Home Archive by category ವಿಶ್ವ (Page 4)

ಜಗತ್ತಿನ ಬಹು ಜನರು ಪ್ರೀತಿಸುವ ಹಣ್ಣು ಪಪ್ಪಾಯಿ

ಜಗತ್ತಿನ ಜನರು ಪ್ರೀತಿಸುವ ಹಣ್ಣುಗಳಲ್ಲಿ ಒಂದಾದ ಪಪ್ಪಾಯಿ ಪ್ರತಿ ವರುಷ ಆರು ಕೋಟಿ ಟನ್ ಉತ್ಪಾದನೆ ಆಗುತ್ತದೆ. ಪಪ್ಪಾಯಿಯ ಬೇಸಾಯ ಮತ್ತು ಮೂಲ ತೆಂಕಣ ಮೆಕ್ಸಿಕೋ ಮತ್ತು ಕೋಸ್ಟಾರಿಕಾ ಆಗಿದೆ. ಪಪ್ಪಾಯಿ ಹೆಸರು ಕೂಡ ಅಲ್ಲಿಯದೇ ಆಗಿದೆ. ಇದು ತನ್ನ ಮದ್ಗುಣ ಮತ್ತು ಉತ್ತಮ ಪೋಷಕಾಂಶಗಳಿಂದ ವಾಣಿಜ್ಯ ಮಹತ್ವದ ಹಣ್ಣು ಎನಿಸಿದೆ.ಪಪ್ಪಾಯಿ ಕಾರಿಕಾ ಉಷ್ಣ ವಲಯದ ಹಣ್ಣಾಗಿದೆ.

ಕನ್ಸರ್ವೇಟಿವ್ ಪಕ್ಷಕ್ಕೆ ಇತಿಹಾಸದಲ್ಲೇ ಕಡಿಮೆ ಸ್ಥಾನ ಬ್ರಿಟನ್ನಿನಲ್ಲಿ ಲೇಬರ್ ಪಕ್ಷ ಬಹುಮತದೊಡನೆ ಅಧಿಕಾರಕ್ಕೆ

ಬ್ರಿಟನ್ನಿನಲ್ಲಿ ಆಳುವ ಕನ್ಸರ್ವೇಟಿವ್ ಪಕ್ಷವು 14 ವರುಷಗಳ ಬಳಿಕ ಅಧಿಕಾರ ಕಳೆದುಕೊಂಡುದಲ್ಲದೆ ಇತಿಹಾಸದಲ್ಲೇ ಅತಿ ಕಡಿಮೆ ಸ್ಥಾನಗಳನ್ನು ಪಡೆಯಿತು. ಲೇಬರ್ ಪಕ್ಷದ 61ರ ಕೀರ್ ಸ್ಟಾರ್ಮರ್ ಹೊಸ ಪ್ರಧಾನಿ. ಅವರು ಗೆಲುವಿನ ಬಳಿಕ ಕಿಂಗ್ ಚಾರ್ಲ್ಸ್ 3 ಅವರನ್ನು ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡಿಸಿದರು. ಲೇಬರ್ ಪಕ್ಷವು 412, ಕನ್ಸರ್ವೇಟಿವ್ ಪಕ್ಷ 121, ಲಿಬರಲ್ ಡೆಮೊಕ್ರಟಿಕ್ ಪಕ್ಷ 71, ಇತರ ಸಣ್ಣ ಪಕ್ಷಗಳು 33 ಮತ್ತು ಪಕ್ಷೇತರರು 11 ಮಂದಿ 650 ಬಲದ

35ನೇ ಹಂತದ ಗೆಲುವು ಸಾಧಿಸಿ ದಾಖಲೆ ಬರೆದ ಕ್ಯಾವೆಂಡಿಶ್ ಬೆಲ್ಜಿಯಂನ ಲೆಜೆಂಡ್ ಎಡ್ಡಿ ಮೆರೆಕ್ಸ್ ದಾಖಲೆ ಪತನ

