Home Archive by category ಕರಾವಳಿ (Page 62)

ನೆಲ್ಯಾಡಿ:ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

ನೆಲ್ಯಾಡಿ: ಬಯಲು ಆಲಯ ಎಂದೇ ಪ್ರಖ್ಯಾತಿ ಪಡೆದಿರುವ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತಕ್ಕೆ ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ರಾಹುಲ್ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ ಹಾಗೂ ಅರ್ಚಕರು ಉಪಸ್ಥಿತರಿದ್ದರು.

ಮೂಡುಬಿದಿರೆ : ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ, ಐವರು ನಾಟಿ ವೈದ್ಯರಿಗೆ ಸಮ್ಮಾನ

ಮೂಡುಬಿದಿರೆ : ಇಲ್ಲಿನ ಕೃಷಿ ವಿಚಾರ ವಿನಿಮಯ ಕೇಂದ್ರ ಹಾಗೂ ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿ ಇವುಗಳ ಆಶ್ರಯದಲ್ಲಿ ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ‘ಕ್ಯಾನ್ಸರ್ ಜಾಗೃತಿ’ ಕಾರ್ಯಾಗಾರ ನಡೆಯಿತು.ವಿದ್ಯಾಗಿರಿಯ ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ| ಸುರೇಖಾ ಪೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿಸಕಾಲದಲ್ಲಿ ಹಿತ ಮಿತ ಆಹಾರ ಸೇವನೆ, ಮುಂಜಾನೆ ಸಂಜೆ ವಿಹಾರ, ವ್ಯಾಯಾಮ, ಮಾನಸಿಕ

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ- ಆರು ಮಂದಿಗೆ ಗಾಯ

ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಟಿ.ಟಿ ವಾಹನ ರಸ್ತೆಗೆ ಪಲ್ಟಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡ ಘಟನೆ ವಿಟ್ಲದ ಚಂದಳಿಕೆ ಎಂಬಲ್ಲಿ ನಡೆದಿದೆ. ಶಬರಿಮಲೆಯಿಂದ ವಿಟ್ಲ ರಸ್ತೆ ಮೂಲಕ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಚಂದಳಿಕೆ ಅಪಾಯಕಾರಿ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಟಿ.ಟಿ ವಾಹನದಲ್ಲಿದ್ದ ಆರು ಮಂದಿ ಮಾಲಾಧಾರಿಗಳು ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಉಜಿರೆ ನಿವಾಸಿಗಳೆಂದು ತಿಳಿದುಬಂದಿದೆ. ಶಬರಿಮಲೆ

ಹಾಸನ: ಗ್ರಾಮ ಒನ್ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ

ಹಾಸನದ ಅಂಬೇಡ್ಕರ್ ಭವನದಲ್ಲಿ ಹಾಸನ ಜಿಲ್ಲೆಯ ಗ್ರಾಮ ಒನ್‌ನ್ನ ಎಲ್ಲಾ ಸಿಬ್ಬಂದಿಯವರೆಗೆ ಒಂದು ದಿನದ ತರಬೇತಿ ಕಾರ್ಯಗಾರ ವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಇ ಡಿ ಸಿ ಎಸ್ ನಿರ್ದೇಶನಾಲಯದ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಮದನ್ ಮೋಹನ್ ರವರು ಉದ್ಘಾಟನೆ ಮಾಡಿದರು. ತರಬೇತಿ ಕಾರ್ಯಗಾರದಲ್ಲಿ ಸರ್ಕಾರದಿಂದ ಗ್ರಾಮ ಒನ್ ಗಳಿಗೆ ಹೊಸದಾಗಿ ಸಿಗುತ್ತಿರುವ ಯೋಜನೆಗಳು ಮತ್ತು ನಾವು ಸಾರ್ವಜನಿಕರಿಗೆ ಯಾವ ಯಾವ ಯೋಜನೆಗಳನ್ನು ನೀಡಬೇಕು. ಸರ್ಕಾರದ

