Home Archive by category Fresh News (Page 51)

ಕೊಣಾಜೆ : ಯುವತಿ ನಾಪತ್ತೆ

ಉಳ್ಳಾಲ: ಮನೆ ಕೆಲಸಕ್ಕಿದ್ದ ಯುವತಿ ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಹಾವೇರಿ ಸವಣೂರು ಮಾರುತಿಪುರ ನಿವಾಸಿ ಪೂಜಾ ಲಮಾಣಿ (20) ನಾಪತ್ತೆಯಾದವರು. ಕೊಣಾಜೆ ಕಕ್ಕೆಮಜಲು ನಿವಾಸಿ ಕುಟುಂಬವೊಂದು ಅನಾರೋಗ್ಯದಲ್ಲಿರುವ ಪ್ರಾಯಸ್ತರನ್ನು ನೋಡಿಕೊಳ್ಳಲು ಖಾಸಗಿ ಏಜೆನ್ಸಿ ಮೂಲಕ ಕೆಲಸಕ್ಕೆ ಇಟ್ಟುಕೊಂಡಿದ್ದು, ತಿಂಗಳಿಗೆ 20,000 ರೂ

ತೆಕ್ಕಿಲ್ ಶಾಲಾ ವತಿಯಿಂದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರಿಗೆ ಸನ್ಮಾನ

ಸುಳ್ಯದ ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಗೂನಡ್ಕ ವತಿಯಿಂದ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜಿಮ್ ರವರನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಇವರು ಮೈಸೂರು ಪೇಟ ತೊಡಿಸಿ ಶಾಲು, ಹಾರ ಮತ್ತು ಸ್ಮರಣಿಕೆ, ತೆಕ್ಕಿಲ್ ದಶದೀವಿಕೆ ಹಾಗು ಬೆಳಕಿನೆಡೆಗೆ 10 ಮುಸ್ಲಿಂ ಕತೆಗಳ ಪುಸ್ತಕ ನೀಡಿ ಸ್ವಾಗತಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಜೆ ಡಿ ಇವರು ಶಾಲೆಯ ಶಿಕ್ಷಕ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್ : ಪೇರಡ್ಕ ಜುಮಾ ಮಸ್ಜಿದ್ ಹಾಗೂ ದರ್ಗಾ ಭೇಟಿ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜಿಮ್ ರವರು ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ಮೋಹಿಯುದ್ದಿನ್ ಜುಮಾ ಮಸೀದಿಗೆ ಭೇಟಿ ನೀಡಿ ಮಸೀದಿ ಇತಿಹಾಸ ಕೇಳಿ ಹಳೆಯ ಮಸೀದಿ ಮತ್ತು ಪೇರಡ್ಕ ದರ್ಗಾದ ಬಗ್ಗೆ ಸಂತಸ ವ್ಯಕ್ತಪಡಿಸಿ ಈ ಭಾಗದಲ್ಲಿ ಮುಸ್ಲಿಮರು ಮಸೀದಿ ಹಾಗೂ ದರ್ಗಾದಲ್ಲಿ ಭಯ ಭಕ್ತಿ ಶಿಸ್ತು ಉಳ್ಳವರು ಹಾಗೂ ಧಾರ್ಮಿಕ ತಿಳುವಳಿಕೆ ಉಳ್ಳವರು ಎಂದು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೇರಡ್ಕ ಜುಮಾ ಮಸೀದಿ ಅಧ್ಯಕ್ಷರಾದ ಟಿ. ಎಂ

ಉಳ್ಳಾಲ: ಸಮುದ್ರದಲ್ಲಿ ಕಲ್ಲುಬಂಡೆಗೆ ಬಡಿದು ಮುಳುಗಿದ ಮೀನುಗಾರಿಕಾ ದೋಣಿ, ಐವರು ಮೀನುಗಾರರ ರಕ್ಷಣೆ