ಬ್ರಿಟನ್ನಿನ ಮಾರ್ಕ್ ಕ್ಯಾವೆಂಡಿಶ್ ಅವರು ಟೂರ್ ಡೆ ಫ್ರಾನ್ಸ್ ತುಳಿಬಂಡಿ ಸೈಕ್ಲಿಂಗ್‌ನಲ್ಲಿ 35ನೇ ಹಂತದ ಗೆಲುವು ಸಾಧಿಸಿ ದಾಖಲೆ ಬರೆದರು. 2021ರಲ್ಲಿ ಕ್ಯಾವೆಂಡಿಶ್ ಅವರು 34ನೇ ಹಂತ ಗೆಲುವು ಸಾಧಿಸಿ ಸೈಕ್ಲಿಂಗ್ ದಂತ ಕತೆ ಬೆಲ್ಜಿಯಂನ ಎಡ್ಡಿ ಮೆರೆಕ್ಸ್ ದಾಖಲೆ ಸರಿಗಟ್ಟಿದ್ದರು. ಈಗ ಮುರಿದು ದಾಖಲೆ ಬರೆದಿದ್ದಾರೆ. 5ನೇ ಹಂತದ ಸ್ಪ್ರಿಂಟ್ ಸೈಕ್ಲಿಂಗ್‌ನಲ್ಲಿ 69.4 ಕಿಲೋಮೀಟರ್ ವೇಗದಲ್ಲಿ ಬಂದ ಕ್ಯಾವೆಂಡಿಶ್ ಸೈಂಟ್ ವಲ್ಬಾಸ್‌ನಲ್ಲಿ ಕೈಯೆತ್ತಿ ತನ್ನ ದಾಖಲೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರು ಅಮೇರಿಕಕ್ಕೆ ಪ್ರಯಾಣ

ಮಂಗಳೂರು: “ಜುಲೈ ೯ರಂದು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಲಾವಿದರ ತಂಡ ಯಕ್ಷಗಾನ ಅಭಿಯಾನಕ್ಕಾಗಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದೆ. ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯುಎಸ್‌ಎ ಆಯೋಜನೆಯನ್ನು ಮಾಡುತ್ತಿದೆ. ಅಮೇರಿಕಾದ ೨೦ ರಾಜ್ಯಗಳ ಮುಖ್ಯ ನಗರಗಳಲ್ಲಿ ನಿಶ್ಚಯಿಸಿರುತ್ತಾರೆ” ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾಹಿತಿ ನೀಡಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಭಾರತದಲ್ಲಿ ಶಿಕ್ಷಣ ಕಡೆಗಣಿಸಿ ಮದುವೆಗೆ ವೆಚ್ಚ

ಭಾರತದಲ್ಲಿ ಓದು ಕಡೆಗಣಿಸಿ ಮದುವೆಗೆ ಹೆಚ್ಚು ವೆಚ್ಚ ಮಾಡಲಾಗುತ್ತಿದೆ ಎಂದು ಜಾಗತಿಕ ಬ್ರೋಕರೇಜ್ ಸಂಸ್ಥೆ ಜೆಫರಿಸ್ ವರದಿ ಮಾಡಿದೆ. ಭಾರತದಲ್ಲಿ ಚೀನಾ ಮತ್ತು ಇತರ ದೇಶಗಳಿಗಿಂತ ಹೆಚ್ಚು ವರುಷದಲ್ಲಿ ೮೦ ಲಕ್ಷದಿಂದ ಒಂದು ಕೋಟಿಯವರೆಗೆ ಮದುವೆಗಳು ನಡೆಯುತ್ತವೆ. ಭಾರತದ ಮದುವೆಯೊಂದಕ್ಕೆ ಸರಾಸರಿ ೧೨.೫೦ ಲಕ್ಷ ರೂಪಾಯಿ ಖರ್ಚಾಗುತ್ತದೆ. ಭಾರತದ ಮದುವೆ ಮಾರುಕಟ್ಟೆ ಮೌಲ್ಯವು ೧೦ ಲಕ್ಷ ಕೋಟಿ ರೂಪಾಯಿ ಇದೆ. ಭಾರತದ ಆಹಾರ ಮತ್ತು ತರಕಾರಿ ಮಾರುಕಟ್ಟೆ ಮೌಲ್ಯ ೫೬.೭೬ ಲಕ್ಷ

