Home Archive by category Fresh News (Page 52)

ಭ್ರಷ್ಟ ಭಾರತ ಸ್ಪಷ್ಟ

2023ರ ಲೆಕ್ಕಾಚಾರದ ಮೇಲೆ 2024ರ ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ ಹೊರಬಿದ್ದಿದೆ. ಭಾರತವು 40 ಅಂಕದೊಡನೆ 93ನೇ ಸ್ಥಾನದಲ್ಲಿ ಇದೆ. ಕಳೆದ ವರುಷ 39 ಅಂಕದೊಡನೆ 85ನೇ ಸ್ಥಾನದಲ್ಲಿ ಇದ್ದ ಭಾರತ ಮತ್ತಷ್ಟು ಭ್ರಷ್ಟ ಕೂಪಕ್ಕೆ ಜಾರಿದೆ. ಪಾರದರ್ಶಕ ಅಂತರರಾಷ್ಟ್ರೀಯ ಸಂಸ್ಥೆ ಅರ್ಥಾತ್ ಟ್ರಾನ್ಸ್‍ಫರೆನ್ಸಿ ಇಂಟರ್‍ನ್ಯಾಶನಲ್ ಸಂಸ್ಥೆ ಈ ಸೂಚ್ಯಂಕ ಪಟ್ಟಿ

ಕೇಂದ್ರ ಬಜೆಟ್ : 2047ಕ್ಕೆ ಅರಳಲಿದೆ ವಿಕಸಿತ್ ಭಾರತ್ ಆಶ್ವಾಸನೆ

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದ ಮೂಲಕ ಬಿಜೆಪಿ ಒಕ್ಕೂಟ ಸರಕಾರದ ಜನಪರ ಯೋಜನೆಗಳು ದೇಶದ ಮೂಲೆ ಮೂಲೆಗೆ ತಲುಪಿದೆ ಎಂದು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಹೇಳುವುದರ ಮೂಲಕ ಚುನಾವಣಾ ಪೂರ್ವ ತಾತ್ಕಾಲಿಕ ಬಜೆಟ್ ಮಂಡಿಸಿದರು. 2047ಕ್ಕೆ ವಿಕಸಿತ ಭಾರತ್ ಅರಳಲು ತಮ್ಮ ಬಜೆಟ್ ಸಹಾಯಕ ಎಂದು ಅವರು ಹೇಳಿದರು.ತಾತ್ಕಾಲಿಕ ಬಜೆಟ್ಟಿನ ಕೆಲವು ಮುಖ್ಯಾಂಶಗಳು ಮುಂದಿನಂತಿವೆ. ದೇಶದ ಜನರು ನಮಗೆ ಬಹುಮತ ನೀಡಿ ಗೆಲ್ಲಿಸಿದ್ದಾರೆ. ಕಳೆದ ಹತ್ತು ವರುಷಗಳಿಂದ ಭಾರತದ

ಹೆಮ್ಮುಂಜೆ ಸ.ಹಿ.ಪ್ರಾ.ಶಾಲೆಗೆ ಕುಂದಾಪುರ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿ ಪರಿಕರಗಳ ಕೊಡುಗೆ

ಬೈಂದೂರು: ಹೆಮ್ಮುಂಜೆ ಸ, ಹಿ, ಪ್ರಾ, ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶಾಲಾ ಪರಿಕರಗಳನ್ನು ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ನೀಡಲಾಯಿತು. ವಿದ್ಯಾರ್ಥಿ ಪರಿಕರಗಳನ್ನು ನೀಡಿ ಮಾತನಾಡಿದ ಅಧ್ಯಕ್ಷರಾದ ರಾಘವೇಂದ್ರ ಸಿ ನಾವುಡರು ಶಾಲೆಗೆ ಇನ್ನೂ ಹೆಚ್ಚಿನ ಸವಲತ್ತನ್ನು ಒದಗಿಸುವ ಮೂಲಕ ಮಕ್ಕಳ ಬರುವಿಕೆ ಸಂಖ್ಯೆ ಹೆಚ್ಚಾಗಲಿ ಎಂದು ಹಾರೈಸುತ್ತೇನೆ ಎಂದರು. ಶಾಲಾ ಸ್ಥಾಪಕ ಕುಟುಂಬದ ಸದಸ್ಯರು, ಹಿರಿಯ ವಿದ್ಯಾರ್ಥಿಯು ಹಾಗೂ ಅತ್ಯುತ್ತಮ ಜಿಲ್ಲಾ ಶಿಕ್ಷಕ

