Home ಕರಾವಳಿ Archive by category ಉಳ್ಳಾಳ (Page 23)

ಫೆ.20ರಿಂದ 25ರ ವರೆಗೆ ಉಳ್ಳಾಲ್ ಪ್ರೀಮಿಯರ್ ಲೀಗ್ -2023

ಉಳ್ಳಾಲ: ಉಳ್ಳಾಲ್ ಕ್ರಿಕೆಟ್ ಬೋರ್ಡ್ ವತಿಯಿಂದ ಎಂಟನೇ ಅವಧಿಯ ಟೆನಿಸ್ ಬಾಲ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉಳ್ಳಾಲ್ ಪ್ರೀಮಿಯರ್ ಲೀಗ್ ಫೆ.20 ರಿಂದ ಫೆ.25 ರವರೆಗೆ ಐದು ದಿನಗಳ ಕಾಲ ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಉಳ್ಳಾಲದ ಸೀಗ್ರೌಂಡ್ ನಲ್ಲಿ ನಡೆಯಲಿದೆ ಎಂದು ಉಳ್ಳಾಲ್ ಕ್ರಿಕೆಟ್ ಬೋರ್ಡ್ ಇದರ ಅಧ್ಯಕ್ಷ ಯು.ಬಿ ಸಲೀಂ ಹೇಳಿದರು. ಅವರು

ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದ ಸ್ನೇಹಿತೆಯರ ಅಂಗಡಿ ಆಕಸ್ಮಿಕವಾಗಿ ಬೆಂಕಿಗಾಹುತಿ 

ಉಳ್ಳಾಲ: ಅಗ್ನಿ ಆಕಸ್ಮಿಕ ನಡೆದ ಪರಿಣಾಮ ಫಾಸ್ಟ್ ಫುಡ್ ಅಂಗಡಿಯೊಂದು ಸುಟ್ಟು ಕರಕಲಾದ ಘಟನೆ ಕುಂಪಲ ಬಾಲಕೃಷ್ಣ ಮಂದಿರದ ಬಳಿ ನಡೆದಿದೆ. ಶಾರ್ಟ್ ಸರ್ಕ್ಯುಟ್ ನಿಂದ ಅಂಗಡಿಗೆ ಬೆಂಕಿ ತಗುಲಿರುವುದಾಗಿ ಶಂಕಿಸಲಾಗಿದೆ. ಕುಂಪಲ ಆಶ್ರಯ ಕಾಲನಿಯ ನಿವಾಸಿಗಳು ಸ್ನೇಹಿತೆಯರಾದ ಮೋಹಿನಿ ಮತ್ತು ದೀಕ್ಷಿತ ಜತೆಯಾಗಿ ಸಾಲ ಮಾಡಿ ಸಂಜೆ ಹೊತ್ತಲ್ಲಿ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದರು.ಫಾಸ್ಟ್ ಫುಡ್ ವ್ಯಾಪಾರದಲ್ಲೇ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ಸ್ನೇಹಿತೆಯರೀಗ

ಮಂಜನಾಡಿ : ಸ್ಕೂಟರ್ ಮತ್ತು ಕಾರು ನಡುವೆ ಅಪಘಾತ, ಸ್ಕೂಟರ್ ಸವಾರ ಮೃತ್ಯು

ಉಳ್ಳಾಲ: ಬೈಕ್ ಗೆ ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾg,À ಹೊಟೇಲ್ ಉದ್ಯೋಗಿ ಹಾಗೂ ಝೊಮ್ಯಾಟೋ ಡೆಲಿವರಿ ಬಾಯ್ ಸಾವನ್ನಪ್ಪಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮಂಜನಾಡಿ ಕಲ್ಕಟ್ಟ ಎಂಬಲ್ಲಿ ಸಂಭವಿಸಿದೆ. ಮೂಲತ: ಕ್ಯಾಲಿಕಟ್ ನಿವಾಸಿ, ಕುತ್ತಾರು ಸಂತೋಷನಗರದ ಬಾಡಿಗೆ ಮನೆಯಲ್ಲಿ ಇದ್ದ ಅನಿಲ್ ಕುಮಾರ್ (41) ಮೃತರು. ಝೊಮ್ಯಾಟೋ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಹಾಗೂ ಸಂಜೆ ನಂತರ ದೇರಳಕಟ್ಟೆಯ ಜ್ಯೂಸ್ ಮ್ಯಾಜಿಕ್ ಹೊಟೇಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ವೀರ ರಾಣಿ ಅಬ್ಬಕ್ಕ ಉತ್ಸವಕ್ಕೆ ಸರ್ಕಾರದಿಂದ ಅನುದಾನ ಕಡಿತ : ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ : ಮಮತಾ ಗಟ್ಟಿ