ಅಡುಗೆಮನೆಯ ನೆಂಟ ಈ ಕವಳೆಕಾಯಿ

ಕರಂಡೆಯು ಹುಳಿ ಕಾಡು ಕಾಯಿಯಾಗಿದ್ದು, ಹಣ್ಣಾದಾಗ ನೀಲಿ ದ್ರಾಕ್ಷಿಯ ರುಚಿ ಹೊಂದಿದೆ. ಬ್ರಿಟನ್, ಅಮೆರಿಕದ ಕ್ರಾನ್‌ಬೆರಿ ಇದೇ ರುಚಿಯದು, ತುಸು ದೊಡ್ಡದು.ವ್ಯಾಪಕವಾಗಿ ಬೆಳೆಸಿ ನಾವು ಬಳಸುವಂತೆಯೇ ಬಳಸುತ್ತಾರೆ. ಕರಂಡೆಯನ್ನು ಉಪ್ಪಿನಕಾಯಿ ಹಾಕುತ್ತಾರೆ, ಉಪ್ಪಿನಲ್ಲಿ ಹಾಕಿ ಇಡುತ್ತಾರೆ. ಬೇಯಿಸಿ ಒಣಗಿಸಿಟ್ಟು ಹುಣಸೆ ಹುಳಿಯ ಬದಲು ಬಳಸುತ್ತಾರೆ. ರೈಲಿನಲ್ಲಿ ಪೂನಾ ಮುಂಬಯಿ ನಡುವೆ ಲೋನಾವಳ ಬಳಿ ಇದರ ಹಣ್ಣನ್ನು ಎಲೆಯಲ್ಲಿ ಕಟ್ಟಿ ಮಾರುವ ಬುಡಕಟ್ಟು ಮಹಿಳೆಯರು

ಭಾರತಕ್ಕೆ ರೈಲಿನಲ್ಲಿ ಕಲ್ಲಿದ್ದಲು ಕಳುಹಿಸಿದ ರಶಿಯಾ

ಐಎನ್‌ಎಸ್‌ಟಿಸಿ- ಅಂತರರಾಷ್ಟಿçÃಯ ಬಡಗಣ ತೆಂಕಣ ಸಾಗಣೆ ನೇರದಾರಿಯ ಮೂಲಕ ಇದೇ ಮೊದಲ ಬಾರಿಗೆ ರಶಿಯಾದ ಕಲ್ಲಿದ್ದಲು ಭಾರತಕ್ಕೆ ಬಂತು.ರಶಿಯಾದಿದ ನೇರ ಭಾರತಕ್ಕೆ ಇಂಟರ್‌ನ್ಯಾಶನಲ್ ನಾರ್ತ್ ಸೌತ್ ಟ್ರಾನ್ಸ್ಪೋರ್ಟ್ ಕಾರಿಡಾರ್ ರಚನೆಯನ್ನು ರಶಿಯಾ 2000ದಲ್ಲಿ ಆರಂಭಿಸಿತ್ತು. ಆದರೆ ತಡವಾಗಿ ಆರಂಭವಾಗಿದೆ. ಇರಾನಿನ ಬಂದರ್ ಅಬ್ಬಾಸ್‌ವರೆಗೆ ರೈಲು ಹಾದಿ. ಅಲ್ಲಿಂದ ಹಡಗು. ಮುಂದಿನ ರೈಲು ಹಾದಿ ಆಲೋಚನೆಯಲ್ಲೇ ಇದೆ.ಈಗ ರಶಿಯಾವು ಕಜ್‌ಬಾಸ್‌ನಿಂದ ಎರಡು ರೈಲು ಭರ್ತಿ

