Home Archive by category Fresh News (Page 215)

ಉಡುಪಿ : ಕಾಲು ಜಾರಿ ತೋಡಿಗೆ ಬಿದ್ದು ವ್ಯಕ್ತಿ ಮೃತ್ಯು

ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೀಡಿನಗುಡ್ಡೆಯ ನಾಗಬನದ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ 38 ವರ್ಷದ ಸೋಮಪ್ಪ ರಾಠೋಡ್ ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಸ್ಥಳೀಯರು ಮೃತದೇಹವನ್ನು ತೋಡಿನಿಂದ ಮೇಲಕೆತ್ತಿದರು.

ದ.ಕ ಜಿಲ್ಲೆ : ಮಳೆ ಹಿನ್ನಲೆ ಶಾಲಾ ಕಾಲೇಜುಗಳಿಗೆ ರಜೆ

ಜು.04 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜು.4ರ ಮಂಗಳವಾರ ಮಂಗಳೂರು, ಮೂಲ್ಕಿ, ಉಲ್ಲಾಳ, ಮೂಡಬಿದರೆ ಹಾಗೂ ಬಂಟ್ವಾಳ ತಾಲೂಕುಗಳ ಶಾಲೆಗಳು‌ ಹಾಗೂ‌ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಜೆ ಘೋಷಿಸಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆ ಕೊಡುವ ಜವಾಬ್ದಾರಿ ತಹಶೀಲ್ದಾರ್ ಗೆ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್

ದ.ಕ.ಜಿಲ್ಲೆಯಲ್ಲಿ ಸುರಿಯುತ್ತಿರುವ ಸತತ ಮಳೆಯ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆಗಳನ್ನು ಘೋಷಿಸುವ ಅಧಿಕಾರವನ್ನು ಆಯಾ ತಾಲೂಕಿನ ತಹಶೀಲ್ದಾರರಿಗೆ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಹೇಳಿದ್ದಾರೆ. ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು, ಕಾಲೇಜಿನ ಪ್ರಾಂಶುಪಾಲರಿಂದ ವರದಿ ತಯಾರಿಸಿ ತಹಶೀಲ್ದಾರರಿಗೆ ಸಲ್ಲಿಸಬೇಕು. ತಹಶೀಲ್ದಾರರು ಪ್ರತಿದಿನ ಬೆಳಗ್ಗೆ 6ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ವೀಡಿಯೋ

ಬೀಡಿನಗುಡ್ಡೆಯಲ್ಲಿ ತೋಡಿಗೆ ಬಿದ್ದು ವ್ಯಕ್ತಿ ಮೃತ್ಯು

ಉಡುಪಿ : ದಾರಿಯಲ್ಲಿ ನಡೆದುಕೊಂಡು‌ ಹೋಗುತ್ತಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೀಡಿನಗುಡ್ಡೆಯ ನಾಗಬನದ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ 38 ವರ್ಷದ ಸೋಮಪ್ಪ ರಾಠೋಡ್ ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಸ್ಥಳೀಯರು ಮೃತದೇಹವನ್ನು‌ ತೋಡಿನಿಂದ ಮೇಲೆತ್ತಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಮೃತದೇಹವನ್ನು

