Home ಕರಾವಳಿ Archive by category ಉಳ್ಳಾಳ (Page 25)

ಉಳ್ಳಾಲ ಸೈಯದ್ ಮದನಿ ದರ್ಗಾಕ್ಕೆ ಡಾ. ಜಿ. ಪರಮೇಶ್ವರ್ ಭೇಟಿ

ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಇತಿಹಾಸ ಪ್ರಸಿದ್ಧ ಉಳ್ಳಾಲ ಸೈಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿದರು. ಮಂಗಳೂರು ದಕ್ಷಿಣ  ಮಾಜಿ ಶಾಸಕ ಜೆ.ಆರ್ ಲೋಬೊ, ಕೆಪಿಸಿಸಿಯ ಪ್ರೊ. ರಾಧಾಕೃಷ್ಣ , ಕೆಪಿಸಿಸಿ ಸೆಕ್ರೆಟರಿಗಳಾದ ಹುಸೈನ್ , ಜಿ.ಎ.ಬಾವಾ, ಟಿ.ಕೆ ಸುಧೀರ್, ಡಾ.ಅಭಿಲಾಷ್ ಕೂಡ ಭೇಟಿ ನೀಡಿದ್ದು, ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಗೋಸಂತತಿ ಹೆಚ್ಚಿಸಲು ಯೋಜನೆ ಜಾರಿಗೊಳಿಸಬೇಕಿದೆ : ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿಕೆ

ಉಳ್ಳಾಲ: ಗೋಸಂತತಿ ಕಡಿಮೆಯಿದೆ. ಅದನ್ನು ಹೆಚ್ಚು ಮಾಡುವ ಕೆಲಸ ಆಗಬೇಕಿದೆ. ಗೋವುಗಳನ್ನು ಸಾಕುವವರಿಗೆ ಅದರ ಕಷ್ಟಗಳು ಗೊತ್ತಿದೆ ಹೊರತು ಭಾಷಣ ಮಾಡುವವರಿಗೆ ಕಷ್ಟದ ಬಗ್ಗೆ ಗೊತ್ತಿಲ್ಲ. ಗೋಸಾಕುವವರಿಗೆ ಶೇ.90 ಕ್ಕಿಂತ ಹೆಚ್ಚಿನ ಸಬ್ಸಿಡಿಯನ್ನು ಸರಕಾರ ನೀಡಿ ಗೋವುಗಳನ್ನು ಸಾಕಲು ಪ್ರೋತ್ಸಾಹಿಸಬೇಕು ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿದರು. ದ.ಕ ಜಿಲ್ಲಾ ಪಂಚಾಯತ್ , ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಳ್ಳಾಲ ತಾಲೂಕು ಇದರ 2021-22 ನೇ ಸಾಲಿನ

ಉಳ್ಳಾಲ : ಮುಳುಗಿದ್ದ ಪ್ರಿನ್ಸೆಸ್ ಮಿರಾಲ್ ಹಡಗು : 6 ತಿಂಗಳ ಬಳಿಕ ತೈಲ ತೆರವು ಕಾರ್ಯ

ಉಳ್ಳಾಲ: ಸೋಮೇಶ್ವರ ಉಚ್ಚಿಲ ಕಡಲ ತೀರದಲ್ಲಿ ಚೀನಾದ ಹಡಗು ಮುಳುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ಆರು ತಿಂಗಳ ಬಳಿಕ ಹಡಗಿನ ತೈಲ ತೆರವು ಕಾರ್ಯ ಆರಂಭವಾಗಿದೆ. ಸರಕು ಹಡಗಿನಲ್ಲಿದ್ದ ಸುಮಾರು 220 ಟನ್ ತೈಲ ತೆರವು ಕಾರ್ಯ ನಡೀತಾ ಇದ್ದು, ಚೀನದಿಂದ ಲೆಬನಾನ್‍ಗೆ 8 ಸಾವಿರ ಟನ್ ತೂಕದ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ಹಡಗು ಇದಾಗಿತ್ತು. 2022ರ ಜೂನ್ 21ರಂದು ಉಳ್ಳಾಲದ ಬಟ್ಟಪಾಡಿ ಬಳಿ ಮುಳುಗಿದ್ದ ಪ್ರಿನ್ಸೆಸ್ ಮಿರಾಲ್ ಹಡಗು ಮುಳುಗಡೆಯಾಗಿತ್ತು.

ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ನೇಮಕ ಅಸಿಂಧು : ಸಭೆ ಮೊಟಕುಗೊಳಿಸಿ ಹೊರನಡೆದ ಅಧ್ಯಕ್ಷೆ

ಉಳ್ಳಾಲ: ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ಕಾಂಗ್ರೆಸ್-ಬಿಜೆಪಿ ಮೈತ್ರಿಯಿಂದ ಮಾಡಲಾಗಿದೆ . ಈ ಕುರಿತ ವರದಿಯನ್ನು ನಗರಸಭೆ ಅಧ್ಯಕ್ಷರು ಜಿಲ್ಲಾಧಿಕಾರಿಗೆ ನೀಡಿದ್ದಾರೆ ಅನ್ನುವ ನಗರಸಭೆ ಸದಸ್ಯರೊಬ್ಬರ ಆರೋಪ ಎರಡು ಪಕ್ಷಗಳ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಗಿ ಅಧ್ಯಕ್ಷರು ರಾಷ್ಟ್ರಗೀತೆಯನ್ನು ಹಾಡದೇ ಅರ್ಧದಲ್ಲೇ ಸಭೆಯಿಂದ ಹೊರನಡೆದ ಘಟನೆ ಇಂದು ಉಳ್ಳಾಲ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು. ಕಾಂಗ್ರೆಸ್ ಬೆಂಬಲಿತ 7 ಸದಸ್ಯರನ್ನು ಇಟ್ಟುಕೊಂಡು

ಬುರ್ದುಗೋಳಿ ಗುಳಿಗಜ್ಜ ಕ್ಷೇತ್ರಕ್ಕೆ ಕರಿ ಹೈದ ಕರಿಯಜ್ಜ ಚಿತ್ರತಂಡದಿಂದ ಹುಂಜ ಹರಕೆ

ಉಳ್ಳಾಲ: ಕೊರಗಜ್ಜನ ಕುರಿತಾದ ಬಹು ಬಾಷಾ ಚಿತ್ರ “ಕರಿ ಹೈದ ಕರಿಯಜ್ಜ” ದ ಯಶಸ್ಸಿಗೆ ಕಲ್ಲಾಪು ಬುರ್ದುಗೋಳಿಯ ಕೊರಗಜ್ಜ-ಗುಳಿಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿದ ನಟಿಯರಾದ ಭವ್ಯ ,ಶೃತಿ ಮತ್ತು ಚಿತ್ರ ತಂಡವು ಗುಳಿಗನಿಗೆ ಹರಕೆಯ ಹುಂಜವನ್ನ ಸಮರ್ಪಿಸಿದ್ದಾರೆ. ತ್ರಿವಿಕ್ರಮ ಸಪಲ್ಯ ಅವರು 5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ” ಕರಿ ಹೈದ ಕರಿಯಜ್ಜ” ಚಿತ್ರದ ಚಿತ್ರೀಕರಣದ ಆರಂಭದಲ್ಲೇ ನಿರ್ದೇಶಕರಾದ ಸುಧೀರ್ ರಾಜ್ ಉರ್ವ

ಕೆ.ಎಸ್‌ ಹೆಗ್ಡೆ ಆಸ್ಪತ್ರೆ ವೈದ್ಯ ಡಾ.ಜಯರಾಮ ಶೆಟ್ಟಿ ಹೃದಯಾಘಾತದಿಂದ ನಿಧನ

ಉಳ್ಳಾಲ: ದೇರಳಕಟ್ಟೆ ಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ರೇಡಿಯೇಷನ್‌ ಆಂಕಾಲಜಿ ಕ್ಯಾನ್ಸರ್ ವಿಭಾಗದ ತಜ್ಞ ವೈದ್ಯರಾದ ಗುರುಪುರ ಪರಾರಿ ದೋಟ ಕೊಳಕೆಬೈಲು ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿರುವ ಡಾ. ಜಯರಾಮ ಶೆಟ್ಟಿ(53) ಹೈದಯಾಘಾತದಿಂದ ಜ.,11ರಂದು ಬುಧವಾರ ನಿಧನ ಹೊಂದಿದರು. ಮಂಗಳೂರಿನ ಕೆ.ಎಂಸಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಉನ್ನತ ಶಿಕ್ಷಣ ಪಡೆದ ಬಳಿಕ ಸುಮಾರು ಒಂದು ದಶಕಗಳಿಗಿಂತ ಹೆಚ್ಚು ಕಾಲ