ದಕ್ಷಿಣ ಚೀನಾದ ಗೌಂಗ್‌ಝೋ ನಗರಕ್ಕೆ ಅಪ್ಪಳಿಸಿದ ಸುಂಟರಗಾಳಿ: ಐವರ ಸಾವು: 33ಮಂದಿಗೆ ಗಾಯ

ದಕ್ಷಿಣ ಚೀನಾದ ಗೌಂಗ್‌ಝೋ ನಗರಕ್ಕೆ ಸುಂಟರಗಾಳಿ ಅಪ್ಪಳಿಸಿದೆ. ಘಟನೆಯಲ್ಲಿ ಐವರು ಮೃತಪಟ್ಟು, 33 ಮಂದಿ ಗಾಯಗೊಂಡಿದ್ದಾರೆ. ಶನಿವಾರ ಮಧ್ಯಾಹ್ನ ನಗರದ ಬೈಯುನ್ ಜಿಲ್ಲೆಯಲ್ಲಿ ಪ್ರಬಲವಾದ ಸುಂಟರಗಾಳಿ ಬೀಸಿದೆ. ಪರಿಣಾಮ 141 ಕಾರ್ಖಾನೆ ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೈಯುನ್ ಜಿಲ್ಲೆಯ ಲಿಯಾಂಗ್ಟಿಯಾನ್ ಹಳ್ಳಿಯಲ್ಲಿರುವ ಹವಾಮಾನ ಕೇಂದ್ರದಲ್ಲಿ ಸೆಕೆಂಡಿಗೆ ಗರಿಷ್ಠ 20.6 ಮೀಟರ್ ಗಾಳಿ ದಾಖಲಾಗಿದೆ. ಸುಂಟರಗಾಳಿ ಬಳಿಕ ದಕ್ಷಿಣ

ವಿದೇಶದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ಯಕ್ಷಗಾನ ಪ್ರದರ್ಶನ

ಯಕ್ಷಗಾನ ಇತಿಹಾಸದಲ್ಲೇ ಪರಿಪೂರ್ಣ ಮೇಳವೊಂದು ಪ್ರಪ್ರಥಮ ಬಾರಿಗೆ ವಿದೇಶಕ್ಕೆ ತೆರಳಿ ಯಕ್ಷಗಾನ ಪ್ರದರ್ಶನ ನೀಡಲು ಸಿದ್ಧವಾಗಿದೆ.ತೆಂಕುತಿಟ್ಟಿನ ಪ್ರಸಿದ್ಧ ಶ್ರೀ ಗೆಜ್ಜೆಗಿರಿ ಮೇಳವು ಮಸ್ಕತ್ ಮತ್ತು ದುಬೈ ಯಲ್ಲಿ ಆದಿ ಮಾಯೆ ಪರಾಶಕ್ತಿ ಧೂಮಾವತಿ ಮತ್ತು ಮಾತೆ ದೇಯಿ ಬೈದೆತಿ ಅಮ್ಮನವರ ಬೆಳಕಿನ ಯಕ್ಷಗಾನ ಗೆಜ್ಜೆಸೇವೆ ನೀಡಲಿದ್ದು ಪೂರ್ಣ ಪ್ರಮಾಣದ ಮೇಳವೊಂದು ವಿದೇಶಿ ನೆಲದಲ್ಲಿ ಪ್ರದರ್ಶನ ನೀಡುತ್ತಿರುವುದು ಯಕ್ಷರಂಗದ ಇತಿಹಾಸದಲ್ಲಿ ಪ್ರಥಮವೆನಿಸಿದೆ. ವಿದೇಶದ

ಉಳ್ಳಾಲದ ಮೊಗವೀರ ಬಾಲಕಿಯ ಮಹತ್ತರ ಸಾಧನೆ

ಉಳ್ಳಾಲ: 2024ರ ಮೇ, ತಿಂಗಳಲ್ಲಿ ಅಮರಿಕಾದ ನ್ಯೂಯಾರ್ಕ್‌ನಲ್ಲಿ ಜರಗುವ ವರ್ಲ್ಡ್ ಸೈನ್ಸ್ ಸ್ಕಾಲರ್ ಕಾರ್ಯಕ್ರಮಕ್ಕೆ ಉಳ್ಳಾಲದ ಮೊಗವೀರ ಸಮಾಜದ ಬಾಲಕಿ ಸಿಂಧೂರಳಿಗೆ ಆಹ್ವಾನ ಬಂದಿದ್ದು, ಮುಂದಿನ ತಿಂಗಳು ತಾಯಿ ಮಗಳು ಇಬ್ಬರು ಭಾಗಿಯಾಗಲಿದ್ದಾರೆ ಎಂದು ಬಾಲಕಿಯ ತಾಯಿ ಶಿಬಾನಿ ರಾಜಾ ಹೇಳಿದರು. ತೊಕ್ಕೊಟ್ಟು ಸೇವಾಸೌಧದಲ್ಲಿನ ಉಳ್ಳಾಲ ಪ್ರೆಸ್‌ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ನ್ಯೂಯಾರ್ಕ್‌ನಲ್ಲಿ ನಡೆಯುವ ವರ್ಲ್ಡ್ ಸೈನ್ಸ್ ಸ್ಕಾಲರ್