ್ನು ಮನದಟ್ಟು ಮಾಡಿ ಇನ್ನು

ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರಿಂದ ಮತ ಯಾಚನೆ

ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರು ಕಂಡ್ಲೂರಿನ ಸುತ್ತಮುತ್ತಲಿನಲ್ಲಿ ಪ್ರದೇಶಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗುರುರಾಜ್ ಗಂಟಿಹೊಳೆಯವರು ಈ ಬಾರಿ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನಾಗಿ ಪಕ್ಷದವರು ಟಿಕೆಟ್ ನೀಡಿದ್ದಾರೆ. ಈ ಬಾರಿ ಬಿಜೆಪಿ ಪಕ್ಷವನ್ನು ಬೆಂಬಲಿಸಿಬೇಕೆಂದು ಹೇಳಿದರು.

ಕಟಪಾಡಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತಯಾಚನೆ

ಕಾಪು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಜೊತೆಗಿದ್ದರು.

ಬಿಜೆಪಿ ಅಭ್ಯರ್ಥಿ ಪರ ಗೆಲುವಿನ ವಾತಾವರಣ ಇದೆ : ಕಾಪುವಿನಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರ ಪರ ಗೆಲುವಿನ ವಾತಾವರಣ ಇದ್ದು, ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ವಿಶ್ವಾಸ ವ್ಯಕ್ತಪಡಿಸಿದರು. ಅವರು ಕಾಪುವಿನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕಾರ್ಯಕರ್ತರು ಅತೀ ಉತ್ಸಾಹದಲ್ಲಿದ್ದು, ಸುರೇಶ ಶೆಟ್ಟಿ ಗುರ್ಮೆ ಕಾಪುವಿನಲ್ಲಿ ವಿಜಯಪತಾಕೆ ಹಾರಿಸುವುದು ಖಚಿತವಾಗಿದೆ.ಕಾಪುವಿನ ಶಾಸಕ ಲಾಲಾಜಿ ಮೆಂಡನ್ ರವರು

ನೀರೆ-ಬೈಲೂರು ಬಿಜೆಪಿ ಕಾರ್ಯಕರ್ತರ ಸಭೆ

ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಕಷ್ಟೇ ಒತ್ತು ನೀಡದೆ ಜನರ ನಾಡಿ ಮಿಡಿತ ಅರಿತು ಜನಸಾಮಾನ್ಯರ ಜೊತೆಗೆ ನಿಂತವರು. ಕಾರ್ಕಳ ಕ್ಷೇತ್ರಕ್ಕೆ ಇಂತಹ ಕೆಲಸಗಾರ ಶಾಸಕ ಬೇಕೆ ಹೊರತು ಜಾತಿವಾದಿ ಶಾಸಕ ಬೇಡ ಎಂದು ತಾ.ಪಂ ಮಾಜಿ ಅಧ್ಯಕ್ಷ ವಿಕ್ರಮ ಹೆಗ್ಡೆ ಹೇಳಿದರು. ಕಾರ್ಕಳ ವಿಧಾನ ಸಭಾ ಕ್ಷೇತ್ರದ ನೀರೆ- ಬೈಲೂರು ಭಾಗದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಾರ್ಕಳ ಕ್ಷೇತ್ರವನ್ನು ಕಳೆದ

ಉಡುಪಿ ಕಾಂಗ್ರೆಸ್ ಪ್ರಚಾರಕ್ಕೆ ಕೈ ಜೋಡಿಸಿದ ಕೃಷ್ಣಮೂರ್ತಿ ಆಚಾರ್ಯ

ಕಾಂಗ್ರೆಸ್‍ಗೆ ತಲೆನೋವಾಗಿದ್ದ ಬಂಡಾಯ ಅಭ್ಯರ್ಥಿ ಇದೀಗ ಕಾಂಗ್ರೆಸ್‍ಗೆ ವಾಪಸ್ ಅಗಿದ್ದಾರೆ. ನಿನ್ನೆ ನಡೆದ ಡಿ.ಕೆ ಶಿವಕುಮಾರ್ ಭಾಗವಹಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮತ್ತೆ ತನ್ನ ಮನೆಯನ್ನು ಸೇರಿಕೊಂಡಿದ್ದಾರೆ. ಟಿಕೆಟ್ ಸಿಗದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಕೃಷ್ಣ ಮೂರ್ತಿ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.ಇದು ಕಾಂಗ್ರೆಸ್ ಗೆ ತಲೆನೋವಾಗಿತ್ತು. ಹಲವು ಬಾರಿ ಸಂದಾನ ಪ್ರಕ್ರಿಯೆ ನಡೆಸಿದರು

ಕಾರ್ಕಳ; ಕಡ್ತಲ ಬಿಜೆಪಿ ಕಾರ್ಯಕರ್ತರ ಸಭೆ

ಕಾರ್ಕಳ; ಕಾಂಗ್ರೆಸ್ಸಿಗೆ ಮತ ನೀಡಿದರೆ ಹಿಂದೂ ವಿರೋಧಿ ಶಕ್ತಿಗಳು ವಿಜ್ರಂಬಿಸುತ್ತವೆ, ಹಿಂದೂಗಳ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ಸಿನ ಆಸೆ, ಅಮಿಷ, ಜಾತಿ ರಾಜಕಾರಣಕ್ಕೆ ಮತ ಹಾಕದೆ ಅಭಿವೃ ದ್ಧಿಯನ್ನು ಬೆಂಬಲಿಸಿ ಎಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ವಿ ಸುನಿಲ್ ಕುಮಾರ್ ಹೇಳಿದರು. ಕಡ್ತಲ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಮತೀಯವಾದಿಗಳ ಪರವಿದೆ, ಕಾಂಗ್ರೆಸ್ಸಿಗೆ ಹಾಕುವ ಒಂದೊಂದು

ಕಲ್ಯಾದ ಕೈರಬೆಟ್ಟುವಿನ ಕಾಂಗ್ರೆಸ್ಸ್ ಕಾರ್ಯಕರ್ತರು ಬಿಜೆಪಿಗೆ ಸೆರ್ಪಡೆ

ಕಾರ್ಕಳ: ಕಲ್ಯಾ ಗ್ರಾಮದ ಕೈರಬೆಟ್ಟು ಪರಿಸರದ ಸುಮಾರು 7 ಜನ ಕಾಂಗ್ರೆಸ್ಸ್ ಪಕ್ಷದ ಸಕ್ರೀಯ ಕಾರ್ಯಕರ್ತರು ಕಾರ್ಕಳ ಕ್ಷೇತ್ರದ ಶಾಸಕರು ಮತ್ತು ಸಚಿವರಾದ ಶ್ರೀ.ವಿ.ಸುನಿಲ್ ಕುಮಾರ್ ರವರ ಅಭಿವೃದ್ದಿ ಚಟುವಟಿಕೆಗಳು ಮತ್ತು ಕ್ಷೇತ್ರದ ಬಗೆಗಿನ ವಿಶೇಷ ಕಾಳಜಿಯನ್ನು ಮೆಚ್ಚಿ ಇಂದು ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.ಬಾಲೇಶ್ ಕುಮೆರೊಟ್ಟು, ಜಯ ನಾಯಕ್ ಕೈರಬೆಟ್ಟು, ಶೀನ ನಾಯಕ್ ಶೇಡಿ ಬಾಕ್ಯಾರು ರಾಧ ಕೈರಬೆಟ್ಟು, ಸುಪ್ರೀತ