ಉಳ್ಳಾಲ: ಅವಿವಾಹಿತ ಆತ್ಮಹತ್ಯೆ

ಉಳ್ಳಾಲ: ಅವಿವಾಹಿತ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಮಾಡೂರು ಅಯ್ಯಪ್ಪ ಭಜನಾ ಮಂದಿರ ಸಮೀಪ ಬೆಳಕಿಗೆ ಬಂದಿದೆ.ಮಾಡೂರು ಅಯ್ಯಪ್ಪ ಭಜನಾ ಮಂದಿರ ಸಮೀಪ ನಿವಾಸಿ ನಾಗರಾಜ್ ಶೆಟ್ಟಿ (32) ಆತ್ಮಹತ್ಯೆ ನಡೆಸಿಕೊಂಡವರು. ಕೋಟೆಕಾರು ಬೀರಿಯಲ್ಲಿರುವ ಈಕಾಟ್೯ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ನಾಗರಾಜ್ ನಿನ್ನೆ ಕೆಲಸಕ್ಕೆ ತೆರಳಿ ರಾತ್ರಿ ಕೋಣೆಯಲ್ಲಿ ಮಲಗಿದವರು ಕೃತ್ಯ ಎಸಗಿದ್ದಾರೆ. ಇವರ ಸಹೋದರಿಯ ಪ್ರಸವ ಹಿನ್ನೆಲೆಯಲ್ಲಿ ತಾಯಿ ಆಕೆಯ ಮಂಗಳೂರಿನ

ಅನ್ನದ ಬಟ್ಟಲಿಗೆ ಅಡಕೆಯ ದಾಳಿ

ಕರ್ನಾಟಕ ರಾಜ್ಯದಲ್ಲಿ ಕಳೆದ ಐದು ವರುಷಗಳಲ್ಲಿ ಅಡಕೆ ಬೆಳೆಯುವ ಪ್ರದೇಶವು ಮೂರು ಪಾಲು ಹೆಚ್ಚಾಗಿದೆ. ಕ್ವಿಂಟಾಲ್ ಅಡಕೆಗೆ ಜಣ ಜಣ 50,000 ಎನ್ನುತ್ತಲೇ ಅಡಕೆ ಬೆಳೆಯುವ ಪ್ರದೇಶವು 5 ವರ್ಷಗಳಲ್ಲಿ 4.52 ಲಕ್ಷ ಹೆಕ್ಟೇರ್ ಹೆಚ್ಚಾಗಿ 7.32 ಲಕ್ಷ ಹೆಕ್ಟೇರಿಗೆ ವಿಸ್ತರಣೆಗೊಂಡಿದೆ. ಆಹಾರ ಬೆಳೆಯುವ ನೆಲೆಗಳೆಲ್ಲ ಅಡಕೆ ತೋಟಗಳಾಗಿ ಮೇಲೆದ್ದಿವೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಹೇಳಿದ್ದು ವರದಿಯಾಗಿದೆ. ಮುಂದೆ ಆಹಾರ ಸಮಸ್ಯೆ ಏಳಬಹುದು

ಲಬಕ್ ನಾರಿಶಕ್ತಿ ಚಬುಕು

ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಆಪಾದನೆ ಹೊರಿಸಿ, ಲೋಕ ಸಭೆಯಲ್ಲಿ ಮಾತನಾಡಲೂ ಬಿಡದೆ, ಬೇಟಿ ಹಟಾವೊ ರೀತಿಯಲ್ಲಿ ಮಹುವಾ ಮೊಯಿತ್ರಾರನ್ನು ಲೋಕ ಸಭೆಯಿಂದ ವಜಾ ಮಾಡಲಾಯಿತು. ಇಂತಾ ಕೆಲವು ಘಟನೆಗಳು ಸಂಸತ್ತಿನಲ್ಲಿ ಹಿಂದೆ ಸಹ ನಡೆದಿವೆ. ಆದರೆ ಅದಾನಿ ಸಂಪತ್ತು ಪ್ರಶ್ನಿಸಿದ ರಾಹುಲ್ ಗಾಂಧಿ ಮತ್ತು ಮಹುವಾ ಮೊಯಿತ್ರ ಇಬ್ಬರು ಕೂಡ, ಸಂಸತ್ ವಜಾ ಕಂಡುದು ಸರಕಾರ ಯಾರದು ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ. ಮಹುವಾರನ್ನು ರಾಜಕೀಯಕ್ಕೆ ಕರೆತಂದ ರಾಹುಲ್ ಗಾಂಧಿಯವರು