ಉಳ್ಳಾಲ: ಉಳ್ಳಾಲದಿಂದ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಟ್ರ್ರಾಲ್‍ಬೋಟೊಂದು ಶುಕ್ರವಾರ ನಸುಕಿನ ಜಾವ ಸಮುದ್ರದ ಕಲ್ಲೊಂದಕ್ಕೆ ಬಡಿದು ಮುಳುಗಿದ್ದು, ಸ್ಥಳೀಯ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‍ನ ಮೀನುಗಾರರು ಬೋಟ್‍ನಲ್ಲಿದ್ದ ಐವರನ್ನು ರಕ್ಷಿಸಿದ್ದಾರೆ. ಮುಳುಗಡೆಯಾಗಿರುವ ಬೋಟ್‍ನಲ್ಲಿ ಮೀನು, ಬಲೆ ಸಮುದ್ರ ಪಾಲಾಗಿದ್ದು, ಲಕ್ಷಾಂತರ ಮೌಲ್ಯದ ಬೋಟ್‍ಗೆ ಹಾನಿಯಾಗಿದೆ. ಉಳ್ಳಾಲ ನಿವಾಸಿ ನಯನಾ ಪಿ.ಸುವರ್ಣ ಅವರಿಗೆ ಸೇರಿದ`ನವಾಮಿ –

ದೇಶವಾಸಿಗಳಿಗೆ ನಿರಾಶೆಯ ಬಜೆಟ್ : ಮಂಜುನಾಥ ಭಂಡಾರಿ

ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ನಲ್ಲಿ ಬಡವರು, ಮಧ್ಯಮ ವರ್ಗವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಆದಾಯ ತೆರಿಗೆದಾರರ ನಿರೀಕ್ಷೆ ಹುಸಿಯಾಗಿದೆ. ವಿತ್ತ ಸಚಿವರು 55 ನಿಮಿಷಗಳ ಕಾಲ ಚುನಾವಣಾ ಭಾಷಣ ಮಾಡಿದರೇ ಹೊರತು ದೇಶದ ಅಭಿವೃದ್ಧಿ ದೃಷ್ಟಿಕೋನದಿಂದ ಯಾವುದೇ ಯೋಜನೆ ಪ್ರಕಟಿಸಿಲ್ಲ. ದೇಶದ ಆದಾಯ ಮೂಲವಾದ ಕೃಷಿ, ಉದ್ಯಮ, ಸೇವಾ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಬಹುನಿರೀಕ್ಷೆಯಿಂದ ಬಜೆಟ್‌ನ್ನು ಕಾಯುತ್ತಿದ್ದ ದೇಶವಾಸಿಗಳಿಗೆ ಕೇಂದ್ರ ಸರಕಾರ ನಿರಾಶೆ ಮೂಡಿಸಿದೆ ಎಂದು

ಪ್ರಗತಿ ಹಿನ್ನಡೆಯ ಸಂಕೇತ: ಕೆ. ಹರೀಶ್ ಕುಮಾರ್

ಮಂಗಳೂರು: ದೇಶದ ಬಿಜೆಪಿ ಸರಕಾರ ಹೇಳುತ್ತಿರುವ ದೇಶದ ಅಭಿವೃದ್ಧಿ ಶಕೆ ಕನ್ನಡಿಯೊಳಗಿನ ಗಂಟು ಇದ್ದಂತೆ. ದೇಶದ ಪ್ರಗತಿ ಹಿನ್ನಡೆ ಕಂಡಿರುವ ಈ ಕಾಲಘಟ್ಟದಲ್ಲಿ ನಿರ್ಮಲಾ ಸೀತಾರಾಮನ್ ಅವರು ಈ ರೀತಿಯ ಬಜೆಟ್ ಅಲ್ಲದೆ ಬೇರೇನು ಮಂಡಿಸಲು ಸಾಧ್ಯವಿಲ್ಲö ಎಂದು ವಿಧಾನ ಪರಿಷತ್ ಶಾಸಕರುಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.ಕಾರ್ಪೊರೇಟ್ ಸಂಸ್ಥೆಗಳ ಅಡಿಯಾಳಾಗಿರುವ ಕೇಂದ್ರ ಸರಕಾರ ಈ ಬಜೆಟ್‌ನಲ್ಲಿ ಬಡವರು, ಮಧ್ಯಮ