ಪ್ರತೀ ವರ್ಷ 50 ಲಕ್ಷ ರೂ. ಅನುದಾನ ಮೀಸಲಿಟ್ಟು ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಉತ್ಸವ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು ಕರಾವಳಿಯವರೇ ಆಗಿದ್ದರೂ ಕೇವಲ 10 ಲಕ್ಷ ರೂ. ಮಾತ್ರ ಮೀಸಲಿಟ್ಟಿದ್ದಾರೆ. ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಆರೋಪಿಸಿದ್ದಾರೆ. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರಾಣಿ ಅಬ್ಬಕ್ಕ ದೇಶಕ್ಕಾಗಿ ಹೋರಾಡಿದ

ತಲಪಾಡಿ ಟೋಲ್ ಸಿಬ್ಬಂದಿ ದೌರ್ಜನ್ಯ ವಿರುದ್ಧ ಧರಣಿ ಸತ್ಯಾಗ್ರಹ

ಉಳ್ಳಾಲ ( ಫೆ 6 ) : ಕರ್ನಾಟಕ – ಕೇರಳ ಗಡಿ ಪ್ರದೇಶವಾದ ತಲಪಾಡಿಯಲ್ಲಿ ನವಯುಗ ಟೋಲ್ ಪ್ಲಾಝಾ ಸಿಬ್ಬಂದಿಗಳ ಗೂಂಡಾಗಿರಿ ಮತ್ತು ದೌರ್ಜನ್ಯ ವಿರೋಧಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಕೆಸಿರೋಡ್ ಇದರ ಆಶ್ರಯದಲ್ಲಿ ಟೋಲ್ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತು. ಧರಣಿಯ ನೇತೃತ್ವವನ್ನು ಮಾಜಿ ತಾ.ಪಂ.ಸದಸ್ಯ ಸಿದ್ದೀಕ್ ಕೊಳಂಗರೆ ತಲಪಾಡಿ ವಹಿಸಿದ್ದರು. ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ನಾಗರಿಕ ಹಿತರಕ್ಷಣಾ ವೇದಿಕೆಯ ಸಂಚಾಲಕ ಅಶ್ರಫ್ ಕೆಸಿ ರೋಡ್ ಕೆಲ

ಉಳ್ಳಾಲ : ಅವೈಜ್ಞಾನಿಕ ಸರ್ವೀಸ್ ರಸ್ತೆಯಿಂದ ತೊಂದರೆ, ಡಾಮಾರು ಹಾಕಲು ಬಂದ ವಾಹನವನ್ನು ತಡೆಗಟ್ಟಿ ಗ್ರಾಮಸ್ಥರಿಂದ ಆಕ್ರೋಶ

ಉಳ್ಳಾಲ: ಅವೈಜ್ಞಾನಿಕವಾದ ಸರ್ವಿಸ್ ರಸ್ತೆಯಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ತಲಪಾಡಿ ಗ್ರಾಮದ ಕೆ.ಸಿ ರೋಡ್ ಹರಿಜನ ಕಾಲನಿ ನಿವಾಸಿಗಳು ರಸ್ತೆಯಲ್ಲೇ ಕುಳಿತು ಡಾಮಾರು ಹಾಕಲು ಬಂದ ವಾಹನವನ್ನು ತಡೆಗಟ್ಟಿ ಹಿಂದಕ್ಕೆ ಕಳುಹಿಸಿ ಪ್ರತಿಭಟಿಸಿರುವ ಘಟನೆ ನಡೆದಿದೆ. ರಾ.ಹೆ 66 ರ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಸಂಸ್ಥೆ ಇತ್ತೀಚೆಗೆ ತಲಪಾಡಿಯ ಕೆ.ಸಿ ರೋಡ್ ಹರಿಜನ ಕಾಲನಿ ಸಂಪರ್ಕಿಸುವ ರಸ್ತೆಯ ಎದುರುಭಾಗದಲ್ಲಿ ಸರ್ವಿಸ್ ರಸ್ತೆಯನ್ನು

ಉಳ್ಳಾಲ ಅಬ್ಬಕ್ಕ ಥೀಮ್ ಪಾರ್ಕ್ ಗೆ ಪ್ರಯತ್ನ:  ಸಚಿವೆ ಶೋಭಾ ಕರಂದ್ಲಾಜೆ

ಉಳ್ಳಾಲದ ವೀರರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮನಂತಹ ಸ್ವಾತಂತ್ರ ಹೋರಾಟಗಾರರು ನಮ್ಮ ರಾಜ್ಯದ ಮಹಿಳೆಯರಿಗೆ ಪ್ರೇರಣ ಶಕ್ತಿಯಾಗಿದ್ದು, ಉಳ್ಳಾಲದಲ್ಲಿ ಅಬ್ಬಕ್ಕಳ ಶೌರ್ಯವನ್ನು ದೇಶ ವಿದೇಶಗಳಿಗೆ ತಿಳಿಸುವ ನಿಟ್ಟಿನಲ್ಲಿ ಥೀಮ್ ಪಾರ್ಕ್ ಆಗಬೇಕು, ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರು ಇಡಲು ಪ್ರಧಾನಿಗೆ ಮತ್ತು ಸಂಬಂಧಿತ ಇಲಾಖೆಯ ಸಚಿವರಿಗೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಳ್ಳಾಲ

