ಕಲ್ಯಾದ ಕೈರಬೆಟ್ಟುವಿನ ಕಾಂಗ್ರೆಸ್ಸ್ ಕಾರ್ಯಕರ್ತರು ಬಿಜೆಪಿಗೆ ಸೆರ್ಪಡೆ
ಕಾರ್ಕಳ: ಕಲ್ಯಾ ಗ್ರಾಮದ ಕೈರಬೆಟ್ಟು ಪರಿಸರದ ಸುಮಾರು 7 ಜನ ಕಾಂಗ್ರೆಸ್ಸ್ ಪಕ್ಷದ ಸಕ್ರೀಯ ಕಾರ್ಯಕರ್ತರು ಕಾರ್ಕಳ ಕ್ಷೇತ್ರದ ಶಾಸಕರು ಮತ್ತು ಸಚಿವರಾದ ಶ್ರೀ.ವಿ.ಸುನಿಲ್ ಕುಮಾರ್ ರವರ ಅಭಿವೃದ್ದಿ ಚಟುವಟಿಕೆಗಳು ಮತ್ತು ಕ್ಷೇತ್ರದ ಬಗೆಗಿನ ವಿಶೇಷ ಕಾಳಜಿಯನ್ನು ಮೆಚ್ಚಿ ಇಂದು ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ಬಾಲೇಶ್ ಕುಮೆರೊಟ್ಟು, ಜಯ ನಾಯಕ್ ಕೈರಬೆಟ್ಟು, ಶೀನ ನಾಯಕ್ ಶೇಡಿ ಬಾಕ್ಯಾರು ರಾಧ ಕೈರಬೆಟ್ಟು, ಸುಪ್ರೀತ ಕೈರಬೆಟ್ಟು, ಮೂರ್ತಿ ನೆಲ್ಲಿಗುಡ್ಡೆ, ನಾಗರಾಜ್ ಕೈರಬೆಟ್ಟು, ಮೊದಲಾದವರು ಸ್ವ- ಇಚ್ಛೆಯಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಹಾಶಕ್ತಿಕೇಂದ್ರ ಅಧ್ಯಕ್ಚರಾದ ಸುಮಿತ್ ಶೆಟ್ಟಿ, ಕಲ್ಯಾ ಗ್ರಾ.ಪಂ. ಅಧ್ಯಕ್ಚರಾದ ಸಂಜೀವ ಶೆಟ್ಟಿ, ಉಪಾಧ್ಯಕ್ಷರಾದ ಸುಪ್ರೀಯಾ ಕೋಟ್ಯಾನ್ ಪ್ರಮುಖರಾದ ಕೃಷ್ಣರಾಜ ರೈ ಕುಂಟಾಡಿ, ರವಿರಾಜ ಉಪಾದ್ಯಾಯ, ನಾಗಭೂಷಣ್, ಸುನೀಲ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.