Home Archive by category Fresh News (Page 677)

ಹಾಲಿನ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತೆ : ಯು.ಟಿ. ಖಾದರ್

ಹಾಲಿನ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆಯುವ ತೀರ್ಮಾ ನ ಆದುದರಿಂದ ಈ ತೀರ್ಮಾನ ವನ್ನು ಕೆಎಂ ಎಫ್ ಕೈ ಬಿಡಬೇಕು ಮತ್ತು ಸರಕಾರ ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಶಾಸಕ ಹಾಗೂ ವಿಧಾ ನಸಭಾ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಹೇಳಿದ್ರು. ಈ ಕುರಿತು ಮಂಗಳೂರಿನ ಸಕ್ರ್ಯೂಟ್‍ಹೌಸ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಾಲಿನ ದರ

ಬಾರೆ ಹಾಕುವ ಕಾರ್ಯಕ್ರಮ : ಸಾವಿರ ವರ್ಷಗಳ ಇತಿಹಾಸವಿರುವ ಸಂಪ್ರದಾಯ

ಕಬೇತಿಗುತ್ತು ಮನೆತನದ ದುಗ್ಗಣ್ಣ ಬೈದರಿಂದ ಮುನ್ನಡೆಸಿಕೊಂಡು ಬರುತ್ತಿರುವ ಸಾವಿರ ವರ್ಷಗಳ ಇತಿಹಾಸವಿರುವ ತುಳುನಾಡಿನ ಬಾರೆ ಹಾಕುವ ಸಂಪ್ರದಾಯದ ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿಯವರು ಪಾಲ್ಗೊಂಡರು. ಸ್ವತ: ಕೃಷಿಯಲ್ಲಿ ತುಂಬಾ ಆಸಕ್ತಿ ಇರುವ, ಕೃಷಿ ಮನೆತನದ ಡಾ.ಭರತ್ ಶೆಟ್ಟಿಯವರು ಈ ಕುರಿತು ಮಾತನಾಡುತ್ತಾ, ಇಂದಿಗೂ ಈ ಸಂಪ್ರದಾಯವನ್ನು ಉಳಿಸಿ, ಆಚರಿಸಿಕೊಂಡು ಬರುತ್ತಿರುವ ಕುಟುಂಬಸ್ಥರನ್ನು ಅಭಿನಂದಿಸುವುದಾಗಿ ಹೇಳಿದರು. ಇಲ್ಲಿ 5 ಸಲ ಕೋಣಗಳನ್ನು

ತಿರುಪತಿಯ ಖ್ಯಾತಿಯ ವೆಂಕಟರಮಣ ದೇವಸ್ಥಾನ :ಲಕ್ಷದೀಪೋತ್ಸವ ಸಮಾಪನ

ಕಾರ್ಕಳ ತಿರುಪತಿ ಖ್ಯಾತಿಯ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಭ್ರಮದ ದೀಪುತ್ಸವ ನಡೆದು ಮಂಗಳವಾರ ಉತ್ಸವ ಭಕ್ತಿ ಭಾವಗಳಿಂದ ನಡೆದು ಲಕ್ಷ ದೀಪೋತ್ಸವ ಸಮಾಪನ ಗೊಂಡಿತು. ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ವೆಂಕಟರಮಣ ಮತ್ತು ಶ್ರೀನಿವಾಸ್ ದೇವರುಗಳನ್ನು ವಜ್ರತಟ್ಟೆಯಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಜಲಾವಗಹನಕ್ಕೆ ರಾಮಸಮುದ್ರಕ್ಕೆ ಕುಂಡಯ್ಯಲಾಯಿತು. ಅವಭೃಧೂತೃವಕೆ ತೆರಳುವ ಮುನ್ನ ರಸ್ತೆ

ಪಚ್ಚನಾಡಿ ದೇವಿ ನಗರ ಶ್ರೀ ದೇವಿ ಫ್ರೆಂಡ್ಸ್ ವೇದಿಕೆಯಲ್ಲಿ ಆಶ್ರಯ ಕಾಲನಿ ಅಂಗನವಾಡಿ ಕೇಂದ್ರದ ವತಿಯಿಂದ ವಿಜೃಂಭಣೆಯ ಮಕ್ಕಳ ದಿನಾಚರಣೆ

ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ದೇವಿನಗರ ಆಶ್ರಯ ಕಾಲನಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮವು ದಿನಾಂಕ 14-11-2022 ಸೋಮವಾರ ಬೆಳಿಗ್ಗೆ 10-00 ಗಂಟೆಗೆ ಅತಿಥಿಗಳಾಗಿ ಆಗಮಿಸಿದ್ದ ಸ್ಥಳೀಯ ಜನಪ್ರತಿನಿದಿ ಶ್ರೀಮತಿ ಸಂಗೀತ ನಾಯಕ್, ಅಂಗನವಾಡಿ ಮೇಲ್ವಿಚಾರಕರು ಶ್ರೀಮತಿ ಭವ್ಯ,ಸಮಾಜ ಸೇವಕ, ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಗೌರವಧ್ಯಕ್ಷರಾದ ಮೋಹನ್ ಪಚ್ಚನಾಡಿ, NGO ನಾಗರಾಜ್ ಬಜಾಲ್, NGO ಶ್ರೀಮತಿ ರೂಪ, ಶ್ರೀ ದೇವಿ ಫ್ರೆಂಡ್ಸ್

ಅಜ್ಜನ ದಯೆಯಿಂದ ಇನ್ನಷ್ಟು ಚಿತ್ರಗಳು ಸಿಗಲಿ : ನಟಿ ಸಪ್ತಮೀ ಗೌಡ

ಉಳ್ಳಾಲ: ತುಳುನಾಡಿ ಆರಾದ್ಯ ದೈವ ಕಲ್ಲಾಪು ಬುರ್ದುಗೋಳಿ ಕೊರಗಜ್ಜನ ಉದ್ಭವಶಿಲೆಯ ಆದಿತಳಕ್ಕೆ ಹಾಗೂ ಕುತ್ತಾರು ಕೊರಗಜ್ಜನ ಆದಿತಳಕ್ಕೆ ಭೇಟಿ ನೀಡಿ  ಕಾಂತಾರ ಚಲನ ಚಿತ್ರದ ನಾಯಕ ನಟಿ ಸಪ್ತಮೀ ಗೌಡ ಆಶೀರ್ವಾದ ಪಡೆದರು. ಈ ಸಂದರ್ಭ ಕಾಂತಾರ ಚಿತ್ರನಟ ಗುರು ಸನಿಲ್, ಕದ್ರಿ ಕ್ರಿಕೆಟಸ್೯ ಅಧ್ಯಕ್ಷ ಜಗದೀಶ್ ಕದ್ರಿ, ನಟಿ ತಾಯಿ ಶಾಂತಾ ಯು., ಕಲ್ಲಾಪು ಬುರ್ದುಗೋಳಿ ಕೊರಗಜ್ಜ ಸ್ಥಾನದ ವ್ಯವಸ್ಥಾಪನಾ ಸಮಿತಿಯ ವಿಶ್ವನಾಥ್ ನಾಯಕ್, ಕುತ್ತಾರು ಕೊರಗಜ್ಜನ ತಳದ ದೇವಿಪ್ರಸಾದ್

ಕಟೀಲು : ದೇವಿಯ ದರ್ಶನ ಪಡೆದ ನಟಿ ಸಪ್ತಮಿಗೌಡ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕಾಂತಾರ ಖ್ಯಾತಿಯ ನಟಿ ಸಪ್ತಮಿಗೌಡ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಇವರನ್ನು ದೇವಳದ ವತಿಯಿಂದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಗೌರವಿಸಿದರು.ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಪ್ತಮಿ ಗೌಡ ‘ಕಾಂತಾರ ಯಶಸಿಸ್ಸಿನ ಬಗ್ಗೆ ಹೆಮ್ಮೆ ಇದೆ, ತುಳುನಾಡಿನ ದೈವಾರಾಧನೆ ಬಗ್ಗೆ ನನಗೆ ಮೊದಲು ತಿಳಿದಿರಲಿಲ್ಲ, ಕಾಂತಾರಾ ಚಿತ್ರದ ನಂತರ ತಿಳಿದುಕೊಂಡೆ, ಬೇರೆ ಬೇರೆ ನಿನಿಮಾದ

ಉಡವೊಂದನ್ನು ಬೇಟೆಯಾಡಿದ ಬೃಹತ್ ಗಾತ್ರದ ಕಾಳಿಂಗ ಸರ್ಪ

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಕಡಂಬು ಎಂಬಲ್ಲಿ ಯುವ ಉದ್ಯಮಿ ಶಶಿರಾಜ್ ಶೆಟ್ಟಿ ಅವರ ಮನೆಯ ಹಿಂಭಾಗ ಉಡವೊಂದನ್ನು ಬೇಟೆಯಾಡಿದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿಯಲಾಯಿತು. ಉದ್ಯಮಿ ಶಶಿರಾಜ್ ಶೆಟ್ಟಿ ಯವರ ಮನೆಯ ಹಿಂಭಾಗದಲ್ಲಿ ದೊಡ್ಡ ಗಾತ್ರದ ಉಡವನ್ನು ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಬೇಟೆಯಾಡುವುದನ್ನು ಗಮನಿಸಿ ಸ್ನೇಕ್ ಅಶೋಕ್ ಕುಮಾರ್ ಲಾಯಿಲ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಆಗಮಿಸಿದ ಸ್ನೇಕ್ ಅಶೋಕ್ ಕುಮಾರ್ ಅವರು