ನಿವೃತ್ತ ಮುಖ್ಯೋಪಾಧ್ಯಾಯ ಜಗನ್ನಾಥ .ಕೆ ನಿಧನ

ಮಂಗಳೂರು : ಉಳ್ಳಾಲ ತಾಲೂಕಿನ ಸೋಮೇಶ್ವರ ಆನಂದಾಶ್ರಮ ಪ್ರೌಢ ಶಾಲೆಯ ನಿವತ್ತ ಮುಖ್ಯೋಪಾಧ್ಯಾಯ ಜಗನ್ನಾಥ .ಕೆ (77)ಅವರು ಹೃದಯಾಘಾತದಿಂದ ಮಂಗಳವಾರ ನಿಧನರಾದರು . ಅವರು ಉಳ್ಳಾಲ ಕಾಪಿಕಾಡ್ ನಿವಾಸಿಯಾಗಿದ್ದರು . ತನ್ನ ನಿವೃತ್ತಿಯ ಬಳಿಕ ಅವರು ಆನಂದಾಶ್ರಮ ಶಾಲೆಯ ಮಾತೃಸಂಸ್ಥೆಯಾಗಿರುವ ಸಾರಸ್ವತ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟ ಉತ್ತರ ಕನ್ನಡದ ಶಿರಾಲಿಯ ಶ್ರೀವಳ್ಳಿ ಪ್ರೌಢಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರಾಗಿ 2004 ರಿಂದ 2007 ರ ತನಕ ಕಾರ್ಯ ನಿರ್ವಹಿಸಿದ್ದರು.

ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ, ಚಾಲಕನಿಗೆ ಗಾಯ

ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕದಲ್ಲಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿ ಹೊಡೆದಿರುವ ಘಟನೆ ರಾ.ಹೆ66 ರ ಕೋಟೆಕಾರು ಬೀರಿ ಸಮೀಪ ನಿನ್ನೆ ತಡರಾತ್ರಿ ವೇಳೆ ನಡೆದಿದೆ. ಸ್ಥಳೀಯ ಯುವಕರ ತಂಡ ತಕ್ಷಣ ಕಾರು ಚಾಲಕನನ್ನು ಹೊರಗೆಳೆದು ರಕ್ಷಿಸಿ ಮಾನವೀಯತೆ ಮೆರೆದಿರುವ ವೀಡಿಯೋ ವೈರಲ್ ಆಗಿದೆ. ಹಳೆಯಂಗಡಿ ನಿವಾಸಿ ನೌಫಾಲ್ ಗಾಯಗೊಂಡವರು. ತಲಪಾಡಿ ಕಡೆಯಿಂದ ಹಳೆಯಂಗಡಿಯತ್ತ ತೆರಳುವ ವೇಳೆ ಕಾರು ನಿಯಂತ್ರಣ ಕಳೆದು ರಾ.ಹೆ. ಬಳಿಯ ವಿಭಜಕ

ಬೈಕ್ ನಲ್ಲಿ ಗಾಂಜಾ ಸಾಗಾಟ : ಓರ್ವ ಬಂಧನ, ಇನ್ನೋರ್ವ ಪರಾರಿ

ಉಳ್ಳಾಲ: ಬೈಕಿನಲ್ಲಿ ಗೋಣಿಚೀಲದಲ್ಲಿ ರೂ.40,000 ಮೌಲ್ಯದ ಗಾಂಜಾ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ತಲಪಾಡಿ ತಚ್ಚಣಿ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮಂಜೇಶ್ವರ ಸುಂಕದಕಟ್ಟೆಯ ಮೊಹಮ್ಮದ್ ರಾಝಿಕ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಅಸ್ಗರ್ ತಲೆಮರೆಸಿಕೊಂಡಿದ್ದಾನೆ. ಇಬ್ಬರು ತಲಪಾಡಿ ಗ್ರಾಮದ ತಚ್ಚಣಿ ಎಂಬಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದರು.

ಕುತ್ತಾರು , ಬೈಕ್ ಅಪಘಾತ : ಮಿದುಳು ನಿಷ್ಕ್ರಿಯ, ಕುಟುಂಬಸ್ಥರಿಂದ ಅಂಗಾಂಗ ದಾನ

ಉಳ್ಳಾಲ: ಕುತ್ತಾರು ದೇವಸ್ಥಾನ ಬಳಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತೊಕ್ಕೊಟ್ಟು ಸೇವಂತಿಗುತ್ತು ನಿವಾಸಿ ಭೂಷಣ್ ರೈ ಮಿದುಳು ನಿಷ್ಕ್ರಿಯಗೊಂಡಿದ್ದು, ಮನೆಮಂದಿ ಅಂಗಾಂಗ ದಾನ ನಡೆಸಲು ಮುಂದಾಗಿದ್ದಾರೆ. ಅಪಘಾತ ನಂತರ ಅವರನ್ನು ದೇರಳಕಟ್ಟೆ ಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಗಾಯಾಳು ಮಿದುಳು