ಸೇನೆ ಸೇರುವ ಕನಸುಗಳಿಗೆ ‘ಕೋಟಿ ಚೆನ್ನಯ’ ತರಬೇತಿ

ಉಡುಪಿ : ಸೇನೆಗೆ ಸೇರಬೇಕು, ದೇಶ ಸೇವೆ ಮಾಡಬೇಕು ಅನ್ನೋದು ಸಾವಿರಾರು ಯುವಕರ ಕನಸು. ಆದರೆ ಸೂಕ್ತ ಮಾಹಿತಿ ಹಾಗೂ ತರಬೇತಿಯ ಕೊರತೆಯಿಂದ ಕನಸು ನನಸಾಗೋದೆ ಇಲ್ಲ. ಇಂತಹ ದೇಶ ಸೇವೆಯ ಕನಸು ಹೊತ್ತ ಯುವಕರಿಗೆ ತರಬೇತಿ ನೀಡಿ, ಸೈನಿಕರಾಗಲು ಪ್ರೇರೆಪಿಸುತ್ತಿದೆ ಉಡುಪಿಯ ಕೋಟಿ ಚೆನ್ನಯ ಸೇನಾ ತರಬೇತಿ ಪೂರ್ವ ಸಂಸ್ಥೆ. ಇದು ಸೈಕರಾಗಿ ದೇಶ ಕಾಯಲು ಹೊರಟ ಯುವಕರಿಗೆ ತರಬೇತಿ ನೀಡುವ ಸೇನಾ ಪೂರ್ವ ತರಬೇತಿ ಶಾಲೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ

ಉಡುಪಿಯ ಹಳೆ ಜೈಲಿನ ನೆಲಸಮಕ್ಕೆ ಆದೇಶ : ಕಾಂತಾರ ಚಿತ್ರೀಕರಣಗೊಂಡ ಸ್ವಾತಂತ್ರ್ಯ ಪೂರ್ವದ ಜೈಲು

ಉಡುಪಿ : ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣಗೊಂಡ ಸರಿಸುಮಾರು 117 ವರ್ಷಗಳ ಇತಿಹಾಸ ಇರುವ ಉಡುಪಿ ನಗರದ ಹಳೆ ಸಬ್‌ಜೈಲು ಇನ್ನಿಲ್ಲದಂತಾಗುವಂತಿದೆ. ಕಾಂತಾರ ಸಿನಿಮಾದ ಕೆಲ ಭಾಗಗಳು ಚಿತ್ರೀಕರಣಗೊಂಡ, ಉಡುಪಿಯ ಏಕೈಕ ಪಾರಂಪರಿಕ ಕಟ್ಟಡದ ನೆಲಸಮಕ್ಕೆ ಇದೀಗ ಆದೇಶ ನೀಡಲಾಗಿದೆ. ಹೊಸ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಪಾರಂಪರಿಕ ಜೈಲನ್ನು‌ ಕೆಡವಲು ಉಡುಪಿ ನಗರಸಭೆ ಮೂದಾಗಿರುವುದು, ಆರ್ಕಿಟೆಕ್ಟ್‌ಗಳು ಹಾಗೂ ಕಲಾವಿದರಿಂದ ಬಾರೀ ವಿರೋಧ ವ್ಯಕ್ತವಾಗುತ್ತಿದೆ. ಉಡುಪಿ,

ಉಜಿರೆ ಎಸ್ ಡಿ ಎಂ ಕಾಲೇಜು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರ ಪತ್ನಿ ಸುವರ್ಣ(49) ನಿಧನ

ಉಜಿರೆ ಎಸ್ ಡಿ ಎಂ ಕಾಲೇಜು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರ ಪತ್ನಿ ಸುವರ್ಣ(49) ನಿಧನರಾಗಿದ್ದಾರೆ.ಸುವರ್ಣ ಅವರಿಗೆ ಮನೆಯಲ್ಲಿ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಸುವರ್ಣ ಅವರು ಪತಿ ಭಾಸ್ಕರ್ ಹೆಗಡೆ, ಪುತ್ರ ಶಶಾಂಕ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ

ಕೊಡಿಯಾಲ್ ಬೈಲ್‍ : ಭೂ ಕುಸಿತದಿಂದ ಸಂಚಾರಕ್ಕೆ ತೊಡಕು

ಕರಾವಳಿಯಲ್ಲಿ ನಿನ್ನೆ ಸಂಜೆಯಿಂದ ಮಳೆ ಬಿರುಸುಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವೆಡೆ ಹಾನಿ ಸಂಭವಿಸಿದೆ. ಮಂಗಳೂರಿನ ಕೊಡಿಯಾಲ್ ಬೈಲ್‍ನ ಬಿಷಪ್ ಕಂಪೌಂಡ್‍ನ ಮೇಲ್ಬಾಗದ ಗುಡ್ಡ ಕುಸಿದು ಬಿದ್ದಿದೆ.ಗುಡ್ಡ ಕುಸಿತದ ಮೇಲ್ಭಾಗದಲ್ಲಿ ಕೋರ್ಟ್ ಆವರಣ ಮತ್ತು ರಸ್ತೆ ಇದ್ದು ವಾಹನಗಳು ನಿತ್ಯ ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಇದೀಗ ಈ ಭಾಗದಲ್ಲಿ ಭೂ ಕುಸಿತದ ಪರಿಣಾಮ ವಾಹನ ಸಂಚಾರಕ್ಕೆ ಅಲ್ಪ ಪ್ರಮಾಣದಲ್ಲಿ ತೊಂದರೆ ಆಗಿದೆ.

ಕರಾವಳಿಯ ಸೊಬಗಿನಲ್ಲಿ ರಂಗೇರಿತು “ಕೆಸರ್ಡ್ ಒಂಜಿ ದಿನ”

ಉಡುಪಿ : ಕರಾವಳಿಯ ಮಣ್ಣಿನ ಸೊಬಗು, ಆಚರಣೆಯ ಸೊಗಡು ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಕರಾವಳಿಯಲ್ಲಿ ಮಳೆ ಬಂದರೆ ಸಾಕು ಅನೇಕ ಪದ್ಧತಿಗಳು, ಆಟೋಟ ಸ್ಪರ್ದೆಗಳು ಆರಂಭವಾಗುತ್ತವೆ. ಮಳೆಗಾಲ ಬಂದಾಗ ಕರಾವಾಳಿಯ ಗದ್ದೆಗಳು ತುಂಬಿ ತುಳುಕುತ್ತವೆ, ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಆದರೆ ಇಂದಿನ ಕಂಪ್ಯೂಟರ್ ಯುಗದಲ್ಲಿ ಪಾರಂಪರಿಕವಾಗಿ ಬೆಳೆದು ಬಂದ ಹಳ್ಳಿ ಜನಪದ ಕ್ರೀಡೆಗಳು ಮೂಲೆ ಗುಂಪಾಗುತ್ತಿರುವುದರಿಂದ, ಕೆಸರುಗದ್ದೆ ಜನಪದ ಕ್ರೀಡೆಯನ್ನು ಉಳಿಸುವ

Udupi : ಜೀವ ಜಂತುಗಳು ಕೂಡಾ ಗುರುಗಳಿಂದ ಸಾಯಬಾರದು ; ಚಾತುರ್ಮಾಸ್ಯ ವೃತದ ಮಹತ್ವ

ಉಡುಪಿ : ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಹಾಸನ ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅವರು ನಾಲ್ಕೂರು ಕಜ್ಕೆಯ ಶಾಖಾ ಮಠದಲ್ಲಿ ಜುಲೈ 3ರಿಂದ ಸೆಪ್ಟಂಬರ್ 29ರ ತನಕ 41ನೇ ಚಾತುರ್ಮಾಸ್ಯ ವೃತಾನುಷ್ಠಾನದ ಅಂಗವಾಗಿ ಪುರಪ್ರವೇಶ ಕಾರ್ಯಕ್ರಮ ನಡೆಯಿತು. ಹೆಬ್ರಿ ಶ್ರೀ ವಿಶ್ವಕರ್ಮ ಸಮುದಾಯ ಭವನದಿಂದ ಹೊರಟು ಸಂತೆಕಟ್ಟೆ, ಕೆಂಜೂರು ಮೂಲಕ ಪುರಪ್ರವೇಶ ಮಾಡಿದರು. ಮಹಿಳಾ ಸಂಘದವರಿಂದ