ಅಜ್ಜನ ದಯೆಯಿಂದ ಇನ್ನಷ್ಟು ಚಿತ್ರಗಳು ಸಿಗಲಿ : ನಟಿ ಸಪ್ತಮೀ ಗೌಡ

ಉಳ್ಳಾಲ: ತುಳುನಾಡಿ ಆರಾದ್ಯ ದೈವ ಕಲ್ಲಾಪು ಬುರ್ದುಗೋಳಿ ಕೊರಗಜ್ಜನ ಉದ್ಭವಶಿಲೆಯ ಆದಿತಳಕ್ಕೆ ಹಾಗೂ ಕುತ್ತಾರು ಕೊರಗಜ್ಜನ ಆದಿತಳಕ್ಕೆ ಭೇಟಿ ನೀಡಿ  ಕಾಂತಾರ ಚಲನ ಚಿತ್ರದ ನಾಯಕ ನಟಿ ಸಪ್ತಮೀ ಗೌಡ ಆಶೀರ್ವಾದ ಪಡೆದರು.

ಈ ಸಂದರ್ಭ ಕಾಂತಾರ ಚಿತ್ರನಟ ಗುರು ಸನಿಲ್, ಕದ್ರಿ ಕ್ರಿಕೆಟಸ್೯ ಅಧ್ಯಕ್ಷ ಜಗದೀಶ್ ಕದ್ರಿ, ನಟಿ ತಾಯಿ ಶಾಂತಾ ಯು., ಕಲ್ಲಾಪು ಬುರ್ದುಗೋಳಿ ಕೊರಗಜ್ಜ ಸ್ಥಾನದ ವ್ಯವಸ್ಥಾಪನಾ ಸಮಿತಿಯ ವಿಶ್ವನಾಥ್ ನಾಯಕ್, ಕುತ್ತಾರು ಕೊರಗಜ್ಜನ ತಳದ ದೇವಿಪ್ರಸಾದ್ ಶೆಟ್ಟಿ, ಸಾಯಿ ಪರಿವಾರ್ ಟ್ರಸ್ಟಿಗಳಾದ ಪುರುಷೋತ್ತಮ್ ಕಲ್ಲಾಪು, ಪ್ರವೀಣ್ ಎಸ್ ಕುಂಪಲ, ಕಿಶೋರ್ ಡಿ.ಕೆ, ಪುರುಷೋತ್ತಮ್ ಶೆಟ್ಟಿ, ಪ್ರಶಾಂತ್ ಕಾಯಂಗಳ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಸಪ್ತಮಿ ಗೌಡ ಕಾಂತಾರ ಚಿತ್ರದ ಬಳಿಕ ದೈವದ ಮೇಲಿನ ನಂಬಿಕೆ ಹೆಚ್ಚಾಗಿದೆ.ಕೊರಗಜ್ಜನ ಬಗ್ಗೆ ಕೇಳಿ ತಿಳಿದಿದ್ದೆ, ಸಾನಿಧ್ಯವನ್ನು ನೋಡುವ ತವಕದಿಂದ ಬಂದಿದ್ದೇನೆ. ಅಜ್ಜನ ದಯೆಯಿಂದ ಇನ್ನಷ್ಟು ಚಿತ್ರಗಳು ಸಿಗಲಿ ಎಂದು ಪ್ರಾರ್ಥಿಸಿದ್ದೇನೆ. ಕಾಂತಾರ 50 ದಿನಗಳನ್ನು ದಾಟಿರುವುದು ದೈವದ ಕೃಪೆಯಿಂದ ಎಂದು ಪ್ರತಿಕ್ರೀಯಿಸಿದರು

Related Posts

Leave a Reply

Your email address will not be published.