Home Archive by category Fresh News (Page 616)

ಬೈತುರ್ಲಿ : 32 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ

ನಗರ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ವಾರ್ಡುಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರ ಬೇಡಿಕೆಯ ಕಾಮಗಾರಿಗಳಿಗೆ ನನ್ನ ಅವಧಿಯಲ್ಲಿ ದಾಖಲೆ ಪ್ರಮಾಣದ ಅನುದಾನ ಬಿಡುಗಡೆಗೊಳಿಸಲಾಗಿದೆ. ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ ಸಮಾನವಾಗಿ ಅನುದಾನ ಬಿಡುಗಡೆಗೊಳಿಸಿದ್ದೇನೆ ಎಂದು ಶಾಸಕ ಕಾಮತ್ ಹೇಳಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ

ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ನೂತನ ಠಾಣಾ ಕಟ್ಟಡ ನಿರ್ಮಾಣಕ್ಕೆ ಸಚಿವ ಎಸ್. ಅಂಗಾರರಿಂದ ಶಂಕುಸ್ಥಾಪನೆ

ಕಡಬ : ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ನೂತನ ಠಾಣಾ ಕಟ್ಟಡ ನಿರ್ಮಾಣಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಶಂಕುಸ್ಥಾಪನೆ ನೆರವೇರಿಸಿದರು. ಕರ್ನಾಟಕ ರಾಜ್ಯ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯ 1.20 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶಿ ಭಗವಾನ್ ಸೋಣವಾಣೆ, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ್, ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಎಸೈ ಮಂಜುನಾಥ್,

ಪುರುಷರ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ : ಆಚಾರ್ಯ ನಾಗಾರ್ಜುನ ವಿವಿ, ಕೇರಳ ಪ್ರೀ ಕ್ವಾರ್ಟರ್ ಫೈನಲ್‍ಗೆ

ಮಂಗಳೂರು ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಪುರುಷರ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಕೇರಳ ವಿವಿ, ತಮಿಳುನಾಡು ಚಿದಂಬರಂನ ಅಣ್ಣಾಮಲೈ ವಿವಿ ಮತ್ತು ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿವಿ ತಂಡಗಳು ಫ್ರಿ ಕ್ವಾರ್ಟರ್ ಫೈನಲ್‍ಗೆ ಪ್ರವೇಶಿಸಿವೆ. ಚೆನ್ನೈನ ಅಣ್ಣಾ ವಿವಿ, ತಮಿಳುನಾಡು ತಿರುಚಿನಾಪಳ್ಳಿಯ ಭಾರತಿದಾಸನ್ ವಿವಿ,

ನೇಪಾಳ, ರನ್‌ವೇಯಲ್ಲಿ 68 ಪ್ರಯಾಣಿಕರಿದ್ದ ವಿಮಾನ ಪತನ

ನವ ದೆಹಲಿ, ಜನವರಿ 15; 72 ಪ್ರಯಾಣಿಕರ ಸಾಮರ್ಥ್ಯದ ವಿಮಾನ ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಪತನಗೊಂಡಿದೆ. ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಭಾನುವಾರ 68 ಪ್ರಯಾಣಿಕರು, ನಾಲ್ವರು ಸಿಬ್ಬಂದಿ ಇದ್ದ Yeti ವಿಮಾನಯಾನ ಸಂಸ್ಥೆಗೆ ಸೇರಿದ್ದ ವಿಮಾನ ವಿಮಾನ ನಿಲ್ದಾಣದ ರನ್‌ವೇ ಸಮೀಪ ಪತನಗೊಂಡಿದೆ. ಪತನಗೊಂಡ

ಬೆಳ್ತಂಗಡಿಯ ಆನಾರು ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ

ನಮ್ಮಲ್ಲಿರುವ ಒಳ್ಳೆ ಗುಣಗಳನ್ನು ಬೆಳೆಸಬೇಕು.ನಮ್ಮನ್ನು ನಾವು ಗುರುತಿಸಿ ಕೊಳ್ಳಬೇಕು ಎಂದು ಮೂಡಬಿದ್ರೆಯ ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್ ಹೇಳಿದರು. ಅವರು ಬೆಳ್ತಂಗಡಿ ತಾಲೂಕಿನ ಅನಾರು ದೇವಸ್ಥಾನದಲ್ಲಿ ಧಾರ್ಮಿಕ ಭಾಷಣದಲ್ಲಿ ಮಾತನಾಡಿ ದೇವರನ್ನು ನಾವು ನಮ್ಮ ಹೃದಯದಲ್ಲಿ ಕಾಣಬೇಕು. ಜೀವನದಲ್ಲಿ ದೇವರು ಮೆಚ್ಚುವಂತಹ ಒಳ್ಳೆಯ ಕೆಲಸ ಮಾಡಬೇಕು ಎಂದು ಹೇಳಿದರು. ನಂತರ ಉಳಿಯ ಬೀಡಿನ ನಿತೇಶ್ ಬಲ್ಲಾಳ್ ಮಾತನಾಡಿ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದ

ಲೇಖಕಿ ಸಾರಾ ಅಬೂಬಕ್ಕರ್ ಅವರಿಗೆ ನಾಗರಿಕ ನುಡಿನಮನ

ಹೆಸರಾಂತ ಕನ್ನಡ ಲೇಖಕಿ ನಾಡೋಜ ಸಾರಾ ಅಬೂಬಕ್ಕರ್ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ನಾಗರಿಕ ನುಡಿನಮನ ಮತ್ತು ಸಂತಾಪ ಸಭೆಯು ಬಲ್ಮಠದ ಸಹೋದಯ ಸಭಾಂಗಣದಲ್ಲಿ ಜರುಗಿತು. ಹಿರಿಯ ಸಾಹಿತಿ ಬಿ.ಎಂ. ರೋಹಿಣಿ ಮಾತನಾಡಿ, ಪ್ರಭುತ್ವ ಪೊಲೀಸ್, ಪುರೋಹಿತಶಾಹಿ ವಿರುದ್ಧ ಸಾರಾ ಅಬೂಬಕ್ಕರ್ ಧ್ವನಿ ಎತ್ತಿದ್ದರು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂಬುವುದು ಅವರ ನಿಲುವಾಗಿತ್ತು. ತನ್ನ ಕೃತಿಯ ಅನುವಾದ ಮತ್ತು ಕಾದಂಬರಿ ಆಧರಿಸಿ ನಿರ್ಮಿಸಿದ ಚಲನಚಿತ್ರವನ್ನು

ಪತನವಾದ ನೇಪಾಳ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಐವರು ಭಾರತೀಯರು

ಇಂದು ಬೆಳಗ್ಗೆ ನೇಪಾಳದ ಪೋಖರಾದಲ್ಲಿ ಪತನಗೊಂಡ ಯೇತಿ ಏರ್‌ಲೈನ್ಸ್ ವಿಮಾನದಲ್ಲಿ ಕನಿಷ್ಠ ಐವರು ಭಾರತೀಯರು ಪ್ರಯಾಣಿಸುತ್ತಿದ್ದರು ಎಂದು ರಾಷ್ಟ್ರದ ನಾಗರಿಕ ವಿಮಾನಯಾನ ಪ್ರಾಧಿಕಾರ ಟ್ವೀಟ್‌ನಲ್ಲಿ ಖಚಿತಪಡಿಸಿದೆ. 15 ವಿದೇಶಿಯರು ಸೇರಿದಂತೆ 72 ಜನರನ್ನು ಹೊತ್ತೊಯ್ಯುತ್ತಿದ್ದ ನೇಪಾಳದ ಪ್ರಯಾಣಿಕ ವಿಮಾನವು ಪ್ರಮುಖ ಪ್ರವಾಸಿ ತಾಣವಾದ ಪೋಖರಾದ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ನದಿಯ ಕಮರಿಗೆ ಬಿದ್ದು ಪತನಗೊಂಡಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಐವರು

ಎಮ್.ಜಿ. ಹೆಗ್ಡೆ ಅವರು ಬರೆದಿರುವ ಮಿನುಗು ನೋಟ ಪುಸ್ತಕ ಬಿಡುಗಡೆ

ಗಾಂಧಿ ವಿಚಾರ ವೇದಿಕೆ ವತಿಯಿಂದ ಮಿನುಗು ನೋಟ ಎಮ್.ಜಿ. ಹೆಗ್ಡೆಯವರು ಬರೆದಿರುವ ಗಾಂಧೀಜಿಯವರ ಕುರಿತ ಪ್ರಶ್ನೆಗಳಿಗೆ ಉತ್ತರದ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಗರದ ಕದ್ರಿಯಲ್ಲಿರುವ ಲಯನ್ಸ್ ಭವನದಲ್ಲಿ ನಡೆಯಿತು. ಪುಸ್ತಕವನ್ನು ಪ್ರಸಿದ್ಧ ಅಂಕಣಕಾರರಾದ ಸುಧೀಂದ್ರ ಕುಲಕರ್ಣಿ ಅವರು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಮಾನವತೆಗೆ ಬೇಕಾದ ವಿಚಾರ ಎಂದೂ ಸಾಯುವುದಿಲ್ಲ. ಮಹಾತ್ಮಾ ಗಾಂಧೀಜಿಯವರು ವಿಶ್ವಶಾಂತಿಗಾಗಿ ಇಡೀ ಜಗತ್ತಿನಲ್ಲಿ ಸಹಬಂಧುತ್ವಕ್ಕಾಗಿ,

ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ: ಪೊಳಲಿ ಕ್ಷೇತ್ರದಲ್ಲಿ ಚಾಲನೆ

ಬಂಟ್ವಾಳ: ಜ.14 ರಿಂದ ಜ. 26ರವರೆಗೆ ಬಂಟ್ವಾಳ  ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಕ್  ಉಳಿಪ್ಪಾಡಿಗುತ್ತು  ಅವರ ನೇತ್ರತ್ವದಲ್ಲಿ ನಡೆಯಲಿರುವ  ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ ಶನಿವಾರ ಸಂಜೆ  ಚಾಲನೆ ನೀಡಲಾಯಿತು.   ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು

ಉಪ್ಪಿನಂಗಡಿ: ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಕರ್ನಾಟಕದ ವಿಶ್ವವಿದ್ಯಾನಿಲಯಗಳ ಶುಭಾರಂಭ

ಅಖಿಲ ಭಾರತಅಂತರ್ ವಿ ವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮೊದಲ ದಿನ ನಡೆದ ನಾಕೌಟ್ ಮಾದರಿಯ ಪಂದ್ಯಾಟದಲ್ಲಿ ಸುಮಾರು 30 ಪಂದ್ಯಾವಳಿಗಳು ನಡೆದಿದ್ದು,15 ವಿ.ವಿ ತಂಡಗಳು ಮುಂದಿನ ಹಂತಕ್ಕೆ ತೇರ್ಗಡೆಗೊಂಡಿದೆ. ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ದಿನ ನಾಕೌಟ್ ಪಂದ್ಯಗಳಲ್ಲಿ ಬೆಂಗಳೂರು ವಿವಿ 35-07, 35-14ರಲ್ಲಿ ಮೌಲಾನಾ ಆಜಾದ್ ವಿವಿಯನ್ನು