ಹಾಸನ: ಗ್ರಾಮ ಒನ್ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ
ಹಾಸನದ ಅಂಬೇಡ್ಕರ್ ಭವನದಲ್ಲಿ ಹಾಸನ ಜಿಲ್ಲೆಯ ಗ್ರಾಮ ಒನ್‌ನ್ನ ಎಲ್ಲಾ ಸಿಬ್ಬಂದಿಯವರೆಗೆ ಒಂದು ದಿನದ ತರಬೇತಿ ಕಾರ್ಯಗಾರ ವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಇ ಡಿ ಸಿ ಎಸ್ ನಿರ್ದೇಶನಾಲಯದ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಮದನ್ ಮೋಹನ್ ರವರು ಉದ್ಘಾಟನೆ ಮಾಡಿದರು.
ತರಬೇತಿ ಕಾರ್ಯಗಾರದಲ್ಲಿ ಸರ್ಕಾರದಿಂದ ಗ್ರಾಮ ಒನ್ ಗಳಿಗೆ ಹೊಸದಾಗಿ ಸಿಗುತ್ತಿರುವ ಯೋಜನೆಗಳು ಮತ್ತು ನಾವು ಸಾರ್ವಜನಿಕರಿಗೆ ಯಾವ ಯಾವ ಯೋಜನೆಗಳನ್ನು ನೀಡಬೇಕು. ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಕುರಿತಾದ ಮಾಹಿತಿಯನ್ನು ನೀಡಲಾಯಿತು.