Home Archive by category ಕರಾವಳಿ (Page 45)

ಉಡುಪಿ: ಜಿಲ್ಲೆಯಲ್ಲಿ ಮತ್ತೆ ಆಕ್ಟಿವ್ ಆದ ನಕ್ಸಲ್ ಚಟುವಟಿಕೆ..!!

ಉಡುಪಿಯ ಬೈಂದೂರು ತಾಲೂಕಿನ ಕೊಲ್ಲೂರು ವ್ಯಾಪ್ತಿಯ ಹಲವೆಡೆ ನಕ್ಸಲೀಯರು ಓಡಾಟ ನಡೆಸಿದ ಶಂಕೆ ವ್ಯಕ್ತವಾಗಿದೆ. ಬೈಂದೂರು ತಾಲೂಕಿನ ಮುದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ಓಡಾಟ ನಡೆಸಿದ್ದು, ಹಲವು ಮನೆಗಳಿಗೆ ಭೇಟಿ ನೀಡಿ ನಾಲ್ವರ ತಂಡ ತೆರಳುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಹಸಿರು ಬಣ್ಣದ ಡ್ರೆಸ್ ಕೋಡ್, ಇಬ್ಬರಲ್ಲಿ ಶಸ್ತ್ರಾಸ್ತ್ರ ಇರುವ ಬಗ್ಗೆ

ಬಂಟ್ವಾಳ: ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ದವಸಧಾನ್ಯ ವಿತರಣಾ ಕಾರ್ಯಕ್ರಮ

ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ದವಸಧಾನ್ಯ ವಿತರಣ ಕಾರ್ಯಕ್ರಮ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಆಶ್ರಯದಲ್ಲಿ ಬ್ಯಾಂಕ್ ಆಫ್ ಬರೋಡದ ಸಹಕಾರದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಪಿ. ಮಾತನಾಡಿ ಕೆ. ಎಸ್.ಹೆಗ್ಡೆ ಆಸ್ಪತ್ರೆಯವರೊಂದಿಗೆ ಕೈ ಜೋಡಿಸಿಕೊಂಡು ಕೃಷ್ಣಕುಮಾರ್ ಪೂಂಜ ಅವರು ಕಳೆದ 40

ಮೂಡುಬಿದಿರೆ : ಪುರಸಭಾ ವ್ಯಾಪ್ತಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥ

ಮೂಡುಬಿದಿರೆ: ಸಂವಿಧಾನ ಪೀಠಿಕೆ, ಜವಾಬ್ದಾರಿ ಮತ್ತು ಅದರ ಮಹತ್ವ ಸಾರುವ ಅಂಬೇಡ್ಕರ್ ಪ್ರತಿಮೆಯ ಸ್ತಬ್ಧ ಚಿತ್ರವನ್ನೊಳಗೊಂಡ ಸಂವಿಧಾನ ಜಾಗೃತಿ ಜಾಥಾ ರಥವು ಮೂಡುಬಿದಿರೆ ಪುರಸಭಾ ವ್ಯಾಪ್ತಿಗೆ ಆಗಮಿಸಿದ್ದು ತಾಲೂಕು ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಮತ್ತು ಪುರಸಭಾ ಮುಖ್ಯಾಧಿಕಾರಿ ಇಂದು ಎಂ.ಅವರು ತಾಲೂಕು ಆಡಳಿತ ಸೌಧದ ಮುಂಭಾಗ ಬರಮಾಡಿಕೊಂಡರು. ನಂತರ ತಹಶೀಲ್ದಾರ್ ಅವರು ಅಂಬೇಡ್ಕರ್ ಅವರ ಸ್ತಬ್ಧ ಚಿತ್ರಕ್ಕೆ ಹಾರಾರ್ಪಣೆಗೈದರು.ಪುರಸಭಾ ಸದಸ್ಯರಾದ