ತೊಕ್ಕೊಟ್ಟು: ಮೀನು ಸಾಗಾಟದ ಟೆಂಪೋ ಅಪಘಾತ- ಚಾಲಕನಿಗೆ ಗಾಯ

ತೊಕ್ಕೊಟ್ಟು ಕಲ್ಲಾಪು ಎಂಬಲ್ಲಿ ಮೀನು ಸಾಗಾಟ ನಡೆಸುತ್ತಿದ್ದ ಟೆಂಪೋ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಲಾರಿ ಚಾಲಕ ಸಾದಿಕ್ ಸ್ವಲ್ಪ ಗಾಯದಿಂದ ಪಾರಾಗಿದ್ದಾರೆ. ಮಂಗಳೂರು ಧಕ್ಕೆಯಿಂದ ಉಳ್ಳಾಲ ಫಿಷ್ ಮಿಲ್‌ಗೆ ಮೀನು ಸಾಗಾಟ ನಡೆಸುತ್ತಿದ್ದ ಟೆಂಪೋ, ಚಾಲಕನ ನಿಯಂತ್ರಣ ತಪ್ಪಿ ವಾಲಿದ್ದು, ಈ ವೇಳೆ ಟಯರ್ ಸಿಡಿದು ರಸ್ತೆಗೆ ಉರುಳಿದೆ. ಘಟನೆಯಿಂದ ರಸ್ತೆ ಸಂಚಾರದಲ್ಲಿ ಅಡಚಣೆಯುಂಟಾಗಿದೆ. ಮಂಗಳೂರು ದಕ್ಷಿಣ ಸಂಚಾರಿ

30 ಸೆಕೆಂಡ್‍ಗಳಲ್ಲಿ ಫುಟ್ಬಾಲ್‍ನೊಂದಿಗೆ 10 ನಟ್ ಮೆಗ್ ಮಾಡಿ ಗಿನ್ನೆಸ್ ದಾಖಲೆ ಬರೆದ ಮುಹಮ್ಮದ್ ಶಲೀಲ್

ಉಳ್ಳಾಲ: ಕೇವಲ ಮೂವತ್ತು ಸೆಕೆಂಡುಗಳಲ್ಲಿ ಫುಟ್ಬಾಲ್ ನೊಂದಿಗೆ 10 ನಟ್ ಮೆಗ್‍ಗಳನ್ನು ಮಾಡಿ ಸಾಧನೆ ಮಾಡುವ ಮೂಲಕ ಬೆಳ್ಮ ದೇರಳಕಟ್ಟೆ ನಿವಾಸಿ ಮೊಹಮ್ಮದ್ ಶಲೀಲ್ ಅನ್ನುವ ಯುವಕ ವಿಶ್ವದಲ್ಲಿ ಇಬ್ಬರ ದಾಖಲೆ ಮುರಿದು ಗಿನ್ನೆಸ್ ದಾಖಲೆ ಬರೆದಿದ್ದಾರೆ. 2017ರಲ್ಲಿ ಇಂಗ್ಲೆಂಡ್ ನ ಡೆಲೆ ಅಲ್ಲಿ ಅನ್ನುವ ವ್ಯಕ್ತಿ 30 ಸೆಕೆಂಡುಗಳಲ್ಲಿ 7 ನಟ್ ಮೆಗ್‍ಗಳನ್ನು ಸಾಧಿಸುವ ಮೂಲಕ ಮೊದಲ ಗಿನ್ನೆಸ್ ದಾಖಲೆ ಸಾಧಿಸಿದ್ದರು.2021 ರ ಫೆಬ್ರವರಿಯಲ್ಲಿ ಮಹಿಳಾ

ಕೊಲ್ಯ : ಯುವತಿ ಸಂಶಯಾಸ್ಪದ ರೀತಿಯಲ್ಲಿ ಸಾವು

ಉಳ್ಳಾಲ: ಯುವತಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿ ಬಾಡಿಗೆ ಮನೆಯಲ್ಲಿ ನಡೆದಿದ್ದು, ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದರೂ ಬಾಯಿಗೆ ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಿರುವುದು ಕೊಲೆ ಸಂಶಯ ವ್ಯಕ್ತಪಡಿಸಿದೆ. ಛತ್ತೀಸಗಢ ಮೂಲದ ಸರಿತಾ ವರ್ಮ(23) ನಿಗೂಢ ರೀತಿಯಲ್ಲಿ ಸಾವನ್ನಪ್ಪಿದಾಕೆ. ಇಬ್ಬರು ಸಹೋದರರು ಹಾಗೂ ಅತ್ತಿಗೆ ಜೊತೆ ಸರಿತಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಜ.30 ರಂದು