ಮಂಗಳೂರಿನಲ್ಲಿ ‘ಕೆಂಗಣ್ಣು ಸಮಸ್ಯೆ

ಮಂಗಳೂರು : ಅವಿಭಜಿತ ಕರಾವಳಿ ಜಿಲ್ಲೆಯಲ್ಲಿ ಕಣ್ಣು ನೋವು ( ಕೆಂಗಣ್ಣು) ಸಮಸ್ಯೆ ಹೆಚ್ಚಾಗಿದ್ದು, ಕಣ್ಣು ಆಸ್ಪತ್ರೆಗಳಲ್ಲಿ ದಿನದಿಂದ ದಿನಕ್ಕೆ ಇಂತಹ ಸಮಸ್ಯೆಗಳ ಸರತಿ ಸಾಲು ಉದ್ದವಾಗುತ್ತಿದೆ. ಮಕ್ಕಳಾದರೆ ಶಾಲೆಗೆ ಬರಬೇಡಿ ದೊಡ್ಡವರಾದರೆ ಕಚೇರಿಗೆ ಬರಬೇಡಿ ಎಂದು ಬೇಡುವ ಸ್ಥಿತಿ ಉದ್ಭವಾಗಿದೆ. ಎಲ್ಲಕ್ಕೂ ಹವಾಮಾನ ವೈಪರೀತ್ಯವೇ ಕಾರಣ ಎನ್ನುವುದು ಆರೋಗ್ಯ ತಜ್ಞರ ಮಾತು.ಇದು ಕಣ್ಣು ನೋವು (ಮದ್ರಾಸ್‌ ಐ) ಬರುವ ಸಮಯವಲ್ಲ. ಹೆಚ್ಚಾಗಿ ಮಾನ್ಸೂನ್‌ ಸಮಯದಲ್ಲಿ

ಮಧುಮೇಹ ಆರೋಗ್ಯ ಜಾಗೃತಿ ಪ್ರದರ್ಶನ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರ ಹಾಗೂ ರೋಗಿಗಳ ಮಧುಮೇಹ ಸ್ವಯಂ ನಿರ್ವಹಣಾ ಡೈರಿ ಬಿಡುಗಡೆ

ಮಣಿಪಾಲ, 14 ನವೆಂಬರ್ 2022: ಪ್ರತಿ ವರ್ಷ ನವೆಂಬರ್ 14 ಅನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಅಂತಃಸ್ರಾವಶಾಸ್ತ್ರ ವಿಭಾಗವು 14ನೇ ನವೆಂಬರ್ 2022 ಸೋಮವಾರದಂದು ಬೃಹತ್ ಮಧುಮೇಹ ಆರೋಗ್ಯ ಜಾಗೃತಿ ಪ್ರದರ್ಶನ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಈ ವರ್ಷದ ದ್ಯೇಯ ವಾಕ್ಯ “ನಾಳೆಯನ್ನು ರಕ್ಷಿಸಲು ಮದುಮೇಹ ಶಿಕ್ಷಣ”. ವಿಶ್ವ ಮಧುಮೇಹ ದಿನವು ಮಧುಮೇಹವನ್ನು ಜಾಗತಿಕ

ಬಂಟ್ವಾಳ : ಸಿಡಿಲಿನ ಅಘಾತಕ್ಕೆ ಬಾಲಕನೋರ್ವ ಬಲಿ

ಬಂಟ್ವಾಳ : ಸಿಡಿಲಿನ ಅಘಾತಕ್ಕೆ ಬಾಲಕನೋರ್ವ ಬಲಿಯಾದ ಘಟನೆ ಬಂಟ್ವಾಳ ಕರಿಯಂಗಳ ಗ್ರಾಮದಲ್ಲಿ  ನಡೆದಿದೆ. ಸಾಣೂರುಪದವು ಗಣೇಶ್ ಆದಿದ್ರಾವಿಡ ಅವರ ಪುತ್ರ 16 ವರ್ಷದ ಕಾರ್ತಿಕ್ ಸಿಡಿಲು ಬಡಿದು ಮೃತಪಟ್ಟ ದುರ್ದೈವಿ.ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿನ್ನೆ ರಾತ್ರಿ ಭಾರೀ  ಮಳೆ ಸುರಿದಿದ್ದು ರಾತ್ರಿ ಮನೆಯಲ್ಲಿ ಇರುವ ಎಲ್ಲರೂ 9 ರ ಸುಮಾರಿಗೆ ಊಟ ಮುಗಿಸಿ ಮಲಗಿದ್ದು ಈ ವೇಳೆ  ಸಿಡಿಲು ಸಹಿತ ಮಳೆ ಬಂದು, ಮಲಗಿದ್ದವರಿಗೆ ಕರೆಂಟ್ ಶಾಕ್ ಹೊಡೆದ