ತರಲೆ ತರಳೆ ಪೂನಮಳ ಅರ್ಬುದ ಲೋಕ

ಫೆಬ್ರವರಿ 4 ಅಂತರರಾಷ್ಟ್ರೀಯ ಕ್ಯಾನ್ಸರ್ ದಿನ. ಕ್ಯಾನ್ಸರ್ ಬರಲಿ ಎನ್ನುವ ದಿನ ಅಲ್ಲ, ಕ್ಯಾನ್ಸರ್ ತಡೆಯೋಣ ಎನ್ನುವ ದಿನ ಅದಕ್ಕೆ ಎರಡು ದಿನ ಮೊದಲು ತರಲೆ ತರಳೆ ಪೂಪಾಂಡೆಯ ಸಾವು ಸುದ್ದಿ, ಮರುದಿನವೇ ಸಾವು ಗೆದ್ದ ಪೂನಂ ಪಾಂಡೆ ಸುದ್ದಿ. ಪೆÇೀಲೀಸರು ಆತ್ಮಹತ್ಯೆ ಪ್ರಯತ್ನ ಮೊಕದ್ದಮೆ ಹೂಡಬಹುದು. ಆದರೆ ಕ್ಯಾನ್ಸರ್ ಪ್ರಜ್ಞೆ ಬಲಿಸಲು ಪ್ರಜ್ಞಾಪೂರ್ವಕವಾಗಿ ಸಾವು ಸುದ್ದಿ ಹರಡಿದ್ದಾಗಿ ಪೂನಂ ಉವಾಚ. ಕ್ಯಾನ್ಸರ್ ದಿನದ ಹೊತ್ತಿನಲ್ಲಿ ತರಲೆ ತರಳೆಯನ್ನು ಕ್ಷಮಿಸಿ

ಫೆ.4ರಂದು ಬೊಂದೆಲ್ ಚರ್ಚ್ ಶಾಲಾ ವಠಾರದಲ್ಲಿ 16 ನೇ ಸ್ಟ್ಯಾನ್ ನೈಟ್

ಬೋಂದೆಲ್ ದೇವಾಲಯದ ನವೀಕೃತ ಯೋಜನೆಗೆ ಸಹಾಯಾರ್ಥವಾಗಿ ಆಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಮಂಗಳೂರು ಮತ್ತು ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ ಪ್ರಸ್ತುತಪಡಿಸಿದ 16 ನೇ ಸ್ಟ್ಯಾನ್ ನೈಟ್ ಕಾರ್ಯಕ್ರಮವನ್ನು ಫೆಬ್ರವರಿ 4ರಂದು ಆದಿತ್ಯವಾರ ಬೊಂದೆಲ್ ಶಾಲಾ ವಠಾರದಲ್ಲಿ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಗಣ್ಯ ವ್ಯಕ್ತಿ: ವ| ಫಾ ಆಂಡ್ರ್ಯೂ ಲಿಯೋ ಡಿಸೋಜ, “ಶ್ರೀ ರಾಯ್ ಕಾಸ್ಟೆಲಿನೊ” ಶ್ರೀ ಲುವಿ ಪಿಂಟೊ,ಶ್ರೀ ಜೋಸೆಫ್ ಮಾಥಾಯಸ್, ಶ್ರೀ

ದಾನಿ ಅಶೋಕ್ ಶೆಟ್ಟಿ ಬೆಳ್ಳಾಡಿಯವರಿಂದ ‘ಶ್ರೀದೇವಿ ನಿಲಯ’ ಕೀಲಿ ಕೈ ಹಸ್ತಾಂತರ

ಹನುಮಗಿರಿಮೇಳ ದ ಕಲಾವಿದ  ರೂಪೇಶ್ ಆಚಾರ್ಯ ಇವರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ ವಿಟ್ಲ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರೀ ದೇವಸ್ಥಾನದ ಹತ್ತಿರದಲ್ಲಿ ನಿರ್ಮಾಣಗೊಂ ಡಿರುವ  “ಶ್ರೀದೇವಿನಿಲಯ”ನೂತನ ಮನೆಯ  ಕೀಲಿಕೈ ಹಸ್ತಾಂತರವು ಕಾರ್ಯಕ್ರಮ ನಡೆಯಿತು. ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರು ಹಾಗೂ ನೂತನ ಮನೆಯ ನಿರ್ಮಾಣಕ್ಕೆ ಕಾರಣೀಕರ್ತರಾದ ದಾನಿ ಅಶೋಕ್ ಶೆಟ್ಟಿ ಬೆಳ್ಳಾಡಿಯವರು ಭಾಗವಹಿಸಿ ಶುಭಹಾರೈಸಿದರು. ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್