ಪುತ್ತೂರು: ಅಯೋಧ್ಯೆಯ ಸಮಗ್ರ ಕಥನ ಶ್ರೀರಾಮ ಕಥಾವೈಭವ

ಪುತ್ತೂರು: ರಾಮ ರಾಜ್ಯದ ನಿರ್ಮಾಣದ ಭಾಗವಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠೆಯಾಗುತ್ತಿದೆ. ರಾಮ ಹಾಗೂ ರಾಮ ರಾಜ್ಯದ ಪ್ರತಿಷ್ಠೆಯನ್ನು ಹಳ್ಳಿ ಹಳ್ಳಿಯಲ್ಲಿ ಸಂಭ್ರಮ ಪಡಬೇಕು. ಶ್ರೀ ರಾಮನ ಪ್ರತಿಷ್ಠೆಯಿಂದ ಮನುಷ್ಯ ಮಾತ್ರವಲ್ಲದೆ ಪ್ರತಿ ಜೀವ ಸಂಕುಲಗಳಿಗೂ ಆನಂದ ಉಂಟಾಗಲಿದೆ. ಇದರಿಂದ ಜಗತ್ತಿಗೇ ಒಳಿತಾಗಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.ಅವರು ಪುತ್ತೂರಿನ ತೆಂಕಿಲದಲ್ಲಿ ಶ್ರೀರಾಮ ಕಥಾವೈಭವ

ಉಡುಪಿ ಪರ್ಯಾಯ ಮಹೋತ್ಸವ: ಹೊರೆಕಾಣಿಕೆ ಮೆರವಣಿಗೆ

ಭಾರತೀಯ ಪರಂಪರೆ, ಮಾಧ್ವ ತತ್ವವನ್ನು ಜಗತ್ತಿಗೆ ಸಾರಿದ ಹಾಗೂ ಗೀತಾಸಾರವನ್ನು ವಿಶ್ವಕ್ಕೆ ಪಸರಿಸಲು ಕಾರಣವಾಗಿರುವ ಉಡುಪಿ ಅಷ್ಠಮಠಗಳ ಪೈಕಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಯವರ ಪರ್ಯಾಯ ಪೀಠಾರೋಹಣ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ವಿವಿಧೆಡೆಗಳಿಂದ ಆಗಮಿಸಿದ್ದ ಹೊರೆಕಾಣಿಕೆಯನ್ನು ಮೆರವಣಿಗೆಯ ಮೂಲಕ ಮಠಕ್ಕೆ ಅಗಮಿಸಿತ್ತು. ಈ ಸಂದರ್ಭ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಕಾಸರಗೋಡು: ಕರಂದಕ್ಕಾಡ್ ಶ್ರೀ ವೀರಹನುಮಾನ್ ಮಂದಿರದ ವಾರ್ಷಿಕ ಮಹಾಸಭೆ

ಕಾಸರಗೋಡು ಕರಂದಕ್ಕಾಡ್ ಶ್ರೀ ವೀರಹನುಮಾನ್ ಮಂದಿರದ ವಾರ್ಷಿಕ ಮಹಾಸಭೆ ಅಧ್ಯಕ್ಷರಾದ ಶ್ರೀ ಅವಿನಾಶ್ ಅವರ ಅಧ್ಯಕ್ಷತೆಯಲ್ಲಿ ಮಂದಿರ ಪರಿಸರದಲ್ಲಿ ನಡೆಯಿತು. ವಿವಿಧ ಚರ್ಚೆಗಳ ನಂತರ ಹೊಸ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅವಿನಾಶ್ ಆಯ್ಕೆ ಯಾದರು, ಉಪಾಧ್ಯಕ್ಷ ಶ್ರೀ ರವಿ ಕರಂದಕ್ಕಾಡ್, ಕಾರ್ಯದರ್ಶಿ ಜಿತೇಶ್ ಕರಂದಕ್ಕಾಡ್, ಜತೆ ಕಾರ್ಯದರ್ಶಿ ಹರೀಶ್ ಪ್ರತೀಕ್, ಕೋಶಾಧಿಕಾರಿ ಜೀವನ್, ಮತ್ತು ಕಾರ್ಯಕಾರಿಣಿಸಮಿತಿ ಸದಸ್ಯರಾಗಿ ಮಾಧವ, ರಾಧಾಕೃಷ್ಣ, ಗಣೇಶ್,