ಸೇನೆ ಸೇರುವ ಕನಸುಗಳಿಗೆ ‘ಕೋಟಿ ಚೆನ್ನಯ’ ತರಬೇತಿ
ಉಡುಪಿ : ಸೇನೆಗೆ ಸೇರಬೇಕು, ದೇಶ ಸೇವೆ ಮಾಡಬೇಕು ಅನ್ನೋದು ಸಾವಿರಾರು ಯುವಕರ ಕನಸು. ಆದರೆ ಸೂಕ್ತ ಮಾಹಿತಿ ಹಾಗೂ ತರಬೇತಿಯ ಕೊರತೆಯಿಂದ ಕನಸು ನನಸಾಗೋದೆ ಇಲ್ಲ. ಇಂತಹ ದೇಶ ಸೇವೆಯ ಕನಸು ಹೊತ್ತ ಯುವಕರಿಗೆ ತರಬೇತಿ ನೀಡಿ, ಸೈನಿಕರಾಗಲು ಪ್ರೇರೆಪಿಸುತ್ತಿದೆ ಉಡುಪಿಯ ಕೋಟಿ ಚೆನ್ನಯ ಸೇನಾ ತರಬೇತಿ ಪೂರ್ವ ಸಂಸ್ಥೆ. ಇದು ಸೈಕರಾಗಿ ದೇಶ ಕಾಯಲು ಹೊರಟ ಯುವಕರಿಗೆ ತರಬೇತಿ ನೀಡುವ ಸೇನಾ ಪೂರ್ವ ತರಬೇತಿ ಶಾಲೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ‘ಕೋಟಿ ಚೆನ್ನಯ’ ಸೇನಾ ಆಯ್ಕೆ ಪೂರ್ವ ತರಬೇತಿ ನಡೆಯುತ್ತಿದ್ದು, ಉಡುಪಿ ಜಿಲ್ಲಾಡಳಿತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಗ್ನಿಪತ್‌ಗೆ ಪೂರಕವಾಗಿ ಕೋಟಿ ಚೆನ್ನಯ ಸೇನಾ ತರಬೇತಿ ಪೂರ್ವ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.
ಒಟ್ಟು 100 ವಿದ್ಯಾರ್ಥಿಗಳು ಎರಡನೇ ಬ್ಯಾಚ್‌ನಲ್ಲಿ ತರಬೇತಿ ಪಡೆದಿದ್ದು, ಊಟ ವಸತಿ ಬಟ್ಟೆ ಸಹಿತ
ಒಟ್ಟು 4 ತಿಂಗಳ ಕಾಲ ತರಬೇತಿ ಸಂಪೂರ್ಣ ಉಚಿತವಾಗಿದೆ. ಸಂಸ್ಥೆಯಲ್ಲಿ ತರಬೇತಿ ಪಡೆದ ಹೆಚ್ಚಿನವರು ಈಗಾಗಲೇ ಸೈನ್ಯಕ್ಕೆ ಆಯ್ಕೆ ಆಗಿದ್ದಾರೆ ಅನ್ನುವುದು ಹೆಮ್ಮೆಯ ವಿಷಯ. ಒಟ್ಟಿನಲ್ಲಿ, ಕೋಟಿ ಚೆನ್ನಯ ಸೇನಾ ತರಬೇತಿ ಪೂರ್ವ ಸಂಸ್ಥೆ, ದೇಶ ಸೇವೆಯ ಕನಸು ಹೊತ್ತವರಿಗೆ ಉತ್ತಮ ಆಯ್ಕೆಯಾಗಿದೆ.