ಸಂವಿಧಾನ ಜಾಗೃತಿ ಜಾಥಾ ರಥವನ್ನು ಬರಮಾಡಿಕೊಂಡ ಪುತ್ತಿಗೆ ಪಂಚಾಯತ್

ಮೂಡುಬಿದಿರೆ: ಸಂವಿಧಾನ ಪೀಠಿಕೆ, ಜವಾಬ್ದಾರಿ ಮತ್ತು ಅದರ ಮಹತ್ವ ಸಾರುವ ಅಂಬೇಡ್ಕರ್ ಪ್ರತಿಮೆಯ ಸ್ತಬ್ಧ ಚಿತ್ರವನ್ನೊಳಗೊಂಡ  ಸಂವಿಧಾನ ಜಾಗೃತಿ ಜಾಥಾ ರಥವು   ಮೂಡುಬಿದಿರೆಯಲ್ಲಿ ಸಂಚಾರ ಆರಂಭಿಸಿದ್ದು ಮಧ್ಯಾಹ್ನದ ವೇಳೆಗೆ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಆಗಮಿಸಿದ್ದು ಇದನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ  ರಾಧ, ಸರ್ವ ಸದಸ್ಯರು ಮತ್ತು ಪಿಡಿಒ ಭೀಮ ನಾಯಕ್ ಅವರು ಪಂಚಾಯತ್ ಮುಂಭಾಗದಲ್ಲಿ ಬರಮಾಡಿಕೊಂಡರು.  ಅಧ್ಯಕ್ಷೆ ರಾಧಾ ಅವರು ಅಂಬೇಡ್ಕರ್ ಅವರ

ಕಾರ್ಕಳ ಪರಪ್ಪು ಸೇತುವೆ ಕೆಳಭಾಗದಲ್ಲಿ ತ್ಯಾಜ್ಯಗಳ ರಾಶಿ

ಕಾರ್ಕಳದ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹದ ವ್ಯವಸ್ಥೆಗಳು ಸಾಕಷ್ಟಿದ್ದರೂ, ಪರಪ್ಪು ಸೇತುವೆ ತಳಭಾಗದಲ್ಲಿ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದು ದುರಂತವೇ ಸರಿ. ಇಲ್ಲಿ ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾರ್ಕಳ ನಗರದಿಂದ ಕುಕ್ಕುಂದೂರು ಗ್ರಾಮದ ಮೂಲಕ ನಕ್ರೆ ಮಾರ್ಗವಾಗಿ ಉಡುಪಿ ಸಂಪರ್ಕಿಸುವ ಪರಪ್ಪು ಸೇತುವೆ ತಳಭಾಗ ತ್ಯಾಜ್ಯ ಹಾಗೂ ಮಣ್ಣು ರಾಶಿಯಿಂದ

     ನಾರಾಯಣಗುರು ವಿದ್ಯಾನಿಧಿ ಟ್ರಸ್ಟ್‌ನ ವಿದ್ಯಾರ್ಥಿ ವೇತನ ವಿತರಣೆ

ಉಡುಪಿ:ನಾರಾಯಣ ಗುರು ವಿದ್ಯಾನಿಧಿ ಟ್ರಸ್ಟ್‌ನ-2024ನೇ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಬನ್ನಂಜೆ ಬಿಲ್ಲವ ಸಂಘದ ಶಿವಗಿರಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 114 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ವೇತನವನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಕ ದೀಪಕ್ ಕೆ ಬೀರಾ, ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕದ ಜ್ಞಾನ ಇದೆ ಅದ್ರೆ..  ಸಾಮಾಜಿಕ ಜ್ಞಾನದ ಕೊರತೆ ಇದೆ. ಹೆತ್ತವರು ಮಕ್ಕಳಲ್ಲಿ ಸಮಾನ್ಯ

ಬಿ.ಸಿ. ರೋಡ್:  ಅಕ್ರಮ ಗೋಮಾಂಸ ವಶ: ಇಬ್ಬರು ಪೊಲೀಸರ ವಶಕ್ಕೆ

ಬಿ.ಸಿ.ರೋಡು: ಅಕ್ರಮ ಗೋಮಾಂಸವನ್ನು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಕಲ್ಲಡ್ಕದಲ್ಲಿ ಇಂದು ಮುಂಜಾನೆ ನಡೆದಿದೆ. ಬಜರಂಗದಳ ಕಲ್ಲಡ್ಕ ಪ್ರಖಂಡದ ಮಾಹಿತಿ ಮೇರೆಗೆ ಇಂದು ಮುಂಜಾನೆ ಕಲ್ಲಡ್ಕ ಮದಕ ಬಳಿ ಬಿಸಿ ರೋಡ್ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಅಂದಾಜು 2 ಕಿಂಟ್ಟಾಲ್ ಗೋ ಮಾಂಸ, ಒಂದು ಆಟೋ, ಆಲ್ಟೋ ಕಾರು ಹಾಗೂ ಬೈಕ್ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.