ಕೇಂದ್ರ ಬಜೆಟ್ ನಿರಾಶಾದಾಯಕ : ಬಿ.ರಮನಾಥ ರೈ

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್-2024 ನಿರಾಶಾದಾಯಕವಾಗಿದೆ. ವಿತ್ತ ಸಚಿವರು ಕೇವಲ ಭರವಸೆ ಕೊಡುವ ಚುನಾವಣಾ ಭಾಷಣ ಮಾಡಿದರೋ ಅಥವಾ ಆಯವ್ಯಯ ಪತ್ರ ಮಂಡಿಸಿದರೋ ಎಂಬ ಸಂಶಯ ಬರುತ್ತಿದೆ. ಪ್ರಗತಿ, ಬೆಳವಣಿಗೆ, ಧ್ಯೇಯ, ಆಧ್ಯತೆ, ಗಮನ, ಸಹಾಯ, ಬೆಂಬಲ, ಸಹಕಾರ, ಕ್ರಮ, ಕಾರ್ಯಕ್ರಮ, ಮಂತ್ರ ಎಂಬ ಪದಗಳನ್ನು ಹೇಳಿದ್ದರೆ ಹೊರತು ನಿರ್ದಿಷ್ಟವಾಗಿ ಅನುದಾನ ಹಂಚಿಕೆ ಮಾಡಿಲ್ಲ. ಈ ಬಜೆಟ್ ಪ್ರಾದೇಶಿಕತೆಯನ್ನು ಮರೆತಿದೆ. ವಲಯಗಳನ್ನು ಕಡೆಗಣಿಸಿದೆ. ವರ್ಗಗಳನ್ನು ನಿರ್ಲಕ್ಷ್ಯ

ಬಿಪಿಎಲ್ ಕುಟುಂಬಗಳಿಗೆ ಡಿಸೆಂಬರ್‌ನಲ್ಲಿ 17.68 ಕೋಟಿ ರೂ. ನಗದು ಜಮಾ

ಸಾರ್ವಜನಿಕ ವಿತರಣಾ ಪದ್ಧತಿಯಡಿ ಸರಕಾರದಿಂದ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತೀ ತಿಂಗಳು ವಿತರಿಸಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಸಿವು ಮುಕ್ತ ಕರ್ನಾಟಕದ ಪರಿಕಲ್ಪನೆಯೊಂದಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತೀ ತಿಂಗಳು ಅರ್ಹ ಫಲಾನುಭವಿಗಳಿಗೆ ಪಡಿತರ ನೀಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 460 ನ್ಯಾಯಬೆಲೆ ಅಂಗಡಿಗಳಿದ್ದು ಒಟ್ಟು 451593 ಪಡಿತರ ಚೀಟಿಗಳಿವೆ.ಅಂತ್ಯೋದಯ ಅನ್ನಯೋಜನೆಯಡಿ ಜಿಲ್ಲೆಯಲ್ಲಿ ಬಡತನ

ಮಂಗಳೂರು : ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ವೈಷ್ಣವಿಗೆ ಸನ್ಮಾನ

ಕುಲಶೇಖರದ ಕಟ್ಟೆ ಫ್ರೆಂಡ್ಸ್ ವತಿಯಿಂದ 26ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ಊರ ಹತ್ತು ಸಮಸ್ತರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ವೀರನಾರಾಯಣ ಅಶ್ವಥ ಕಟ್ಟೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಮಧ್ಯಪ್ರದೇಶದ ದೇವಾಸ್ ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕುಮಾರಿ ವೈಷ್ಣವಿ ಯವರಿಗೆ ಶಾಲು ಹೊದಿಸಿ ಫಲ ಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ

ಅಕ್ಷತೆ ಅಕ್ಕಿ ಪಡಿತರ ಅಕ್ಕಿ ಕಾಳಗ

ಅಕ್ಷತೆಗೆ ಮತ ಹಾಕುತ್ತೀರಾ, ಅನ್ನದ ಅಕ್ಕಿಗೆ ಮತ ಹಾಕುತ್ತೀರಾ ಎಂದು ಪ್ರಶ್ನಿಸಿದ ಮಾಗಡಿ ಶಾಸಕ ಬಾಲಕೃಷ್ಣ ಅವರು ಅಕ್ಷತೆಯ ಅಕ್ಕಿಗೆ ಮತ ಹಾಕುವುದಾದರೆ ನಿಮಗೆ ಅನ್ನದ ಅಕ್ಕಿ ಕೊಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ವಾರಣಾಸಿ ಜ್ಞಾನವಾಪಿ ಮಸೀದಿಯ ಬೀಗ ಹಾಕಿದ ಭಾಗದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಈಗ ಕೋರ್ಟು ಆದೇಶ ನೀಡಿದೆ. ಲೋಕ ಸಭೆ ಚುನಾವಣೆಗೆ ಮೊದಲು ತಾತ್ಕಾಲಿಕ ಆಯವ್ಯಯ ಆಗುವುದಕ್ಕೆ ಮೊದಲು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್