ಕುಂದಾಪುರ: ಸಮಾನ ಮನಸ್ಕ ಸಂಘಟನೆಗಳಿಂದ ಮಾನವ ಸರಪಳಿ ಸಮಾರೋಪ

ಕುಂದಾಪುರ: ಎಲ್ಲಿಯವರೆಗೆ ಬ್ರಿಟನ್ ದೇಶದ ಪಾರ್ಲಿಮೆಂಟ್ ಕಟ್ಟಡದ ಮಧ್ಯೆ ಗಾಂಧಿ ಪ್ರತಿಮೆ ಇರುತ್ತದೆಯೋ ಅಲ್ಲಿಯ ತನಕ ಗಾಂಧೀಜಿಯವರ ಚಿಂತನೆಗಳಿಗೆ ಸೋಲಿಲ್ಲ ಎಂದು ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ದಿನೇಶ್ ಹೆಗ್ಡೆ ಅಭಿಪ್ರಾಯಪಟ್ಟರು. ಮಹಾತ್ಮ ಗಾಂಧಿಜೀಯವರ ಹುತಾತ್ಮ ದಿನದ ಅಂಗವಾಗಿ ಸಮಾನ ಮನಸ್ಕ ಸಂಘಟನೆಗಳಿಂದ, ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗಾಂಧೀಜಿ ಅವರ

ಸೌತಡ್ಕ : ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ‘ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ’

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ, ತಾಯಂದಿರ ಹಾಲುಣಿಸುವ ಕೊಠಡಿಯ ಲೋಕಾರ್ಪಣೆ ಹಾಗೂ ಕ್ಷೇತ್ರ ಪರಿಚಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಡೆಯಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ ನಡೆಯಿತು.ರಾಜ್ಯ ಧಾರ್ಮಿಕ ಇಲಾಖೆಯ ವತಿಯಿಂದ ನಿರ್ಮಿಸಲಾದ ತಾಯಂದಿರು ಮಕ್ಕಳಿಗೆ ಹಾಲುಣಿಸುವ ಕೊಠಡಿಯನ್ನು ರಾಜ್ಯ

ಕಲ್ಲಡ್ಕ : ವಿದ್ಯಾಗಣಪತಿ ದೇವರ ಪ್ರತಿಷ್ಠೆಯ ಅಂಗವಾಗಿ ಶಿಲಾನ್ಯಾಸ

ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ವಿದ್ಯಾಗಣಪತಿ ದೇವರ ಪ್ರತಿಷ್ಠೆಯ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಅವಧೂತ ವಿನಯ ಗುರೂಜಿ, ಕಲ್ಲಡ್ಕ ಪ್ರಭಾಕರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಬೈಲೂರು : ಬಿಲ್ಲವ ಸಮಾಜ ಸೇವಾ ಸಂಘದ 5ನೇ ವರ್ಷದ ವರ್ಧಂತಿ ಮಹೋತ್ಸವ

ಕಾರ್ಕಳ ತಾಲೂಕಿನ ಬೈಲೂರು ಬಿಲ್ಲವ ಸಮಾಜ ಸೇವಾ ಸಂಘದ 5ನೇ ವರ್ಷದ ವರ್ಧಂತಿ ಮಹೋತ್ಸವ ಕಾರ್ಯಕ್ರಮ ಅಧ್ಯಕ್ಷರಾದ ಸುರೇಂದ್ರ ಪೂಜಾರಿಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ತುಳು ರಂಗಭೂಮಿ ಕಲಾವಿದ ಭೋಜರಾಜ್ ವಾಮಂಜೂರ್,ಮಹಾಮಂಡಲದ ಕೋಶಾಧಿಕಾರಿ ಗಣೇಶ್ ಪೂಜಾರಿ,ಸತೀಶ್ ಪೂಜಾರಿ ಹಾಗೂ ಬೈಲೂರಿನ ಸಮಾಜ ಬಂದವರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಮಾರ್ಚ್ 10ರಂದು ಮುಲ್ಕಿಯಲ್ಲಿ

ಮುಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅರ್ಧ ವಾರ್ಷಿಕ ಪ್ರಾದೇಶಿಕ ಮಹಾಸಭೆ

ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಮುಲ್ಕಿ ಇದರ ಅರ್ಧ ವಾರ್ಷಿಕ ಪ್ರಾದೇಶಿಕ ಮಹಾಸಭೆಯು ಮೂಡಬಿದ್ರೆ ತಾಲೂಕಿನ ಇರುವೈಲಿನ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಇರುವೈಲು ಸಂಘದ ಅಧ್ಯಕ್ಷರಾದ ಕುಮಾರ್ ಪೂಜಾರಿ,ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶಿತ ಹಿರಿಯ ನ್ಯಾಯಾವಾದಿ ತಾರಾನಾಥ ಪೂಜಾರಿ, ಮಹಾಮಂಡಲದ ಕಾರ್ಯದರ್ಶಿ ಗಂಗಾಧರ ಪೂಜಾರಿ

ಮೂಡುಬಿದಿರೆ: ಆಳ್ವಾಸ್ ವಿದ್ಯಾರ್ಥಿಯ ಸಂಶೋಧನಾ ಯೋಜನೆ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿ ಅಮೋಘ್ ಎ.ಹೆಬ್ಬಾರ್ ಮಾರ್ಚ್ ತಿಂಗಳಲ್ಲಿ ಉತ್ತರ ಆಫ್ರಿಕಾದ ಟ್ಯುನೀಶಿಯಾದಲ್ಲಿ ನಡೆಯುವ ಅಂತರರಾಷ್ಟ್ರೀಯ ವಾರ್ಷಿಕ ಮೆಗಾ ಸೈನ್ಸ್ ಫೆಸ್ಟಿವಲ್, `ಕೀಟ ಮತ್ತು ಕಳೆಗಳನ್ನು ನಿಯಂತ್ರಿಸಲು ನೈಸರ್ಗಿಕ ವಿಧಾನ’ ಶೀರ್ಷಿಕೆಯ ಸಂಶೋಧನಾ ಯೋಜನೆಯನ್ನು ಪ್ರಸ್ತುತಪಡಿಸಲು ಅರ್ಹತೆ ಪಡೆದಿದ್ದಾರೆ.ಗುಜರಾತ್‌ನ ರಾಜಕೋಟ್‌ನಲ್ಲಿ ನಡೆದ ರಾಷ್ಟೀಯ ಮಟ್ಟದ ಭಾರತೀಯ ವಿಜ್ಞಾನ ಮತ್ತು ಇಂಜಿನಿಯರಿಂಗ್

ಉಳ್ಳಾಲ : ಪಿಕಪ್- ಗೂಡ್ಸ್ ಲಾರಿ ನಡುವೆ ಅಪ್ಪಚ್ಚಿಯಾದ ಕಾರು

ಉಳ್ಳಾಲ : ಪಿಕಪ್ ವಾಹನವೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಅದರ ಹಿಂಬದಿಗೆ ಗುದ್ದಿದ ಸ್ಬಿಫ್ಟ್ ಕಾರಿಗೆ ಅದರ ಹಿಂದುಗಡೆಯಿದ್ದ ಗೂಡ್ಸ್ ಲಾರಿ ಢಿಕ್ಕಿ ಹೊಡೆದು ಎರಡು ವಾಹನಗಳ ನಡುವೆ ಸಿಲುಕಿದ ಕಾರು ಅಪ್ಪಚ್ಚಿಯಾದ ಘಟನೆ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸಂಭವಿಸಿದೆ. ದೇರಳಕಟ್ಟೆ ಕಡೆಯಿಂದ ಕೆಲಸ ಮುಗಿಸಿ ಮಂಗಳೂರಿನತ್ತ ಮೂವರು ಯುವತಿಯರಿದ್ದ ಕಾರು ತೆರಳುವಾಗ , ಜನದಟ್ಟಣೆ ತೊಕ್ಕೊಟ್ಟು ರಿಕ್ಷಾ ಪಾಕ್೯ ಸಮೀಪದಲ್ಲೇ ಎದುರುಗಡೆಯಿದ್ದ ಪಿಕಪ್ ವಾಹನದ ಚಾಲಕ ಹಠಾತ್